ಚಿತ್ರದುರ್ಗ : ಹೊಟ್ಟೆಯಲ್ಲಿ ಹೋದ ವಿಷ ಒಬ್ಬರನ್ನು ಬಲಿ ಪಡೆದರೆ, ಕಿವಿಯಲ್ಲಿ ಹೋದ ವಿಷ ಸಂಬAಧವನ್ನೇ ಸಾಯಿಸುತ್ತದೆ. ಹಾಗಾಗಿ ಸಂಸಾರ ಜೀವನ ಪರಸ್ಪರ ಸಾಮರಸ್ಯದಿಂದ ಸಾಗಬೇಕಿದೆ ಎಂದು ಶ್ರೀ ಬಸವಪ್ರಭು ಸ್ವಾಮಿಗಳು ಹೇಳಿದರು.
ಶ್ರೀ ಮುರುಘರಾಜೇಂದ್ರ ಮಠದಲ್ಲಿ ಬುಧವಾರ ನಡೆದ ಮೂವತ್ಮೂರನೆ ವರ್ಷದ ಏಳನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಗಳು, ಆಷಾಢ ಮಾಸದಲ್ಲಿ 8 ಜೋಡಿ ವಿವಾಹವಾಗುತ್ತಿರುವುದು ಸಮಾಜ ನಿಧಾನವಾಗಿ ಮೂಢನಂಬಿಕೆಗಳಿಗೆ ಕಡಿವಾಣ ಹಾಕಿ ಅವುಗಳಿಂದ ಹೊರಬರುತ್ತಿರುವ ಸೂಚನೆಯಾಗಿದೆ ಎಂದರು.
ಸAಬAಧಗಳು ಒಪ್ಪಿಗೆ ಸೂಚಿಸಿದರೆ ಅದುವೆ ಶುಭ ಸಂದರ್ಭ. ಎಲ್ಲ ಕಾಲದಲ್ಲಿಯೂ ಇಲ್ಲಿ ಮದುವೆಗಳು ನಡೆಯುತ್ತಿವೆ. ಹಾಗಾಗಿ ಎಲ್ಲ ಕಾಲವೂ ಒಳ್ಳೆಯದೇ ಆಗಿದೆ. ಕಾಲದಲ್ಲಿ ಕೆಟ್ಟದ್ದು ಒಳ್ಳೆಯದು ಇಲ್ಲ. ಒಳಿತನ್ನು ಮಾಡುವ ಒಳ್ಳೆಯದನ್ನು ಬಯಸುವ ಪ್ರತಿಕ್ಷಣವೂ ಉತ್ತಮವಾದುದು. ವರನ ಆಸ್ತಿ ಅಂತಸ್ತು ನೋಡದೇ ಆತನ ಗುಣ ಸ್ವಭಾವವನ್ನು ನೋಡಬೇಕೆಂದು ತಿಳಿಸಿದರು.
ಸಮ್ಮುಖ ವಹಿಸಿದ್ದ ಜೇವರ್ಗಿಯ ಶ್ರೀ ಮರುಳಶಂಕರದೇವರ ಮಠದ ಶ್ರೀ ಸಿದ್ಧಬಸವ ಕಬೀರ ಸ್ವಾಮಿಗಳು ಮಾತನಾಡಿ, ಉಳ್ಳವರು ಇಲ್ಲದವರ ಮತ್ತು ಬಡವರ ಕಲ್ಯಾಣ ಮಹೋತ್ಸವ ಶ್ರೀಮಠದಲ್ಲಿ ನಡೆಯುತ್ತಿದೆ. ಇದು ಅತ್ಯಂತ ಸಂತಸ ತಂದಿದೆ. ಇಂತಹ ಮಹತ್ಕಾರ್ಯಗಳನ್ನು ಮುರುಘಾಮಠವು ಮಾಡುತ್ತಿರುವುದು ಹೆಮ್ಮೆಪಡುವಂಥದ್ದಾಗಿದೆ. ಸಾಮೂಹಿಕ ಕಲ್ಯಾಣ ಮಹೋತ್ಸವ ಎಂಬುದರ ಬಗ್ಗೆ ಕಳೆದ ವರ್ಷಗಳಲ್ಲಿ ಕೀಳರಿಮೆ ಇತ್ತು. ಈಗ ಅದು ಇಲ್ಲದಂತಾಗಿದೆ. ಅದನ್ನು ಪೂಜ್ಯರು ಮಾಡಿದ್ದಾರೆಂದರು.
ಸಮ್ಮುಖ ವಹಿಸಿದ್ದ ಹುಬ್ಬಳ್ಳಿಯ ಡಾ. ಚಂದ್ರಶೇಖರ ಶಿವಯೋಗಿ ಸ್ವಾಮಿಗಳು ಮಾತನಾಡಿ, ಒಬ್ಬರೇ ಮುಕ್ತಿ ಹೊಂದಲು ಸಾಧ್ಯವಿಲ್ಲ. ದಂಪತಿಗಳು ಅರ್ಥ ಮಾಡಿಕೊಂಡು ನಡೆಯಬೇಕು. ಮದುವೆಯಾಗಬೇಕಾದವರಲ್ಲಿ ಮನಸ್ಸು, ಬುದ್ಧಿ, ಆಚಾರ ವಿಚಾರಗಳು ಕೂಡಬೇಕು. ಜನರ ಭಾವನೆಗಳು ಶುದ್ಧವಾಗಬೇಕು. ಆದರೆ ವಿವಿಧ ರೀಯ ತಲೆಗಳು ಇವೆ. ನಾವು ಸ್ವತಂತ್ರವಾದ ತಲೆಗಳನ್ನು ತಯಾರು ಮಾಡಬೇಕಿದೆ. ಅದನ್ನೆ ಬಸವಾದಿ ಶರಣರು ಹೇಳಿದ್ದಾರೆ. ಸಮಸಮಾಜ ನಿರ್ಮಾಣದ ಅಗತ್ಯತೆ ಇದೆ. ಬದುಕು ಕೂಡ ನಾಲ್ಕು ದಿನದ್ದು. ಅದನ್ನು ಚೆನ್ನಾಗಿ ದುಡಿಸಿಕೊಳ್ಳಬೇಕು. ಒಳ್ಳೆಯದಕ್ಕೆ ಬಳಕೆಯಾಗಬೇಕೆಂದು ನುಡಿದರು.
ಕಾರ್ಯಕ್ರಮದಲ್ಲಿ 8 ಜೋಡಿಗಳ ವಿವಾಹ ನೆರವೇರಿತು. ನಿಪ್ಪಾಣಿಯ ಶ್ರೀ ಬಸವಮಲ್ಲಿಕಾರ್ಜುನ ಸ್ವಾಮಿಗಳು ಭಾಗವಹಿಸಿದ್ದರು. ಎಂ.ಸಿ.ಕೆ.ಎಸ್. ಫೌಂಡೇಶನ್ ವತಿಯಿಂದು ವಧು-ವರರಿಗೆ ಬಟ್ಟೆ-ಮಾಂಗಲ್ಯವನ್ನು ವಿತರಿಸಲಾಯಿತು.
ಜಮುರಾ ಕಲಾವಿದರು ಪ್ರಾರ್ಥಿಸಿದರು. ಜ್ಞಾನಮೂರ್ತಿ ಸ್ವಾಗತಿಸಿದರು.
ಪೂರ್ವಜರ