ಚಳ್ಳಕೆರೆ : ಬಯಲು ಸೀಮೆ ಎಂಬ ಹಣೆಪಟ್ಟಿ ಹೊಂದಿರುವ ಚಳ್ಳಕೆರೆ ತಾಲೂಕು ಮುಂದಿನ ದಿನಗಳಲ್ಲಿ ಮಲೆನಾಡ ಪ್ರದೇಶವಾಗಿ ಮಾರ್ಪಡು ಹೊಂದಲು ಅರಣ್ಯ ಇಲಾಖೆ ಶ್ರಮ ಮುಖ್ಯವಾಗಿದೆ ಎಂದು ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಗೌರವಧ್ಯಕ್ಷ ಡಿ.ನಾಗಪ್ಪ ಹೇಳಿದರು.

ಶಾಲಾ ಆವರಣದಲ್ಲಿ ಅರಣ್ಯ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡ ಕೋಟಿ ವೃಕ್ಷ ಅಭಿಯಾನದಲ್ಲಿ ಸಸಿ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.

ವನಮಹೋತ್ಸವ ಕಾರ್ಯಕ್ರಮವನ್ನು ಕೇವಲ ವೇದಿಕೆ ಕಾರ್ಯಕ್ರಮಗಳಾಗದೇ ಅಥವಾ ಆಚರಣೆಗಳಿಗೆ ಸೀಮಿತವಾಗಿರದೆ ನಿರಂತರ ಪ್ರಕ್ರಿಯೆಗಳಾಗಬೇಕು ಶಾಲಾ ಕಾಲೇಜು ಹಾಗೂ ಸರಕಾರಿ ಭೂಮಿಗಳಲ್ಲಿ ಗಿಡ ನೆಡುವ ಮೂಲಕ ಹಸಿರುಕರಣಕ್ಕೆ ನಾಂದಿ ಹಾಡಬೇಕು ಎಂದರು.

ಇನ್ನೂ ವಲಯ ಉಪ ಅರಣ್ಯ ಅಧಿಕಾರಿ ವಸಂತ್ ಕುಮಾರ್ ಮಾತನಾಡಿ, ಸರ್ಕಾರದ ಅದಿಸೂಚನೆ ಮೂಲಕ ರಾಜ್ಯಾದ್ಯಂತ ಐದು ಕೋಟಿ ಗಿಡ ನೆಡಲು ತೀರ್ಮಾನಿಸಿದ್ದು ಬರಿ ಗಿಡ ನೆಟ್ಟೆ ಸಾಲದು ಗಿಡ ನೆಟ್ಟು ಪೋಷಣೆ ಮಾಡಬೇಕು ತಿಳಿಸಿದರು.
ಅದರಂತೆ ಪರಸರ ದಿನ ಗಿಡ ಹಾಕಿದರೆ ಸಾಲದು ಗಿಡ ಹಾಕಿದವರು ಪೋಷಣೆ ಮಾಡಬೇಕು, ನಮಗೆ ಗಿಡ ಮರಗಳಿಂದ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ ಪರಿಸರದಿಂದ ನಮಗೆ ಉತ್ತಮವಾದ ಆಮ್ಲಜನಕ ಸಿಗುತ್ತಿದೆ ಎಂದರು.

ಇನ್ನೂ ವಲಯ ಅರಣ್ಯ ಡಿಆರ್ ಎಪ್ ಓ ರಾಜೇಶ್ ಮಾತನಾಡಿ, ಮನುಷ್ಯ ದುರಾಸೆಯಿಂದ ಇಂದು ಇಂದು ಕಾಡು ನಾಶವಾಗಿದೆ ಇದರಿಂದ ಮಳೆ ಬರುತ್ತಿಲ್ಲಾ ಕಾಡು‌ಪ್ರಾಣಿಗಳು ಕಾಡಿನಲ್ಲಿರದೆ ನಾಡಿನತ್ತು ಬರುತ್ತಿವೆ, ಆದ್ದರಿಂದ ಪ್ರತಿಯೊಬ್ಬರು ಗಿಡ ನೆಡುವ ಮೂಲಕ ಪರಿಸರ ಉಳಿಸುವ ನಿಟ್ಟಿನಲ್ಲಿ ಪಣತೊಡಬೇಕು ಎಂದರು.

ಇನ್ನೂ ನಗರಸಭೆ ಸದಸ್ಯ ಮಲ್ಲಿಕಾರ್ಜುನ ಮಾತನಾಡಿ, ಸರಕಾರಿ ಜಾಗದಲ್ಲಿ ಹಾಗೂ ಶಾಲಾ ಕಾಲೇಜ್ ಸ್ಥಳಗಳಲ್ಲಿ ಹೆಚ್ಚು ಹೆಚ್ಚು ಸ್ಥಳಗಳಲ್ಲಿ ಅರಣ್ಯ ಬೆಳೆಸಲು ಮುಂದಾಗಬೇಕು ಅದರಂತೆ ಮಳೆ ಅಭಾವದಿಂದ ಗಿಡ ಹಾಕಲು ಸಾಧ್ಯವಾಗುತ್ತಿಲ್ಲ ಇರುವಂತಹ ಅರಣ್ಯವನ್ನು ನಾವು ರಕ್ಷಿಸಲು ಮುಂದಾಗಬೇಕು, ಪ್ರತಿಯೊಂದು ಮನೆಗೆ ಒಂದೊಂದು ಗಿಡ ನೆಡುವ ಮೂಲಕ ಹಸಿರುಕರಣಕ್ಕೆ ಮುಂದಾಗಬೇಕು ಎಂದರು.

ಈದೇ ಸಂಧರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಡಿ.ಎನ್.ಮಧುಸೂದನ್, ಶಿವುಪ್ರಸಾದ್, ಶಾಲೆಯ ಮುಖ್ಯೋಪಾಧ್ಯಾಯ ಪ್ರಸಾಧ್, ಕಾರ್ತಿಕ್, ನಾಗೇಶ್, ಚಂದನ್ , ಇತರರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!