ಚಿತ್ರದುರ್ಗ ಜೂನ್.26: 2023ರ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದೆ.
ಚಿತ್ರದುರ್ಗ ತಾಲ್ಲೂಕಿನಲ್ಲಿ ಮುಖ್ಯ ಬೆಳೆಯಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಮುಸುಕಿನ ಜೋಳ (ವiಳೆಯಾಶ್ರಿತ) ಬೆಳೆಯನ್ನು ಅಧಿಸೂಚನೆ ಮಾಡಲಾಗಿದೆ. ಹೋಬಳಿ ಮಟ್ಟದಲ್ಲಿ ಮಳೆಯಾಶ್ರಿತ ಹಾಗೂ ನೀರಾವರಿ ಜೋಳ, ತೊಗರಿ, ಶೇಂಗಾ, ರಾಗಿ, ಸಜ್ಜೆ, ನವಣೆ, ಹತ್ತಿ, ಸೂರ್ಯಕಾಂತಿ, ಹುರುಳಿ, ಹೆಸರು, ಈರುಳ್ಳಿ ಹಾಗೂ ಟೊಮಾಟೋ ಬೆಳೆಗಳಿಗೆ ಬೆಳೆ ವಿಮೆಗೆ ನೋಂದಾಯಿಸಲು ಅವಕಾಶವಿರುತ್ತದೆ.
ಈ ಯೋಜನೆಯಡಿ ಪ್ರಸ್ತುತ ಸಾಲು ಹಾಗೂ ಹಂಗಾಮಿನಲ್ಲಿ ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಲಾದ ಬೆಳೆಗಳಿಗೆ ಇಚ್ಛೆಯುಳ್ಳ ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ಸರ್ಕಾರದಿಂದ ನಿಗದಿಪಡಿಸಿದ ವಿಮಾ ಕಂತನ್ನು ಪಾವತಿಸಿ ಯೋಜನೆಯಡಿ ಭಾಗವಹಿಸಲು ಅವಕಾಶವಿರುತ್ತದೆ.
ಈ ಯೋಜನೆಯಡಿ ಮುಸುಕಿನ ಜೋಳ (ವiಳೆಯಾಶ್ರಿತ), ಮಳೆಯಾಶ್ರಿತ ಹಾಗೂ ನೀರಾವರಿ ಜೋಳ, ತೊಗರಿ, ಶೇಂಗಾ, ಹತ್ತಿ, ಸೂರ್ಯಕಾಂತಿ, ಹುರುಳಿ, ಹೆಸರು, ಈರುಳ್ಳಿ ಹಾಗೂ ಟೊಮಾಟೋ ಬೆಳೆಗಳಿಗೆ ದಿನಾಂಕ 31.07.2023 ರೊಳಗಾಗಿ ಹಾಗೂ ರಾಗಿ, ನವಣೆ ಬೆಳೆಗಳಿಗೆ ನೊಂದಾಯಿಸಲು 16.08.2023 ರೊಳಗಾಗಿ ನೊಂದಾಯಿಸಿಕೊಳ್ಳಲು ಅವಕಾಶವಿದೆ.
ವಿಮಾ ಕಂತು ರೂ. (ಪ್ರತಿ ಹೆಕ್ಟೇರ್): ಮುಸುಕಿನ ಜೋಳ (ಮಳೆಯಾಶ್ರಿತ) ರೂ.1130, ಮುಸುಕಿನ ಜೋಳ (ನೀರಾವರಿ) ರೂ.1290, ಶೇಂಗಾ (ನೀರಾವರಿ) ರೂ.3945, ಶೇಂಗಾ (ಮಳೆಯಾಶ್ರಿತ) ರೂ.1090, ತೊಗರಿ (ಮಳೆಯಾಶ್ರಿತ) ರೂ.960, ರಾಗಿ (ನೀರಾವರಿ) ರೂ.1015, ರಾಗಿ (ಮಳೆಯಾಶ್ರಿತ) ರೂ.850, ಜೋಳ (ನೀರಾವರಿ) ರೂ.905, ಜೋಳ (ಮಳೆಯಾಶ್ರಿತ) ರೂ.3060, ಸೂರ್ಯಕಾಂತಿ (ನೀರಾವರಿ) ರೂ.975, ಸೂರ್ಯಕಾಂತಿ (ಮಳೆಯಾಶ್ರಿತ) ರೂ.815 ನಿಗಧಿಪಡಿಸಲಾಗಿದೆ ಎಂದು ಚಿತ್ರದುರ್ಗ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎನ್.ಚಂದ್ರಕುಮಾರ್ ತಿಳಿಸಿದ್ದಾರೆ.

About The Author

Namma Challakere Local News
error: Content is protected !!