ಚಿತ್ರದುರ್ಗ ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಿವಿಲ್ ಇಂಜಿನಿಯರಿAಗ್ ವಿಭಾಗದ ವತಿಯಿಂದ ಅಂತರ್ ಜಲವನ್ನು ನ್ಯಾನೋ ಮತ್ತು ಸಿಡಿಐ -ಹೈಬ್ರಿಡ್ ತಂತ್ರಜ್ಞಾನ ಬಳಸಿ ಶುದ್ಧಿಕರಿಸುವ ಕುರಿತು ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು. ಈ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಪ್ರಾಚಾರ್ಯ ಡಾ.ಭರತ್ ಪಿ ಬಿ ಮಾತನಾಡಿ, ಚಿತ್ರದುರ್ಗ ಜಿಲ್ಲೆ ಮಳೆಯಾಧಾರಿತ ಜಿಲ್ಲೆಯಾಗಿದ್ದು, ಕುಡಿಯುವ ನೀರಿನ ಗುಣಮಟ್ಟವನ್ನು ನಾವು ಕಾಪಾಡಿಕೊಳ್ಳಬೇಕಾಗಿದೆ. ಅಂತರ್ ಜಲವನ್ನು ಶುದ್ಧಿಕರಿಸಿ ಕುಡಿಯಲು ಬಳಸಲು ಯೋಗ್ಯವಾಗುವಂತೆ ಸಾಕಷ್ಟು ತಂತ್ರಜ್ಞಾನಗಳು ಇದ್ದು, ಇವನ್ನು ಬಳಸಿಕೊಂಡು ಜನಸಾಮಾನ್ಯರಿಗೆ ಕುಡಿಯಲು ಯೋಗ್ಯವಾಗುವಂತೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ವೈಜ್ಞಾನಿಕ ಅಧಿಕಾರಿ ಡಾ. ಬಿ. ನಾಗಪ್ಪ ಮಾತನಾಡಿದರು. ವಿಭಾಗ ಮುಖ್ಯಸ್ಥ ಡಾ. ಶ್ರೀಶೈಲ ಜೆ ಎಂ., ಪ್ರೊ.ಅನುಷಾ ವಿ, ಪ್ರೊ.ಮೀನಾಕ್ಷಿ ಎಂ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಹೆಚ್ಚಾಗಿ ಕೊಳವೆ ಬಾವಿ ನೀರನ್ನು ಆಶ್ರಯಿಸಿದ್ದು, ಈ ಕೊಳವೆ ಬಾವಿ ನೀರು ಅನೇಕ ಕಾರಣಗಳಿಂದ ನೀರಿನ ಗುಣಮಟ್ಟ ಕಡಿಮೆಯಾಗುತ್ತಿದೆ. ನೀರಿನ ಗುಣಮಟ್ಟ ಹೆಚ್ಚಿಸಲು ನ್ಯಾನೋ ಮತ್ತು ಸಿಡಿಐ -ಹೈಬ್ರಿಡ್ ತಂತ್ರಜ್ಞಾನ ಬಳಸಿ ನೀರನ್ನು ಶುದ್ಧಿಕರಿಸಲಾಗುತ್ತದೆ. ಆ ಮೂಲಕ ನೀರನ್ನು ಜನಬಳಕೆಯ ಕುಡಿಯಲು ಯೋಗ್ಯವಾಗುವಂತೆ ಸಂಸ್ಕರಿಸಲಾಗುತ್ತದೆ. ಈ ತಂತ್ರಜ್ಞಾನ ಹೆಚ್ಚು ಹೆಚ್ಚು ಬಳಸಿ ಅಂತರ್ ಜಲದ ಗುಣಮಟ್ಟವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಭಾಗ ಮುಖ್ಯಸ್ಥ ಡಾ. ಶ್ರೀಶೈಲ ಜೆ ಎಂ., ಪ್ರೊ.ಅನುಷಾ ವಿ, ಪ್ರೊ.ಮೀನಾಕ್ಷಿ ಎಂ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Namma Challakere Local News
error: Content is protected !!