ಹಟ್ಟಿ ದೊರೆ ಮಲ್ಲಪ್ಪ ನಾಯಕ ಸ್ಮಾರಕಗಳ ಸಂರಕ್ಷಣೆಗೆ ವಾಲ್ಮೀಕಿ ಸಮುದಾಯದ ಮುಖಂಡರಿಂದ ಧರಣಿ ಸತ್ಯಾಗ್ರಹ ಪ್ರೊಫೆಸರ್ ಚಿನ್ನಯ್ಯ
ನಾಯಕನಹಟ್ಟಿ:: 77 ಜನ ಪಾಳೆಗಾರರಲ್ಲಿ ಚಿತ್ರದುರ್ಗದ ಐತಿಹಾಸಿಕ ಕೋಟೆಯ ಧೀಮಂತ ಅರಸರಾದ ದಿವಂಗತ ಹಟ್ಟಿ ಮಲ್ಲಪ್ಪ ನಾಯಕ. ಕಾಟೇ ಮಲ್ಲಪ್ಪ ನಾಯಕ, ಬೋಡಿ ಮಲ್ಲಪ್ಪ ನಾಯಕ, ಸಮಾಧಿಗಳಿಗಿದ್ದ ಸ್ಥಳವನ್ನು ಪಟ್ಟಣ ಪಂಚಾಯಿತಿ ಪರಿವರ್ತನೆ ಮಾಡಿ ಮಾರಾಟ ಮಾಡಿರುವುದನ್ನು ವಿರೋಧಿಸಿ ಪಟ್ಟಣದಲ್ಲಿ ಬುಧವಾರ ನಾಯಕ ಸಮುದಾಯದ ವತಿಯಿಂದ ನೂರಾರು ಜನರು ಬೃಹತ್ ಪ್ರತಿಭಟನೆ ನಡೆಸಿದರು,.
ಪ್ರೊಫೆಸರ್ ಪಿ ಎಂ ಚಿನ್ನಯ್ಯ ಮಾತನಾಡಿ ದೊರೆಗಳ ಮಟ್ಟಿಯಲ್ಲಿ ಸುಮಾರು 7ಕ್ಕೂ ಹೆಚ್ಚು ಸಮಾಧಿಗಳಿವೆ ಇವುಗಳು ಎರಡು ದೊಡ್ಡ ಪ್ರಮಾಣದಲ್ಲಿ ಗೋಚರಿಸುತ್ತವೆ ಇವುಗಳನ್ನು ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಿಸಲಾಗಿದೆ ಇಲ್ಲಿನ ಪ್ರದೇಶವನ್ನು ಆಳ್ವಿಕೆ ಮಾಡಿದ ಪಾಳೆಗಾರರ ಸಮಾಧಿಗಳಾಗಿವೆ ಮೂಲತಃ ಇದು ರೀ ಸರ್ವೆ ನಂಬರ್ 320 ನಂಬರ್ ನಲ್ಲಿ 22 ಎಕರೆ ಜಮೀನಿತ್ತು, ಆದರೆ 1969ರಲ್ಲಿ ಐದ ಎಕರೆ 22 ಗುಂಟೆ ಹೊಂದಿತ್ತು 1972 ರಲ್ಲಿ 5 ಗುಂಟೆ ಜಮೀನನ್ನ ಬೇರೆಬೇರೆ ಜನರಿಗೆ ವಿಲೇವಾರಿ ಮಾಡಲಾಗಿದೆ ಇದನ್ನು ಹುಲ್ಬನ್ನಿ ಕರಾಬು ಎಂದು ಪಹಣಿಯಲ್ಲಿ ನಮೂದಿಸಲಾಗಿದೆ ಇದರಲ್ಲಿ ಪ್ರದೇಶವನ್ನು ಪರಿಶಿಷ್ಟ ಜಾತಿ ಜನರಿಗೆ ದರಕಾಸ್ತು ನೀಡಲಾಗಿದೆ. ಆದರೆ ಇದೀಗ ಈ ಪ್ರದೇಶವನ್ನ 2023ರಲ್ಲಿ ಭೂಪರವರ್ತನೆ ಮಾಡಿ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಲಾಗಿದೆ ಇಂತಹ ಪುರಾತನ ಇತಿಹಾಸವನ್ನು ಹೊಂದಿರುವ ಪ್ರದೇಶವನ್ನ ಭೂ ಪರಿವರ್ತನೆ ಮಾಡಿ ನಿವೇಶನಗಳನ್ನಾಗಿ ಮಾರಾಟ ಮಾಡಿರುವುದನ್ನು ತಕ್ಷಣ ನಿಲ್ಲಿಸಬೇಕು ಸದರಿ ಪ್ರದೇಶವನ್ನ ದೊರೆಗಳ ಸಂತತಿಯವರ ಸಮಾಧಿಗಳಿವೆ ಇಂತಹ ಸ್ಥಳವನ್ನು ಸರ್ಕಾರ ತನ್ನ ವಶಕ್ಕೆ ಪಡೆದು ಪುರತತ್ವ ಇಲಾಖೆಗೆ ನೀಡಬೇಕು ನಮ್ಮ ಹೋರಾಟ ಯಾವುದೇ ವ್ಯಕ್ತಿ ಅಥವಾ ಸಮುದಾಯದ ವಿರುದ್ಧವಲ್ಲ ಎಂದರು.
ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಟೇಲ್ ಜಿ ಎಂ ತಿಪ್ಪೇಸ್ವಾಮಿ. ಒಟ್ಟು ಏಳು ಜನ ಅರಸರ ಸಮಾಧಿ ನಮ್ಮ ನಾಯಕನಹಟ್ಟಿ ಭಾಗದ ದೊರೆಗಳ ಮಡ್ಡಿಯಲ್ಲಿವೆ ಅವುಗಳಲ್ಲಿ ನಾಲ್ಕು ಸ್ಮಾರಕಗಳು ಕಣ್ಮರೆಯಾಗಿವೆ ಪ್ರಾಚೀನ ಸ್ಮಾರಕಗಳ ರಕ್ಷಣೆ ಮಾಡಬೇಕಾಗಿದ್ದ ಇಲಾಖೆ ಹಾಗು ಜನರು ಇದರ ಬಗ್ಗೆ ಯಾವುದೇ ಜವಾಬ್ದಾರಿ ವಹಿಸಿಕೊಳ್ಳುತ್ತಿಲ್ಲ ಉಳಿದ ಸ್ಮಾರಕಗಳಿಗಾದರೂ ರಕ್ಷಣೆ ಮಾಡುವಂತಿ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ ಮುಂದೆ ಬರಬೇಕು ಎಂದು ಆಗ್ರಿಸಿದರು.
ಧರಣಿ ಸತ್ಯಾಗ್ರಹದಲ್ಲಿ ಸಮುದಾಯದ ಹಿರಿಯ ಮುಖಂಡ ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಾಟೀಲ್ ಜಿ ಎಂ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಪಾಟೀಲ್ ಜಿ ತಿಪ್ಪೇಸ್ವಾಮಿ, ಮದಕರಿ ನಾಯಕ ವಿದ್ಯ ಸಂಸ್ಥೆಯ ಚಂದ್ರಣ್ಣ ನೇರಲಗುಂಟೆ, ನಿರ್ದೇಶಕ ಎಸ್ ಓಬಣ್ಣ ಬೈಯಣ್ಣ, ಹನುಮಣ್ಣ, ಮಲ್ಲೂರಹಳ್ಳಿ, ಬೈಯಣ್ಣ ನೇರಲಗುಂಟೆ, ಮಲ್ಲೂರ ಹಟ್ಟಿ ತಿಪ್ಪೇಸ್ವಾಮಿ ರೇಖಲಗೆರೆ ಚಿನ್ನಯ್ಯ, ಎಸ್ ಬಸವರಾಜ್, ಬಂಡೆ ಕಪಿಲೆ ಓಬಣ್ಣ, ಜಿ ಬಿ ಮುದಿಯಪ್ಪ, ಬೋರಸ್ವಾಮಿ, ಟಿ ಬಸಪ್ಪ ನಾಯಕ, ನಲಗೇತನಹಟ್ಟಿ ಜಿ ವೈ ತಿಪ್ಪೇಸ್ವಾಮಿ, ಏಜೆಂಟ್ರುಪಾಲಯ್ಯ, ವಕೀಲ ನಾಗೇಂದ್ರಪ್ಪ, ಮಲ್ಲೂರಹಳ್ಳಿ ಬಿ ಕಾಟಯ್ಯ ಎನ್ ದೇವರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಾ ಕಾಟಂಲಿಂಗಯ್ಯ, ಚೌಳಕೆರೆ ಸಿ ಬಿ ಮೋಹನ್, ನಲಗೇತನಹಟ್ಟಿ ಪಿ ಎನ್ ಮುತ್ತಯ್ಯ, ಗೌಡಗೆರೆ ಟಿ ರಂಗಪ್ಪ, ಹೋಬಳಿಯ ಸೇರಿದಂತೆ ಸಮಸ್ತ ನಾಯಕ ಸಮುದಾಯದ ಮುಖಂಡರು ಯುವಕರು ಉಪಸ್ಥಿತರಿದ್ದರು