ಚಳ್ಳಕೆರೆ : ಇತ್ತಿಚೀಗೆ ನಗರದಲ್ಲಿ ಎಗ್ಗಿಲ್ಲದೆ ಕಳ್ಳತನಗಳು ನಡೆಯುತ್ತಿವೆ ಇನ್ನೂ ಕಡಿವಾಣ ಹಾಕಬೇಕಾದ ಪೊಲೀಸ್ ಇಲಾಖೆ ಮಾತ್ರ ಮೌನವಹಿಸಿದಂತೆ ಇದೆ
ಇನ್ನೂ ತಿಂಗಳಲ್ಲಿ ಸರಿ ಸುಮಾರು ಪ್ರಕರಣಗಳು ದಾಖಲಾದರೆ ಕೆಲವು ಪ್ರಕರಣಗಳು ದಾಖಲಾಗದೆ ಉಳಿಯುತ್ತಿವೆ ನಿತ್ಯವೂ ಕಳ್ಳತನದ ಹಾದಿಯು ಕಳ್ಳರಿಗೆ ಸುಗಮವಾದಂತಿಗೆ ಇದರಿಂದ ದೇವಾಸ್ಥನದ ಆಭರವಗಳನ್ನು ಬಿಡದ ಕಳ್ಳರು ಚಳ್ಳಕೆರೆ ತಾಲೂಕಿನ ಬೆಳಗೆರೆ ಗ್ರಾಮದ ಲಕ್ಷ್ಮಿರಂಗನಾಥಸ್ವಾಮಿ ದೇಗುಲದಲ್ಲಿ ಇದ್ದ ಬೆಳ್ಳಿ ಕಾಲು ಬೆಳ್ಳಿಕುದುರೆ, ಕಿರೀಟ, ಕಣ್ಣು ಸೇರಿದಂತೆ ಬೆಲೆಬಾಳುವ ದೇವರ ಆಭರಣಗಳನ್ನು ಕಳ್ಳರು ಕದ್ದಯ್ಯೊದ್ದಿದ್ದಾರೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಬೆಳಗೆರೆ ಹೊರಹೊಲಯದ ಗ್ರಾಮದ ಕೆರೆ ಏರಿ ಬುಡದಲ್ಲಿ ನೆಲೆಸಿರುವ ಶ್ರೀಲಕ್ಷ್ಮಿರಂಗನಾಥಸ್ವಾಮಿ ದೇಗುಲಕ್ಕೆ ಖದೀಮರು ಕನ್ನ ಹಾಕಿದ್ದಾರೆ.
ದೇಗುಲದ ಮುಂಭಾಗದ ಬಾಗಿಲಿನ ಬೀಗ ಹೊಡೆದು ಲಕ್ಷ್ಮೀ ರಂಗನಾಥಸ್ವಾಮಿ ದೇವರ ಆಭರಣ ಕದ್ದು ಕದೀಮರು ತಮ್ಮ ಚಾಲಾಕಿ ಬುದ್ಧಿ ತೋರಿಸಿದ್ದಾರೆ

ಅಲ್ಲೆ ಇದ್ದ ಕಾಣಿಕೆಹುಂಡಿ ಡಬ್ಬಿಯನ್ನು ಮುಟ್ಟಿಲ್ಲ ! ಆದರೆ ದೇವರ ಒಡವೆ ಬಿಟ್ಟಿಲ್ಲ.! ಈಗೇ ದೇವರ ಬೆಳ್ಳಿಕುದುರೆ, ಕಿರೀಟ, ಕಣ್ಣು ಸೇರಿದಂತೆ ಬೆಲೆಬಾಳುವ ದೇವರ ಆಭರಣ ಕಳ್ಳರ ಕೈವಶವಾಗಿದೆ
ಜತೆಗೆ ಪಕ್ಕದ ಲಕ್ಷ್ಮಿ ದೇವಸ್ಥಾನಕ್ಕೂ ನುಗ್ಗಿದ ಕಳ್ಳರು ಅದರಲ್ಲಿ ಇದ್ದಂತಹ ಸಣ್ಣಪುಟ್ಟ ದೇವರ ಒಡವೆ ಕದ್ದಿದ್ದಾರೆ..

ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ದಿನನಿತ್ಯದಂತೆ ಬೆಳಗ್ಗೆ ಪೂಜಾರಿ ಪೂಜೆಗೆಂದು ಬಂದಾಗ ಬೀಗ ಹೊಡೆದಿರುವುದು ಬೆಳಕಿಗೆ ಬಂದಿದೆ

ಇದನ್ನು ತಿಳಿದ ಗ್ರಾಮಸ್ಥರು ತಕ್ಷಣವೇ ಚಳ್ಳಕೆರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ಪಿ ಐ ಆರ್ ಎಪ್ ದೇಸಾಯಿ ಹಾಗೂ ಪಿಎಸ್ಐ ಬಸವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ….ಎನ್ನಲಾಗಿದೆ.

Namma Challakere Local News
error: Content is protected !!