ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ…!
ತಲೆ ಮೇಲೆ ತರಕಾರಿ ಬುಟ್ಟಿ ಹೊತ್ತ ಮಹಿಳೆಯರು!
ಚಳ್ಳಕೆರೆ : ಒಂದೆಡೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುವ ಬಗ್ಗೆ ಜನ ಉತ್ಸಹಕವಾಗಿದ್ದರೆ ಮತ್ತೋಂದೆಡೆ ಅಗತ್ಯ ವಸ್ತುಹಳ ಬೆಲೆ, ದಿನೇ ದಿನೇ, ಗಗನಕ್ಕೇರುತ್ತಿರುವ ಕಾರಣ ಕೇಂದ್ರ ಸರ್ಕಾರದ ವಿರುದ್ಧ ಎಲ್ಲೆಡೆ ರಾಜ್ಯದ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇನ್ನೂ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ನಗರದ ವಾಲ್ಮಿಕಿ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಎಂಬ ಘೋಷಣೆಗಳನ್ನು ಕೂಗಿದರು.
ಅಡುಗೆ ಎಣ್ಣೆ, ಸಿಲಿಂಡರ್, ತರಕಾರಿ ಹಾಗು ದಿನಸಿ ಪದಾರ್ಥಗಳು, ಕಬ್ಬಿಣ, ಸಿಮೇಂಟ್, ಡೀಸೆಲ್, ಪೆಟ್ರೋಲ್ ದರ ಏರಿಕೆ ಖಂಡಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ತಲೆಯ ಮೇಲೆ ತರಕಾರಿ ಬುಟ್ಟಿಗಳನ್ನು ಹೊತ್ತು ಪ್ರತಿಭಟನೆಯನ್ನು ನಡೆಸಿದರು.
ಕೇಂದ್ರ ಬಿಜೆಪಿ ಸರ್ಕಾರದಿಂದ ಬಡಜನರಿಗೆ ಬಹಳ ಅನ್ಯಾಯವಾಗುತ್ತಿದೆ, ಜನರು ಸಂಕಷ್ಟಕ್ಕೀಡಾಗಿದ್ದಾರೆ. ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಅಂತ ಪ್ರತಿಭಟನಾಕಾರರು ಕಿಡಿಕಾರಿದರು.
ಪೆಟ್ರೋಲ್, ಡೀಸೆಲ್ ಸೇರಿದಂತೆ ದಿನಸಿ ಪದಾರ್ಥ ಕೈಗೆಟುಕುತ್ತಿಲ್ಲ. ಬಡವರು, ಮಧ್ಯಮ ವರ್ಗದವರು ಜೀವನ ನಡೆಸುವುದು ಕಷ್ಟಸಾಧ್ಯವಾಗಿದೆ. ಇನ್ನಾದರೂ ಕೂಡ ಕೇಂದ್ರ ಸರ್ಕಾರ ಎಚ್ಚೇತ್ತುಕೊಳ್ಳಬೇಕು ಇಲ್ಲವಾದರೆ, ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಪ್ರತಿಭಟನಕಾರರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಈದೇ ಸಂಧರ್ಭದಲ್ಲಿ ಚಳ್ಳಕೆರೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೆ.ವೀರಭದ್ರಪ್ಪ, ಪರುಶುರಾಂಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶಶಿಧರ್, ಪರಿಶಿಷ್ಟ ಜಾತಿಯ ತಾಲೂಕು ಅಧ್ಯಕ್ಷ ಬಸವರಾಜ್, ಶಣ್ಮುಕಪ್ಪ, ಕೊರ್ಲಯ್ಯ, ಆರ್.ಪ್ರಸನ್ನಕುಮಾರ್, ಚೊಳೂರು ಪ್ರಕಾಶ್, ತಿಪ್ಪೇಸ್ವಾಮಿ, ವಿರೂಪಾಕ್ಷ, ಸಿಟಿ.ಶ್ರೀನಿವಾಸ್, ಡಿಕೆ.ಕಾಟಯ್ಯ, ರಂಗಸ್ವಾಮಿ, ಶಶಿಧರ್, ವೀರಭದ್ರಪ್ಪ, ಸೈಪುಲ್ಲಾ, ಇನ್ನೂ ಮಹಿಳಾ ಕಾರ್ಯಕರ್ತರಾದ ಲಕ್ಷ್ಮಿದೇವಿ, ಉಷಾ, ಭಾಗ್ಯಮ್ಮ , ಭಾಗ್ಯಲಕ್ಷ್ಮಿ, ಮಂಜುಳಾ, ರಾಜೇಶ್ವರ, ಭವಾನಿ , ಯಶೋದಮ್ಮ ಇನ್ನೂ ಇತರರು ಭಾಗಿಯಾಗಿದ್ದರು.