ಚಳ್ಳಕೆರೆ : ಶಾಸಕರ ಭವನದಲ್ಲಿ ಡಾ. ಜಗಜೀವನ್ ರಾವ್ ರವರ 37ನೇ ಪುಣ್ಯ ಸ್ಮರಣೆ

ಚಳ್ಳಕೆರೆ : ನಗರದ ಶಾಸಕರ ಭವನದಲ್ಲಿ ಆಯೋಜಿಸಿರುವ ಡಾ. ಜಗಜೀವನ್ ರಾವ್ ರವರ 37ನೇ ಪುಣ್ಯ ಸ್ಮರಣೆ ಅಂಗವಾಗಿ ಕಾಂಗ್ರೇಸ್ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಪ್ರಣಾಮವನ್ನು ಸಲ್ಲಿಸಿ ಮಾತನಾಡಿದರು,
ಮಹಾನ್ ಸ್ವತಂತ್ರ ಹೋರಾಟಗಾರ ಹಸಿರು ಕ್ರಾಂತಿಯ ಹರಿಕಾರ ಅಸ್ಪೃಶ್ಯತೆಯನ್ನು ಕಿತ್ತು ಹಾಕಿ ರಾಷ್ಟ್ರದ ಜನತೆಯನ್ನು ಸಮಾನತೆ ತೋರಿದ ಏಕೈಕ ವ್ಯಕ್ತಿ ಮಹಾನ್ ಚೇತನ ಡಾಕ್ಟರ್ ಜಗಜೀವನ್ ರಾವ್ ರವರು ದೀನದಲಿತರಿಗೆ ಶೋಷಿತ ವರ್ಗದವರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಸಾಕಷ್ಟು ಸಹಾಯ ಸಹಕಾರವನ್ನು ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಹೇಳಿದರು.
ಇನ್ನೂ ಡಿಕೆ ಮೊಹಮ್ಮದ್ ಅನ್ವರ್ ಭಾಷಾ ಮಾತನಾಡಿ, ಹಸಿರು ಕ್ರಾಂತಿಯ ಹರಿಕಾರ ಶೋಷಿತರು ದಮನಿತರ ಹಾಗೂ ಸ್ವತಂತ್ರಕ್ಕಾಗಿ ಹೋರಾಡಿದ ಮಹನೀಯ ಡಾಕ್ಟರ್ ಜಗಜೀವನ್ ರಾಮ್ , ಇವರು ಬಿಹಾರದಲ್ಲಿ ಜನಿಸಿ ಬಡತನದಲ್ಲಿ ಹುಟ್ಟಿ ತಮ್ಮ ಶ್ರಮದಿಂದ ಲೇಬರ್ ಮಿನಿಸ್ಟರ್ ಆಗಿ ಭಾರತದ ಉಪ ಪ್ರಧಾನಿಯಾಗಿ ದೇಶಕ್ಕೋಸ್ಕರ ಹಗಲಿರುಳು ಶ್ರಮಿಸಿದ ಧೀಮಂತ ನಾಯಕ ಡಾಕ್ಟರ್ ಜಗಜೀವನ್ ರಾವ್ ಇವರ ಆದರ್ಶಗಳನ್ನು ನಾವು ನೀವೆಲ್ಲ ತಿಳಿದು ಮುಂದಿನ ದಿನಗಳಲ್ಲಿ ಅವರು ಹಾಕಿಕೊಟ್ಟಿರುವ ಮಾರ್ಗದರ್ಶನದಂತೆ ನಡೆಯಬೇಕು ಎಂದರು,
ಇನ್ನು ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಬೋರಣ್ಣ ವಿರುಪಾಕ್ಷಿ ದಳವಾಗಿ ಮೂರ್ತಿ ಮಾರ್ಥಂಡಪ್ಪ ಭೀಮಣ್ಣ ಸೈಫ್ ಉಲ್ಲಾ ಮಹಿಳಾ ಕಾಂಗ್ರೆಸ್ ಮುಖಂಡರಾದ ಮಂಜಕ್ಕ ರಾಜಕ್ಕ ಸೇರಿದಂತೆ ಅನೇಕ ಕಾರ್ಯಕರ್ತರು ಹಾಜರಿದ್ದರು

About The Author

Namma Challakere Local News
error: Content is protected !!