ಪರಶುರಾಮಪುರ
ಚಟ್ಟೇಕಂಬ ಗ್ರಾಮದಲ್ಲಿ ಜೂ 29 ರಂದು ಅವಧೂತ ಸಧ್ಗುರು ಶ್ರೀ ವೀರಪ್ಪ ತಾತನವರ 37 ನೇ ವಾರ್ಷಿಕೋತ್ಸವ
ಚಳ್ಳಕೆರೆ ತಾಲೂಕಿನ ಚಟ್ಟೇಕಂಬ ಗ್ರಾಮದ ಶ್ರೀ ವೀರಪ್ಪತಾತನವರ ಮಠದಲ್ಲಿ ಆಷಾಢ ಶುಧ್ದ ಏಕಾದಶಿಯಂದು ಸಾಹಿತಿ, ಅಧ್ಯಾತ್ಮಿಕ ಚಿಂತಕ ಕೆ ಎನ್ ಕಣಜನಹಳ್ಳಿನಾಗರಾಜು ಅವರ ಘನ ಅಧ್ಯಕ್ಷತೆಯಲ್ಲಿ ಶ್ರೀ ವೀರಪ್ಪ ತಾತನವರ 37 ನೇ ವಾರ್ಷಿಕೋತ್ಸವ ಅಂಗವಾಗಿ ಜೂನ್ 29 ರ ಗುರುವಾರ ಬೆಳಗ್ಗೆ ಗಂಗಾಪೂಜೆ, ಧ್ವಜಾರೋಹಣ, ನಂತರ ತಾತನವರ ಶಿಲಾ ಮೂರ್ತಿಗೆ ಅಭಿಷೇಕ, ಮಧ್ಯಾಹ್ನ ಗಣಪತಿ ಹೋಮ, ಸಂಜೆ ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆ ರಾತ್ರಿ ತಾತನವರ ಶಿಷ್ಯರು, ಮಠದ ಭಕ್ತರಿಂದ ಅಖಂಡ ಭಜನೆ ಹಮ್ಮಿಕೊಳ್ಳಲಾಗಿದೆ ಎನ್ನಲಾಗಿದೆ
ಜೂ 30 ರ ರ ಶುಕ್ರವಾರ ಸಂಜೆ ಸರ‍್ಯಾಸ್ತದ ವೇಳೆಗೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಸಾಹಿತಿ ಕಣಜನಹಳ್ಳಿ ನಾಗರಾಜು ಅವರಿಂದ (ಉಪನ್ಯಾಸ) ಜ್ಞಾನದಾಸೋಹ ಬೇತೂರು ನಾರಾಯಣಸ್ವಾಮಿ ಇವರ ಗುರುಸೇವೆಯೊಂದಿಗೆ ವಿವಿಧ ಧಾರ್ಮಿಕ ಕಾರ್ಯಗಳು ಜರುಗಲಿವೆ ಮಠದ ಪ್ರಕಟಣೆ ತಿಳಿಸಿದೆ ಭಕ್ತರಾದ ವೀರೇಂದ್ರಕುಮಾರ, ಚೌಳೂರು ಜಿ ಕೆ ವೀರಣ್ಣ, ಮಲ್ಲಿಕಾರ್ಜುನ, ನಾರಾಯಣಸ್ವಾಮಿ, ವೀರೇಶ, ತಿಪ್ಪೇಸ್ವಾಮಿ, ಚಲ್ಮೇಶಪ್ಪ, ವೀರಣ್ಣ, ಆಂಧ್ರ-ಕರ್ನಾಟಕದ ಭಕ್ತರು ಗ್ರಾಮಸ್ಥರು ಭಾಗವಹಿಸುವರು ಎಲ್ಲಾ ಭಕ್ತರು ಮಠದ ಜಿ ಎಸ್ ವೀರಭದ್ರಪ್ಪತಾತನವರ ನೇತೃತ್ವದಲ್ಲಿ ಗಂಗಾಪೂಜೆಯಲ್ಲಿ ಪಾಲ್ಗೊಂಡು ಮಠದ ಧ್ವಜಾರೋಹಣ ನೆರವೇರಿಸುವರು ಆಂಧ್ರ ಮತ್ತು ಕರ್ನಾಟಕದ ಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಾತನವರ ಗುರು ಕೃಪೆಗೆ ಪಾತ್ರರಾಗುವಂತೆ ಮಠದ ಧರ್ಮಧರ್ಶಿ ಮತ್ತು ವ್ಯವ ಸ್ಥಾಪಕ ತಾತನವರ ಮೊಮ್ಮಗನಾದ ಶ್ರೀ ಎಸ್ ವೀರಭದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಪೋಟೋ (ಪಿಆರ್‌ಪುರ ಗದ್ದುಗೆ 24 ) (ತಾತನವರ ಸಂಗ್ರಹ ಚಿತ್ರ)
ಪರಶುರಾಮಪುರ ಸಮೀಪದ ಚಟ್ಟೇಕಂಬ ಗ್ರಾಮದ ವೀರಪ್ಪತಾತನವರ ಮಠದಲ್ಲಿನ ತಾತನವರ ಅಲಂಕೃತ ಗದ್ದುಗೆ