ಚಳ್ಳಕೆರೆ : ಅನಾದಿಕಾಲದಿಂದಲೂ ಗ್ರಾಮದಲ್ಲಿ ಒಂದೇ ತಾಯಿಯ ಮಕ್ಕಳಂತೆ ಮನೆಗಳಲ್ಲಿ ಹಾಗೂ ಜಮೀನುಗಳಲ್ಲಿ ಓಟ್ಟೊಟ್ಟಿಗೆ ಹೋಗುವ ರೈತಾಪಿ ವರ್ಗ ಇಂದು ಆಧುನಿಕ ಜಗತ್ತಿನಲ್ಲಿ ಮನುಷ್ಯನ ದುರಾಸೆಯಿಂದ ಜಮೀನುಗಳಲ್ಲಿ ಇದ್ದ ವಿಶಾಲವಾದ ರಸ್ತೆ(ಬದು)ಗಳು ಇಂದು ಒತ್ತುವರಿಯಿಂದ ಕಣ್ಮರೆಯಾಗಿವೆ
ಇನ್ನೂ ಅಣ್ಣಾ ತಮ್ಮಂದಿರು ಎಂದು ಜೀವನ ನಡೆಸುವವರ ಮದ್ಯೆ ಒತ್ತುವರಿ ಎಂಬ ಭೂಮಿ ದುರಾಸೆಯಿಂದ ದಿನ ನಿತ್ಯ ಗಲಾಟೆಗಳು ಜರುಗುತ್ತಿವೆ ಈಗೇ ಗ್ರಾಮೀಣ ಜೀವನ ದುರಸ್ಥಿರವಾಗಿದೆ.
ಅದರಂತೆ ತಾಲೂಕಿನ ತಿಮ್ಮಣ್ಣಹಳ್ಳಿಯ ಗ್ರಾಮದಲ್ಲಿ ಅನಾದಿಕಾಲದಿಂದಲೂ ರಸ್ತೆ (ಬದು) ಇದ್ದದ್ದು ಈಗ ಕಣ್ಮರೆಯಾಗಿದೆ, ಇನ್ನೂ ಇದ್ದ ಕಾಲು ದಾರಿ ಕೂಡ ಒತ್ತುವರಿಯಾಗಿ ಮುಂದಿನ ಜಮೀನಿಗೆ ಹೋಗಲು ಹಾಗದೆ ರೈತರು ಕೃಷಿ ಚಟುವಟಿಕೆಗಳಿಗೆ ತುಂಬಾ ತೊಂದರೆಯಾಗಿದೆ
ಈಗೇ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಕಾರ್ಯ ಚುರುಕುಗೊಳಿಸುವಲ್ಲಿ ರೈತರು ಒಂದೆಡೆ ಉತ್ಸುಹಕತೆ ತೋರಿದರೆ ತಮ್ಮ ಜಮೀನುಗಳಿಗೆ ತೆರಳಲು ಹಾಗದೆ ಅರಹಾಸ ಪಡುವಂತಾಗಿದೆ. ಈಗೇ ರೈತರಿಗೆ ತಮ್ಮ ಜಮೀನುಗಳಿಗೆ ಹೊಗಲು ರೂಡಿಗತ ದಾರಿ, ನಕಾಶೆ ಕಂಡ ದಾರಿ, ಕಾಲು ದಾರಿ ಈಗೇ ವಿವಿಧ ಆಯಾಮಗಳಲ್ಲಿ ರೈತರ ಜಮೀನುಗಳಿಗೆ ದಾರಿಗಳು ಸರಕಾರದಿಂದ ಅನುಮೊದನೆಗೆ ಒಳಪಟ್ಟು ಪ್ರತಿಯೊಬ್ಬರ ರೈತನ ಜಮೀನುಗಳಿಗೆ ದಾರಿ ಅನುವು ಮಾಡುವ ಸೌಜನ್ಯ ಪೂರ್ವಕ ಮನವಿಯನ್ನು ರೈತರು ತಹಶೀಲ್ದಾರ್ ಗೆ ಮಾಡಿದ್ದಾರೆ.