ಚಳ್ಳಕೆರೆ : ಮಹಿಳೆಯರಿಗೆ ಉಚಿತವಾಗಿ ಸಾರಿಗೆ ಸೇವೆ ನೀಡುವ ಶಕ್ತಿ ಯೋಜನೆಯು ಮಹಿಳಾ ಸಬಲೀಕರಣಕ್ಕೆ ಪೂರಕವಾಗಿದೆ ಎಂದು ತಹಶಿಲ್ದಾರ ರೇಹಾನ್ ಪಾಷ ಹೇಳಿದರು.

ಅವರು ನಗರದ ಕೆಎಸ್ ಆರ್ ಟಿ ಬಸ್ ನಿಲ್ದಾಣದಲ್ಲಿ ಮಹಿಳಾ ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಏಕ ಕಾಲಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಹಾದಿಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಳ್ಳಕೆರೆ ವಿಭಾಗದಿಂದ ಸಾಮಾನ್ಯ, ಹಾಗೂ ವೇಗದೂತ ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದರು.

ಸಾರಿಗೆ ವ್ಯವಸ್ಥಾಪಕ ಪ್ರಭು ಮಾತನಾಡಿ, ಇಂದು ತಾಲ್ಲೂಕಿನಲ್ಲಿ ಎಲ್ಲರೂ ಸಂಭ್ರಮಿಸುವ ದಿನವಾಗಿದೆ, ಮಹಿಳೆಯರು ಈಡೀ ರಾಜ್ಯಾದ್ಯಂತ ಉಚಿತವಾಗಿ ಹೋಗಬಹುದು, ಮೂರು ತಿಂಗಳ ವರೆಗೆ ಯಾವುದಾದರೂ ಗುರುತಿನ ಚೀಟಿ ತೋರಿಸಿ ಪ್ರಯಾಣ ಬೆಳೆಸಬಹುದು ನಮ್ಮ ಘಟಕದಲ್ಲಿ ಸುಮಾರು 61. ಬಸ್ಸ್ ಗಳು 55 ಮಾರ್ಗಗಳ ಮೂಲಕ ಈಡಿ ತಾಲ್ಲೂಕಿನ ಆದ್ಯಂತ ಸಂಚಾರ ಮಾಡಲಿವೆ ಎಂದರು..

ರಾಜ್ಯ ರೈತ ಸಂಘದ ರಾಜ್ಯಾಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ,
2006 ರಲ್ಲಿ ಈಡೀ ತಾಲ್ಲೂಕಿನ ಒಂದು ಬಸ್ ವ್ಯವಸ್ಥೆ ಇರಲಿಲ್ಲ ಆದರೆ ಅಂದಿನಿಂದ ಹೋರಾಟದಿಂದ ಇಂದು ಸುಸಜ್ಜಿತವಾದ ಸಾರಿಗೆ ವ್ಯವಸ್ಥೆ ಹಾಗೂ ಡಿಪೋ ಈಗೇ ಬಯಲು ಸೀಮೆಯಲ್ಲಿ ಸಾರ್ವಜನಿಕ ಪ್ರಯಾಣಕ್ಕೆ‌ ಅನುಕೂಲವಾಗುವ ರೀತಿಯಲ್ಲಿ ಘನ‌ ಸರಕಾರದ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿರುವುದು ಶ್ಲಾಘನೀಯ ಎಂದರು.

