ಚಳ್ಳಕೆರೆ : ವಿದ್ಯಾರ್ಥಿಗಳು ತಮ್ಮ ದೈಹಿಕ ಮತ್ತು ಮಾನಸಿಕ ಕ್ಷಮತೆಯನ್ನು ಕಾಪಾಡಿಕೊಳ್ಳಲು ಯೋಗ ತುಂಬಾ ಸಹಕಾರಿ ಎಂದು ಪ್ರಾಚಾರ್ಯ ಡಾ.ಆರ್.ರಂಗಪ್ಪ ಹೇಳಿದರು.
ನಗರದ ಹೆಚ್.ಪಿ.ಪಿ.ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಯೋಗವು 6ಸಾವಿರ ವರ್ಷಕ್ಕೂ ಹಳೆಯದಾದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಪ್ರದರ್ಶನ ಕಲೆಯಾಗಿದೆ. ಇಂದು ಒತ್ತಡಯುಕ್ತ ಆಧುನಿಕ ಯುಗದಲ್ಲಿ ವಿಶ್ವಾದ್ಯಂತ ಹೆಚ್ಚಿನ ಜನರು ತಮ್ಮ ಮಾನಸಿಕ ಒತ್ತಡ ಮತ್ತು ದೈಹಿಕ ಸೌಂದರ್ಯವನು ಕಾಫಾಡಿಕೊಳ್ಳಲು ಯೋಗದ ಮೊರೆ ಹೋಗುತ್ತಿದ್ದಾರೆ. ಯೋಗದ ಪ್ರಾಮುಖ್ಯತೆ ತಿಳಿಸುವುದಕ್ಕಾಗಿ ಪ್ರತಿ ವರ್ಷ ವಿಶ್ವ ಯೋಗ ದಿನವನ್ನು ಜೂನ್21 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಇದರಿಂದ ಮನಸ್ಸು, ದೇಹ ಮತ್ತು ಮನುಷ್ಯ ಮತ್ತು ಪ್ರಕೃತಿಯ ನಡುವೆ ಪರಿಪೂರ್ಣ ಸಾಮರಸ್ಯವನ್ನು ಬೆಸೆಯುತ್ತದೆ.
ಜೂನ್21 ಎಂಬುದು ನೈಸರ್ಗಿಕವಾಗಿ ಅತ್ಯಂತ ದೀರ್ಘ ಹಗಲುಳ್ಳ ದಿನವೆಂದು ಕರೆಯಲಾಗುತ್ತದೆ. ಅಲ್ಲದೆ ಇದು ಸೂರ್ಯ ದಕ್ಷಿಣಯಾನಕ್ಕೆ ಪರಿವರ್ತನೆಯಾಗುವ ದಿನವಾಗಿದೆ. ಈ ದಕ್ಷಿಣಯಾನವು ಶಿಕ್ಷಣಕ್ಕೆ, ಆಧ್ಯಾತ್ಮಿಕ ಅಭ್ಯಾಸಗಳಿಗೆ ಉತ್ತಮವಾದ ದಿನವಾಗಿದೆ. ಇದರಿಂದ ಯೋಗ ಮಾಡುವವರಿಗೆ ಅನೇಕ ಲಾಭ ದೊರೆಯುವುದರ ಜೊತೆಗೆ ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವತೆ ಪಡೆದಿದೆ. ವಿದ್ಯಾರ್ಥಿಗಳಿಗೆ ಯೋಗವು ಅಭ್ಯಾಸವಾದರೆ ಹಲವು ಪ್ರಯೋಜನಗಳಿವೆ. ಯೋಗದಲ್ಲಿ ತೊಡಗಿರುವ ವ್ಯಕ್ತಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಧನಾತ್ಮಕವಾದ ಪರಿಣಾಮಗಳು ಗೋಚರಿಸುತ್ತವೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ನಿತ್ಯ ಕನಿಷ್ಟ ಒಂದು ಗಂಟೆ ಯೋಗಾಭ್ಯಾಸ ಮಾಡುವುದರಿಂದ ಸದೃಢ ದೇಹ ಮತತು ಮನಸ್ಸನ್ನು ಹೊಂದಬಹುದು ಎಂದರು.
ಇದೇವೇಳೆ ಯೋಗ ಶಿಕ್ಷಕ ಎನ್.ತಿಪ್ಪೇಸ್ವಾಮಿ ನೂರಾರು ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಯೋಗಭ್ಯಾವನ್ನು ಹೇಳಿಕೊಟ್ಟರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಬಿ.ಯು.ನರಸಿಂಹಮೂರ್ತಿ, ಬಿ.ಎಸ್.ಮಂಜುನಾಥ, ಪ್ರೊ.ರಂಗಸ್ವಾಮಿ, ಪ್ರೊ.ಡಿ.ಎನ್.ರಘುನಾಥ್. ಪ್ರೊ.ಶರಣಪ್ಪ, ಡಾ.ಜಯಮ್ಮ, ಪ್ರೊ.ಮಾನಸ, ಪ್ರೊ.ಕೃಷ್ಣೇಗೌಡ, ಪ್ರೊ.ರಾಮಣ್ಣ, ಪ್ರೊ.ಎ.ಎಸ್.ಸತೀಶ್, ಪ್ರೊ.ಎಂ.ಮುರಳಿ ಇತರರು ಇದ್ದರು.

Namma Challakere Local News
error: Content is protected !!