ನಾಯಕನಹಟ್ಟಿ ರೈತ ಸಂಪರ್ಕ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಣೆ ಕೃಷಿ ಅಧಿಕಾರಿ ಹೇಮಂತ್ ನಾಯ್ಕ

ನಾಯಕನಹಟ್ಟಿ:: ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ವಿಶ್ವ ಪರಿಸರ ದಿನ ಅಂಗವಾಗಿ ಸಸಿ ನೆಟ್ಟು ಮಾತನಾಡಿದರು. ವಿಶ್ವ ಪರಿಸರ ದಿನದೆಂದು ಎಲ್ಲರೂ ಉತ್ಸಾಹದಿಂದ ಗಿಡಗಳನ್ನು ನೆಡಲು ಮುಂದಾಗುತ್ತಾರೆ ಆ ನಂತರದಲ್ಲಿ ನೆಟ್ಟಿರುವ ಗಿಡದ ಬಗ್ಗೆ ಕಾಳಜಿ ವಹಿಸುವುದಿಲ್ಲ ಹಾಗಾಗಿ ಗಿಡಗಳು ಒಣಗಿರುವುದರಿಂದ ನಮ್ಮ ಶ್ರಮ ವ್ಯರ್ಥವಾಗುತ್ತದೆ ಅದಕ್ಕಾಗಿ 10 ಗಿಡಗಳನ್ನು ನೆಡುವುದರ ಬದಲು ಒಂದು ಗಿಡವನ್ನು ನೆಟ್ಟು ಅದಕ್ಕೆ ಬೇಲಿಯನ್ನು ಹಾಕಿ ವರ್ಷಪೂರ್ತಿ ನೀರು ಗೊಬ್ಬರ ನೀಡಿ ಪೋಷಿಸಿದರೆ ನಾವು ನೆಟ್ಟ ಗಿಡ ಹೆಮ್ಮೆರವಾಗಿ ಬೆಳೆಯುವುದರಲ್ಲಿ ಯಾವುದೇ ಸಂದೇಹವಿಲ್ಲ ಇದರಿಂದ ಪರಿಸರ ದಿನಕ್ಕೆ ನಿಜವಾದ ಅರ್ಥ ದೊರೆಯುತ್ತದೆ ಎಂದರು.

ಇದೇ ಸಂದರ್ಭದಲ್ಲಿ ರೈತ ಅಶೋಕ್ ರೆಡ್ಡಿ, ಮಲ್ಲೂರಹಳ್ಳಿ ಎಂ.ಪ್ರಕಾಶ್, ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಗಳ ಎಂ ಎಸ್ ಶ್ರೀನಿವಾಸ್, ಗಂಗಮ್ಮ, ಸಿ ಶಿಲ್ಪ, ಮಹಾಂತೇಶ್, ಇದ್ದರು

Namma Challakere Local News
error: Content is protected !!