ಜಿಪಂ ಮಾಜಿ ಸದಸ್ಯ ಬಿ.ಪಿ.ಪ್ರಕಾಶ್ ಮೂರ್ತಿ ಮಾತನಾಡಿ, ರಾಜ್ಯದ ಕಾಂಗ್ರೆಸ್ ಆಡಳಿತ ಸರಕಾರ ಚುನಾವಣೆ ಪೂರ್ವದಲ್ಲಿ ನೀಡಿದ ಗ್ಯಾರಂಟಿ ಯೋಜನೆಯಲ್ಲಿ ಮೊದಲ ಘಟ್ಟವಾಗಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಗ್ಯಾರಂಟಿ ಈಡೆರಿಸಿದೆ, ಇನ್ನೂ ನಾವು ಲಿಂಗ ತಾರತಮ್ಯ ಹೋಗಲಾಡಿಸಲು ಎಲ್ಲಾ ಧರ್ವ ಜಾತಿ ಈಗೇ ವಿವಿಧ ಸಮುದಾಯದ ಮಹಿಳೆಯರಿಗೆ ವಿವಿಧ ವರ್ಗದ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿದೆ.ನಮ್ಮ‌ಸರಕಾರ ಉತ್ತಮವಾಗಿ ಯೋಜನೆ ಗಳನ್ನು ತರುವ ಮೂಲಕ ಇತಿಹಾಸ ಮರುಕಳಿಸುತ್ತದೆ ಎಂದರು.

ಇನ್ನೂ‌ ಮಹಿಳೆಯರಿಗೆ 50% ಮೀಸಲಾತಿ ನೀಡುವ ಮೂಲಕ ಸ್ತ್ರೀಯರ ಉತ್ತೇಜನಕ್ಕೆ ಸರಕಾರ ಬದ್ದವಾಗಿದೆ ಎಂದರು.

ಇನ್ನೂ ನಗರಸಭೆ ಸದಸ್ಯ ಕೆ.ವೀರಭದ್ರ ಯ್ಯ ಮಾತನಾಡಿ, ರಾಜ್ಯದ ಉದ್ದಗಲಕ್ಕೂ ಮಹಿಳೆಯರು ಓಡಾಡುವ ಮೂಲಕ ಮಹಿಳೆಯರು ಆರ್ಥಿಕ ಸ್ಥೈರ್ಯ ಹೆಚ್ಚಿಸುವ ಮೂಲಕ ಮಹಿಳೆಯರು ಪಾಸ್ ಪಡೆಯುವ‌ ಮೂಲಕ ಬಸ್ ನಲ್ಲಿ ಪ್ರಯಾಣಿಸಿ ಎಂದರು.

ಈದೇ ಸಂಧರ್ಭದಲ್ಲಿ ತಹಶಿಲ್ದಾರ್ ರೇಹಾನ್ ಪಾಷ, ಕೆಎಸ್ ಆರ್‌ಟಿಸಿ ವ್ಯವಸ್ಥಾಪಕ ಪ್ರಭು, ನಗರಸಭೆ ಸದಸ್ಯ ಸುಮಕ್ಕ, ಮಂಜುಳಾ, ಸುಮಾ, ಕವಿತಾ, ಸುಜಾತ, ಸರಸ್ವತಿ, ಕೆ.ವೀರಭದ್ರಯ್ಯ, ರಮೇಶ್ ಗೌಡ, ರಾಘವೇಂದ್ರ, ಚಳ್ಳಕೆರೆ ಪ್ಪ, ಮಲ್ಲಿಕಾರ್ಜುನ, ವೈ ಪ್ರಕಾಶ್, ಜಿಪಂ ಮಾಜಿ ಸದಸ್ಯ ಬಿ.ಪಿ.ಪ್ರಕಾಸ್ ಮೂರ್ತಿ, ಕೆ.ಪಿ.ಭೂತಯ್ಯ, ಸೈಯದ್, ಶಿವಕುಮಾರ್, ಪ್ರಭುದೇವ್, ಗೀತಾಬಾಯಿ, ವಿರೂಪಾಕ್ಷ, ಸಿಪಿಐ ದೇಸಾಯಿ, ಪಿಎಸ್ಐ ಕೆ.ಸತೀಶ್ ನಾಯ್ಕ್, ಬಸವರಾಜ್, ಇತರೆ ಮಹಿಳಾ ಕಾರ್ಯಕರ್ತರು ಸಾರ್ವಜನಿಕರು ಪಾಲ್ಗೊಂಡಿದ್ದರು ‌

Namma Challakere Local News
error: Content is protected !!