ಚಳ್ಳಕೆರೆ : ಮುಸ್ಲಿಂ ಭಾಂಧವರ ಪ್ರಮುಖ ಹಬ್ಬವಾದ ಬಕ್ರಿದ್ ಹಬ್ಬ ಈದೇ ತಿಂಗಳ 29 ರಂದು ಇರುವ ಕಾರಣ ಚಳ್ಳಕೆರೆ ನಗರ ಪೋಲಿಸ್ ಠಾಣೆಯಲ್ಲಿ ಡಿವೈಎಸ್ ಪಿ ರಮೇಶ್ ಕುಮಾರ್ ಅಧ್ಯಕ್ಷತೆ ಯಲ್ಲಿ ಇಂದು ನಗರದ ಒಬ್ಬಂತ್ತು ಮಸೀದಿಗಳ ಮುಸ್ಲಿಂ ಭಾಂಧವರ ಸಮ್ಮುಖದಲ್ಲಿ ಸಭೆ ನಡೆಸಿದ್ದಾರೆ

ಇನ್ನೂ ಜೂನ್ 29 ರಂದು ಈಡೀ ನಗರದ ಎಲ್ಲಾ ಮುಸ್ಲಿಂ ಭಾಂಧವರು ಯಾವುದೇ ಘರ್ಷಣೆ ಗಲಬೆಗಳು‌ ನಡೆಯದಂತೆ ಶಾಂತಿ ಸಂಕೇತವಾಗಿ ಬಕ್ರಿದ್ ಹಬ್ಬವನ್ನು ಆಚರಿಸಬೇಕು ಎಂದು ಡಿವೈ ಎಸ್ ಪಿ ರಮೇಶ್ ಕುಮಾರ್ ಹೇಳಿದರು.

ಇನ್ನೂ ಕಾನೂನು ರಕ್ಷಣೆಗೆ ನಾವು ಇದ್ದೆವೆ, ನೀವು ದರ್ಗದಲ್ಲಿ‌ ನಮೋಜ್ ಮಾಡುವ ವೇಳೆ ಯಾವುದೇ ಅಹಿತಕರ ಘಟನೆಗಳು ಉಂಟಾಗದಂತೆ ಕ್ರಮ ವಹಿಸಬೇಕು, ಇನ್ನೂ ನೀವು ಆಹಾರ ಸೇವಿಸುವ ಪದ್ದತಿ‌ ಸೌರ್ಹದಯುತವಾಗಿರಲಿ ಸಾರ್ವಜನಿಕರ ಇತದೃಷ್ಠಿಯಿಂದ ಇರಬೇಕು ಇನ್ನೂ ಏಕಕಾಲಕ್ಕೆ ಒಂದೆಡೆ ಸೇರುವಾಗ ಗೊಂದಲ ಉಂಟಾಗಬಹುದು ಅಂತಹ ಸಂಧರ್ಭದಲ್ಲಿ ವೈಯಕ್ತಿಕ ದ್ವೇಷ ಅಸೂಯೆ ಬಿಟ್ಟು ನಮೋಜ್ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ಇನ್ನೂ ನಗರಠಾಣೆಯ ಪಿಐ ಆರ್.ಎಪ್.ದೇಸಾಯಿ ಮಾತನಾಡಿ, ಬೈಕ್ ರೈಡ್ ಮಾಡುವ ಹುಡುಗರು‌ ಮೋಜು ಮಸ್ತಿ ಅಂತ ಪ್ರಾಣ ಹಾನಿ ಮಾಡಿಕೊಳ್ಳದೆ ಹಬ್ಬವನ್ನು ಸಂತೋಷ ದಿಂದ ಸಂಭ್ರಮಿಸಬೇಕು, ಎಲ್ಲಾ ಜಾತಿ ಸಮುದಾಯಗಳೊಂದಿಗೆ ಸ್ನೇಹ ಸಂತೋಷದಿಂದ ಹಬ್ಬವನ್ನು ಆಚರಿಸಬೇಕು ಎಂದರು.

ಇದೇ ಸಂಧರ್ಭದಲ್ಲಿ ಪಿಎಸ್ ಐ ಬಸವರಾಜ್, ಪಿಎಸ್ಐ ದೊರೆಪ್ಪ ದೊಡ್ಮನಿ, ಸಿಬ್ಬಂದಿ ಮಂಜುನಾಥ್
ಮುಡುಕಿ, ಎಸ್. ಮುಜೀಬ್, ಬಿ.ಪರೀದ್ ಖಾನ್,
ದಾದಪೀರ್, ಎಸ್ ಪಿ. ಜುಬೇರ್, ಪಿ.ಬಷೀರ್ ಆಯತ್, ಅನ್ವರ್ ಸಾಬ್, ಅಕ್ಬರ್ ಅನಾಸ್, ನೂರಲ್ಲ ಖಾನ್, ಇಮ್ರಾನ್, ನಯಾಜ್, ಸಿ.ಆರ್.ಅಲ್ಲಬಕ್ಷಿ, , ಸಮಿಮುಲ್ಲಾ, ಇತರರು ಭಾಗವಹಿಸಿದ್ದರು

.

Namma Challakere Local News
error: Content is protected !!