ಚಿತ್ರದುರ್ಗ(ಕರ್ನಾಟಕ ವಾರ್ತೆ)ಜೂನ್.26:
ಚಿತ್ರದುರ್ಗ ತಾಲ್ಲೂಕಿನಲ್ಲಿ ಬಾಲ್ಯವಾಸ್ಥೆ ಹಾಗೂ ಕಿಶೋರವಾಸ್ಥೆ ಕಾರ್ಮಿಕ ನಿಷೇಧ -1986 ಕಾಯ್ದೆಯಡಿ ಚಿತ್ರದುರ್ಗ ನಗರದ ಗ್ಯಾರೇಜ್‍ಗಳಿಗೆ ಸೋಮವಾರ ಭೇಟಿ ನೀಡಿ ಈ ಕಾಯ್ದೆಯಡಿ ತಪಾಸಣೆ ನಡೆಸಲಾಯಿತು.
ತಪಾಸಣೆ ಸಂದರ್ಭದಲ್ಲಿ ಒಟ್ಟು 6 ಮಕ್ಕಳು ಕೆಲಸದಿಂದ ಬಿಡುಗಡೆಗೊಳಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಯಿತು. ಇದನ್ನು ಪರಿಶೀಲಿಸಿದ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಡಾ.ಆರ್.ಪ್ರಭಾಕರ್, ಇಬ್ಬರು ಮಕ್ಕಳಿಗೆ 18 ವರ್ಷ ಪೂರ್ಣಗೊಂಡಿದ್ದರಿಂದ ಮಕ್ಕಳನ್ನು ಪೋಷಕರ ವಶಕ್ಕೆ ಬಿಡಲಾಯಿತು. 3 ಮಕ್ಕಳು 10ನೇ ತರಗತಿ ಉತ್ತೀರ್ಣರಾಗಿದ್ದಾರೆ. ಇವರನ್ನು ಪ್ರಥಮ ಪಿಯುಸಿಗೆ ದಾಖಲು ಮಾಡಲು ಪೋಷಕರಿಗೆ ಮಾಹಿತಿಯನ್ನು ನೀಡಲಾಯಿತು. ಒಬ್ಬ ಬಾಲಕನು 9ನೇ ತರಗತಿ ಉತ್ತೀರ್ಣನಾಗಿದ್ದು, 10ನೇ ತರಗತಿಗೆ ದಾಖಲು ಮಾಡಲು ಪೋಷಕರಿಗೆ ಮಾಹಿತಿಯನ್ನು ನೀಡಲಾಯಿತು. ಒಟ್ಟು 4 ಮಕ್ಕಳನ್ನು ಸರ್ಕಾರಿ ಬಾಲಕರ ಬಾಲಮಂದಿರದಲ್ಲಿ ತಾತ್ಕಾಲಿಕವಾಗಿ ಪುನರ್‍ವಸತಿ ಕಲ್ಪಿಸಲು ಸೂಚಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಕಾರ್ಮಿಕ ನಿರೀಕ್ಷಕ ಡಿ,.ರಾಜಣ್ಣ, ಯೋಜನಾ ನಿರ್ದೇಶಕ ಪಿ.ಸತೀಶ್ ಕುಮಾರ್, ಮಕ್ಕಳ ರಕ್ಷಣಾ ಘಟಕ ಸಿಬ್ಬಂದಿಗಳಾದ ರೇಣುಕಾ, ಸಂತೋಷ್ ಹಾಗೂ ಪೊಲೀಸ್ ಸಿಬ್ಬಂದಿ ನಾಗರಾಜ ನಾಯಕ ಹಾಜರಿದ್ದರು.

About The Author

Namma Challakere Local News
error: Content is protected !!