ಚಿತ್ರದುರ್ಗ : ನಗರದ ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಐಸಿ, ಎನ್.ಎಸ್.ಎಸ್., ಯೂತ್ ರೆಡ್‌ಕ್ರಾಸ್ ಹಾಗೂ ವಿದ್ಯಾರ್ಥಿ ಒಕ್ಕೂಟದಿಂದ ಆಯೋಜಿಸಿದ್ದ 2022-23ನೇ ಸಾಲಿನ ವಾರ್ಷಿಕ ಸ್ನೇಹಕೂಟ, ಪ್ರತಿಭಾ ಪುರಸ್ಕಾರ, ಅಂತಿಮವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಶಿವಮೊಗ್ಗ ಪ್ರಾದೇಶಿಕ ಕಛೇರಿಯ ಜಂಟಿ ನಿರ್ದೇಶಕರಾದ ಪ್ರೊ. ಓಂಪ್ರಕಾಶ ರಾಜೋಳೆ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು,
ಮನುಷ್ಯ ಸಾಮಾನ್ಯನಂತಿರಬೇಕು ಆದರೆ ವಿಚಾರಗಳು ಅಪ್ರತಿಮವಾಗಿರಬೇಕು. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪಠ್ಯೇತರ ಚಟುವಟಿಕೆಗಳಲ್ಲಿ ಹೊರಹೊಮ್ಮಿಸಬೇಕು. ಜ್ಞಾನಶಿಸ್ತು ಬಹಳ ಮುಖ್ಯ. ಶಿಕ್ಷಣ ನಿರಂತರ ಜ್ಞಾನದಾಸೋಹವನ್ನು ನೀಡುತ್ತದೆ. ಅದನ್ನು ಪ್ರತಿಭಾನ್ವಿತರಾದ ನೀವುಗಳು ಒಳ್ಳೆಯ ರೀತಿಯಲ್ಲಿ ಸ್ವೀಕರಿಸಬೇಕು ಎಂದು ಹೇಳಿದರು.
ಸರ್ಕಾರಿ ಕಲಾ ಕಾಲೇಜಿನ ಸಹಪ್ರಾಧ್ಯಾಪಕಿ ಡಾ. ತಾರಿಣಿ ಶುಭದಾಯಿನಿ, ಸಮಾಜ ಸೇವಕ ಡಾ. ಸಿ.ಆರ್.ನಸೀರ್ ಅಹಮದ್ ಹಾಗೂ ಕಾಲೇಜಿನ ಪ್ರಾಚಾರ್ಯರಾದ ಡಾ. ಎಲ್. ಈಶ್ವರಪ್ಪ ಮಾತನಾಡಿದರು.
2021-22ನೇ ಸಾಲಿನಲ್ಲಿ ಕಾಲೇಜಿನಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳು, ದೇಶೀ ಉಡುಗೆ, ರಂಗೋಲಿ, ಜಾನಪದ ಹಾಡುಗಳು, ಪ್ರಬಂಧ ಮೊದಲಾದ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿ ಒಕ್ಕೂಟದ ಛರ‍್ಮನ್ ಪ್ರೊ. ಸಿ. ಬಸವರಾಜಪ್ಪ, ಪ್ರಧಾನಕರ‍್ಯದರ್ಶಿ ಚಿರಾಗ್ ಆರ್. ಜೈನ್, ಕಾರ್ಯದರ್ಶಿಗಳಾದ ಆಯೆಶಾ ಸಿದ್ದಿಕಾ, ಚೇತನ ಜೆ. ಪ್ರೊ. ಎನ್. ಚಲುವರಾಜ್, ಜೈನಬ್, ಫಾತಿಮಾ ಮೊದಲಾದವರಿದ್ದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.