ಚಳ್ಳಕೆರೆ : ಬುಡಕಟ್ಟು ಸಂಪ್ರದಾಯವಾದ ಚಳ್ಳಕೆರೆ ತಾಲೂಕಿನಲ್ಲಿ ಕುರಿ ಮೇಕೆ ಗೋವುಗಳ ಸಂರಕ್ಷಣೆಯೇ ಮೊದಲ ಆದ್ಯತೆ ಇಂತಹ ತಾಲೂಕಿನಲ್ಲಿ ಕುರಿಗಳ ಮಾರಣಹೋಮ ನಡೆದುಹೊಗಿದೆ.
ಹೌದು ನಿಜಕ್ಕೂ ಮನಕಲುಕವ ದೃಶ್ಯಗಳು ಕಾಣಸಿಗುತ್ತಿವೆ, ಕೇವಲ ಒಂದು ತಾಸಿನಲ್ಲೆ ಸುಮಾರು 30 ಕುರಿಮರಿಗಳನ್ನು ಕಚ್ಚಿ ಕಚ್ಚಿ ಕೊಂದ ಬೀದಿ ನಾಯಿಗಳು ಮರಣ ಮೃಂದಗ ಮಾಡಿದ್ದಾವೆ. ಈ ಬೀದಿ ನಾಯಿಗಳ ಹಾವಳಿಯಿಂದ ಕುರಿಗಾಯಿ ಮಂಹತೇಶ್ ಕಣ್ಣಿನರಿನಲ್ಲಿ ಕೈ ತೊಳೆಯುತ್ತಿದ್ದಾನೆ
ಈ ಘಟನೆ ಚಳ್ಳಕೆರೆ ತಾಲೂಕಿನ ಚಿತ್ರನಾಯಕನಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ, ಚಿಕ್ಕಮ್ಮನಹಳ್ಳಿಯಿಂದ ವಲಸೆ ಹೊಗುವ ಕುರಿಗಾಯಿ ಮೇವು ನೀರಿಗಾಗಿ ಹಳ್ಳಿ ಹಳ್ಳಿ ತಿರುಗುವು ಇವರು ತಾಲೂಕಿನ ಚಿತ್ರನಾಯಕನಹಳ್ಳಿಯ ಹೊರವಲಯದಲ್ಲಿ ಕುರಿ ಷೆಡ್ದು ಹಾಕಿಕೊಂಡದಿರುತ್ತಾರೆ.
ಆದರೆ ಇಂದು ದೊಡ್ಡ ಕುರಿಗಳು ಮೇಯಲು ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ,

ಚಿತ್ರನಾಯಕನಹಳ್ಳಿಯ ಎಂಟು ಬೀದಿ ನಾಯಿಗಳು ಶೆಡ್ಡಿನಲ್ಲಿರುವ 40 ಕುರಿ ಮರಿಗಳನ್ನು ಕಚ್ಚಿ ಕೊಂದಿದ್ದಾವೆ, ಬೀದಿ ನಾಯಿಗಳ ಹಾವಳಿಯಿಂದ ಕುರಿ ಮರಿಗಳು ಸಾವನ್ನಪ್ಪಿವೆ,
ಕುರಿ ಮಾಲಿಕ ಮೂಲತಃ ಚಿಕ್ಕಮ್ಮನಹಳ್ಳಿಯ ವಾಸಿಯಾಗಿದ್ದು ಕುರಿಗಳ ಮೇವಿಗಾಗಿ ಚಿತ್ರನಾಯಕನಹಳ್ಳಿಗೆ ಮೇಯಿಸಲು ಹೋಗಿದ್ದರು,
ಕುರಿ ಮಾಲಿಕ ಮಹಾಂತೇಶ್ ಹಾಗೂ ಬೋರಯ್ಯ ಅಣ್ಣ ತಮ್ಮಂದಿರು ಕಣ್ಣೀರು ಸುರಿಸುತ್ತಿದ್ದಾರೆ, ಈ ಪ್ರಕರಣ ಇಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ನಡೆದಿದೆ ಎಂದು ಕುರಿ ಮಾಲಿಕ ಮಾಂತೇಶ್ ಹೇಳಿದರು,
ಈ ಪ್ರಕರಣವನ್ನು ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

About The Author

Namma Challakere Local News
error: Content is protected !!