ನಾಯಕನಹಟ್ಟಿ:: ಭಾರತೀಯ ಸ್ಟೇಟ್ ಬ್ಯಾಂಕ್ ಜುಲೈ ಒಂದರಂದು ಸಂಸ್ಥಾಪನ ದಿನ ಆಚರಿಸಲಾಗುತ್ತದೆ ಎಂದು ಪ್ರಾದೇಶಿಕ ವ್ಯವಸ್ಥಾಪಕರು ಗಜೇಂದ್ರ ಕುಮಾರ್ ಹೇಳಿದ್ದರು.
ಅವರು ಶನಿವಾರ ಪಟ್ಟಣದ ಎಸ್ ಬಿ ಐ ಬ್ಯಾಂಕ್ ಆವರಣದಲ್ಲಿ ಎಸ್ ಬಿ ಐ ಬ್ಯಾಂಕ್ ಸಂಸ್ಥಾಪನ ದಿನ ಹಾಗೂ ಆರ್ಥಿಕ ಸಾಕ್ಷರತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜ್ಯೋತಿ ಬೆಳಗುವ ಮುಖಾಂತರ ಉದ್ಘಾಟಿಸಿ ಮಾತನಾಡಿದ್ದಾರೆ.
ನಮ್ಮ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ದೊರೆಯುವ ಪ್ರಧಾನಮಂತ್ರಿ ಜನಧನ್ ಯೋಜನೆ, ಜೀವನ್ ಜ್ಯೋತಿ ಭೀಮಾ ಯೋಜನೆ, ಸುರಕ್ಷಾ ಯೋಜನೆ, ಅಟಲ್ ಪೆನ್ಷನ್ ಯೋಜನೆ ಸೇರಿದಂತೆ ಈ ಎಲ್ಲಾ ಯೋಜನೆಗಳು ಲಾಭದಾಯಕವಾಗಿದ್ದು, ಗ್ರಾಹಕರು ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಗ್ರಾಹಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಎಸ್ ಬಿ ಐ ಶಾಖೆಯ ವ್ಯವಸ್ಥಾಪಕರು ಅರುಣ್ ಕುಮಾರ್, ಪ್ರಾದೇಶಿಕ ಕಚೇರಿ ಮ್ಯಾನೇಜರ್ ದುಶಾಂತ್, ಪ್ರಾದೇಶಿಕ ವ್ಯವಸ್ಥಾಪಕರು ಗಜೇಂದ್ರ ಕುಮಾರ್, ಕಿರಣ್ ಡೆಪ್ಯುಟಿ ಮ್ಯಾನೇಜರ್, ಮನೀಶ್ ಅಸಿಸ್ಟೆಂಟ್ ಮ್ಯಾನೇಜರ್, ಎಫ್ ಎಲ್ ಸಿ ಮಧುಸೂದನ್, ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಎಸ್. ಸುರೇಶ್, ನಾಡಕಚೇರಿಯ ಉಪತಾಶಿಲ್ದಾರ್ ಶಕುಂತಲಾ, ವಕೀಲ ಅಶ್ವತ್ ನಾಯಕ್, ಸಾಮಾಜಿಕ ಸಂಘಟಕ ಅಧಿಕಾರಿ ನಾಗರತ್ನಮ್ಮ, ಗ್ರಾಮದ ಮುಖಂಡರಾದ ಮೇಘ ಹೋಟೆಲ್, ಬಸವರಾಜ್, ಜಿ ಬಿ ಮುದಿಯಪ್ಪ, ವಕೀಲ ಎನ್ ಉಮಾಪತಿ, ಎನ್ ಮಹಾಂತಣ್ಣ, ಹೊಸಹಳ್ಳಿ ತಿಪ್ಪೇಸ್ವಾಮಿ ಉಮೇಶ್, ಎನ್ ಮಹದೇವಪುರ ಬೋರನಾಯಕ, ಓಬಣ್ಣ ಬಿ ಓ ಆರ್, ಸೇರಿದಂತೆ ಗ್ರಾಹಕರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!