ಇದು ನಿಜಕ್ಕೂ ಶೌಚನೀಯ
ಹೌದು ಇಡೀ ದೇಶದಲ್ಲಿ ಸ್ವಚ್ಛತೆಯ ಅಭಿಯಾನ ನಡೆಯುತ್ತಲೇ ಇದೆ. ಆದರೆ ಇಡೀ ದೇಶವನ್ನ ಸ್ವಚ್ಛತೆಯಿಂದ ಕಾಪಾಡುವಂತೆ ಬೊಬ್ಬೆ ಹೊಡೆಯುವ ಕೇಂದ್ರ, ಮತ್ತು ರಾಜ್ಯ ಸರ್ಕಾರಗಳು ಕೇವಲ ಮಾತಿನಿಂದಷ್ಟೇ ಸ್ವಚ್ಛತೆ ಎಂಬುದು ಕಾಣುವಂತಾಗಿದೆ.
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪಟ್ಟಣಕ್ಕೆ ಪ್ರತಿ ದಿನವೂ ಸಾವಿರಾರು ಭಕ್ತಾಧಿಗಳು ಶ್ರೀ ಗುರು ತಿಪ್ಪೇರುದ್ರಸ್ವಾಮಿ ದರ್ಶನಕ್ಕೆ ಬರುತ್ತಾರೆ. ಇಂತಹ ಪುಣ್ಯ ಕ್ಷೇತ್ರದಲ್ಲಿನ ಕಸ ವಿಲೇವಾರಿಗೆ ಸೂಕ್ತ ಘಟಕ ಇಲ್ಲವೆಂದರೆ ನಿಜಕ್ಕೂ ಶೌಚನೀಯ…!!
ಇನ್ನೂ ಕಸವನ್ನ ಗ್ರಾಮಾಂತರ ಪ್ರದೇಶದ ರಸ್ತೆ ಪಕ್ಕ ಸುರಿಯುತ್ತಿರುವ ಪಟ್ಟಣ ಪಂಚಾಯತಿ ವಿರುದ್ದ ಸಾರ್ವಜನಿಕರು ಇಡಿ ಶಾಪ ಹಾಕುತ್ತ ಇದ್ದಾರೆ.
” ಸ್ವಚ್ಛ ಭಾರತ್ ಮಿಷಿನ್ ಅಡಿ ಸ್ವಚ್ಛತೆಯತ್ತ ನಮ್ಮ ಚಿತ್ತ ” ಅಂತಾ ಸರ್ಕಾರದ ಅಧಿಕಾರಿಗಳು ಹೇಳಿಕೊಳ್ಳಲು ಮಾತ್ರ ಸೀಮಿತವಾದಂತೆ ಕಾಣುತ್ತದೆ
ನಾಯಕನಹಟ್ಟಿ ಪಟ್ಟಣದಲ್ಲಿ ಪಟ್ಟಣ ಪಂಚಾಯತಿಯು 2015 ರಿಂದ ಸ್ಥಾಪನೆ ಆಗಿದೆ. ಅಂದಿನಿAದ ಇಂದಿನವರೆಗೆ ಪಟ್ಟಣದ ಕಸ,ತ್ಯಾಜ್ಯ ವಿಲೇವಾರಿ ಮಾಡಲು ಘಟಕವಿಲ್ಲದೆ ರಸ್ತೆ ಬದಿಯಲ್ಲಿ ಹಾಕಿ ಸ್ವಚ್ಛತೆಯನ್ನು, ಪರಿಸರವನ್ನು ಹಾಳು ಮಾಡುವ ದೃಶ್ಯಗಳು ಎಲ್ಲೆಡೆ ಕಂಡು ಬರುತ್ತಿವೆ, ಇನ್ನೂ ಪಟ್ಟಣದಿಂದ ತೊರೆಕೋಲಮನಹಳ್ಳಿಯ ಮಾರ್ಗವಾಗಿ ತೆರಳುವ ರಸ್ತೆಯಲ್ಲಿ ನಾಡಕಚೇರಿ, ಸಮುದಾಯ ಆರೋಗ್ಯ ಕೇಂದ್ರ, ಪರಿವೀಕ್ಷಣ ಮಂದಿರ, ಕೃಷಿ ಇಲಾಖೆಗಳಿರುವ ಈ ಪ್ರದೇಶದಲ್ಲಿ ಪ್ರತಿ ದಿನವೂ ಸಾವಿರಾರು ಜನರು ಓಡಾಡುತ್ತಾರೆ. ಈ ರಸ್ತೆಯ ಎಡಬದಿಯಲ್ಲಿ ಪಟ್ಟಣದ ಕಸ ತಂದು ಸುರಿಯಲಾಗುತ್ತದೆ. ಇಲ್ಲಿ ರಾಶಿ ರಾಶಿ ಕಸ, ತ್ಯಾಜ್ಯ ಬಿದ್ದಿದೆ. ದಿನ ಬೆಳಗಾದರೆ ಈ ರಸ್ತೆಯಲ್ಲಿ ರೈತರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನರು ಓಡಾಡುತ್ತಿದ್ದು, ಈ ರಸ್ತೆಯಲ್ಲಿ ವಿಪರಿತ ಗೊಬ್ಬುವಾಸನೆಯಿಂದ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಇಲ್ಲಿನ ಪರಿಸರ ಗೊಬ್ಬೆದ್ದು ಹೋಗಿದ್ದು ದುರ್ನಾತ ಬೀರುತ್ತಿದೆ.
ಇನ್ನೂ ಕಸವಿಲೇವಾರಿ ಘಟಕಕ್ಕೆ ಸರ್ಕಾರದಿಂದ ಅನುಮೋದನೆ ಸಿಕ್ಕಿಲ್ಲ. ಅನುಮತಿ ದೊರೆತ ಕೂಡಲೇ ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡಲಾಗುತ್ತದೆ ಎನ್ನುತ್ತಾರೆ ನಾಯಕನಹಟ್ಟಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು.
ಈ ಪುಣ್ಯಕ್ಷೇತ್ರ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಕ್ಕೆ ಸೇರಿದೆ. ಈ ಕ್ಷೇತ್ರದ ಶಾಸಕರು ಎನ್.ವೈ.ಗೋಪಾಲಕೃಷ್ಣ ಅವರಿದ್ದಾರೆ. ಕಸ ವಿಲೇವಾರಿ ಘಟಕ ಸ್ಥಾಪನೆಗೆ ಸ್ಥಳ ಗುರುತಿಸಿ ಅನುಮತಿ ಕೋರಿ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆ ಇನ್ನೂ ಕೂಡ ರವಾನೆಯಾಗದೆ ಇರುವುದು ಗೋಚರಿಸುತ್ತಿದೆ, ಅದರಂತೆ ಕ್ಷೇತ್ರದ ನೂತನ ಶಾಸಕ ಎನ್.ವೈ ಗೋಪಾಲಕೃಷ್ಣ ಈ ಪ್ರಸ್ತಾವನೆಗೆ ಸರ್ಕಾರದಿಂದ ಅನುಮೋದನೆ ಕೊಡಿಸಲು ಮುಂದಾಗುವರೋ ಕಾದು ನೋಡಬೇಕಿದೆ.