ಚಳ್ಳಕೆರೆ : ಬಯಲು ಸೀಮೆ ರೈತರಿಗೆ ವರದಾನವಾಗಲೆಂದು ಕೇಂದ್ರ ಮತ್ತು ರಾಜ್ಯ ಸರಕಾರ ರೈತರಿಗಾಗಿ 2023-24 ನೇ ಸಾಲಿನ ಮುಂಗಾರು ಹಂಗಾಮಿನ ರೈತ ಸುರಕ್ಷಾ ಪ್ರಧಾನಿ ಮಂತ್ರಿ ಫಸಲ್ ಭಿಮ್ ಯೋಜನೆಯಡಿ ಅರ್ಹ ಎಲ್ಲಾ ರೈತರು ವಿಮಾ ನೋಂದಾಣಿ ಮಾಡಿಸುವಂತೆ ತಾಲೂಕಿನ ಕೃಷಿ ಸಹಾಯಕ ಅಧಿಕಾರಿ ಜೆ.ಅಶೊಕ್ ಮನವಿ ಮಾಡಿದ್ದಾರೆ.
ಅವರು ನಗರದ ಸಹಾಯಕ ಕೃಷಿ ನಿದೇರ್ಶಕರ ಕಛೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ತಾಲೂಕಿನ ಎಲ್ಲಾ ಅರ್ಹ ರೈತ ಫಲಾನುಭವಿಗಳು ತಾವು ಬೆಳೆದ ಬೆಳೆಗಳಿಗೆ ವಿಮಾ ಯೋಜನೆ ಮಾಡಿಸಿದರೆ ನಿಮ್ಮ ಬೆಳೆ ಸುರಕ್ಷವಾಗಿರಲು ಹಾಗೂ ನಷ್ಟ ಹೊಂದದೆ ಇರಬಹುದು ಎಂದಿದ್ದಾರೆ.

ಗ್ರಾಮ ಪಂಚಾಯಿತಿ ಮಟ್ಟದ ವಿಮಾ ಘಟಕಕ್ಕೆ ಚಳ್ಳಕೆರೆ ತಾಲ್ಲೂಕಿಗೆ ಗ್ರಾಮಪಂಚಾಯಿತಿ ಮಟ್ಟಕ್ಕೆ ಶೇಂಗಾ (ಮಳೆಯಾಶ್ರಿತ), ಬೆಳೆಯನ್ನು ಅಧಿಸೂಚನೆ ಮಾಡಲಾಗಿದೆ. ಹೋಬಳಿ ಮಟ್ಟಕ್ಕೆ ಕಸಬಾ ಹೋಬಳಿಗೆ ಈರುಳ್ಳಿ ( ನೀರಾವರಿ) , ಹೀಗೆ ಬೆಳೆಗಳನ್ನು ಮುಂಗಾರು ಹಂಗಾಮಿ ಬೆಳೆ ವಿಮೆಗೆ ಅಧಿಸೂಚನೆ ಮಾಡಲಾಗಿದೆ.

ವಿಮಾ ಬೆಳೆಗಳ ವಿವರ :

ಜೋಳ (ನೀರಾವರಿ/ಮಳೆಯಾಶ್ರಿತ),
ಟೊಮ್ಯಾಟೋ ( ನೀರಾವರಿ),
ತೊಗರಿ ( ನೀರಾವರಿ/ಮಳೆಯಾಶ್ರಿತ),
ಭತ್ತ (ನೀರಾವರಿ),
ಮೆಕ್ಕೆಜೋಳ (ನೀರಾವರಿ),
ರಾಗಿ ( ನೀರಾವರಿ/ಮಳೆಯಾಶ್ರಿತ),
ಸಜ್ಜೆ (ಮಳೆಯಾಶ್ರಿತ),
ಸೂರ್ಯಕಾಂತಿ ( ನೀರಾವರಿ/ಮಳೆಯಾಶ್ರಿತ),
ಹತ್ತಿ( ನೀರಾವರಿ/ಮಳೆಯಾಶ್ರಿತ),
ಹುರುಳಿ(ನೀರಾವರಿ),
ಹೆಸರು(ಮಳೆಯಾಶ್ರಿತ),
ಈರುಳ್ಳಿ (ನೀರಾವರಿ),
ನವಣೆ (ಮಳೆಯಾಶ್ರಿತ),
ಇಷ್ಟೂ ಬೆಳೆಗಳಿಗೆ ವಿಮೆಗೆ ನೊಂದಾಯಿಸಲು ಅಧಿಸೊಚನೆಯನ್ನು ಮಾಡಲಾಗಿದೆ. ಬೆಳೆಸಾಲ ಪಡೆದ ಮತ್ತು ಬೆಳೆಸಾಲ ಪಡೆಯದ ಆಸಕ್ತ ರೈತರು, ಬೆಳೆ ವಿಮೆಗೆ ನೊಂದಣಿ ಮಾಡಲು ಹೆಸರು ಮತ್ತು ಈರುಳ್ಳಿ ಬೆಳೆಗಳಿಗೆ ” ಜುಲೈ 15 ಕೊನೆಯ ದಿನಾಂಕವಾಗಿರುತ್ತದೆ ,. ಹಾಗೇ ಶೇಂಗಾ, ಹತ್ತಿ, ಹುರುಳಿ, ಮೆಕ್ಕೆಜೋಳ, ಈರುಳ್ಳಿ (ಮಳೆಯಾಶ್ರಿತ), ಸಜ್ಜೆ , ತೊಗರಿ , ಕೆಂಪು ಮೆಣಸಿನಕಾಯಿ, ಸಾವೆ ಎಳ್ಳು, ಜೋಳ, ಸೂರ್ಯಕಾಂತಿ , ಟೊಮ್ಯಾಟೋ , ಇಂತಹ ಬೆಳೆಗಳಿಗೆ ಜುಲೈ 31 ಹಾಗೂ ಭತ್ತ , ರಾಗಿ, ನವಣೆ , ಬೆಳೆಗಳಿಗೆ ಆಗಸ್ಟ್ 16 ಕೊನೆಯ ದಿನಾಂಕವಾಗಿರುತ್ತದೆ. ಆಸಕ್ತ ರೈತ ಬಾಂದವರು ನಿಗಧಿತ ದಿನಾಂಕದೊಳಗೆ ಬೆಳೆ ವಿಮೆಗೆ ನೊಂದಣಿ ಮಾಡಬೇಕೆಂದು ಆದೇಶ ನೀಡಲಾಗಿದೆ. ಫಸಲ್ ಭೀಮಾ ಯೋಜನೆ ಈ ಕುರಿತು ಪತ್ರಿಕಾ ಪ್ರಕಟಣೆ ಮಾಹಿತಿ ನೀಡಿದೆ.

About The Author

Namma Challakere Local News
error: Content is protected !!