ಚಿತ್ರದುರ್ಗ : ಎಸ್.ಜೆ.ಎಂ. ಕಲಾ & ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಎನ್.ಎಸ್.ಎಸ್. ಹಾಗೂ ಪರಿಸರ ವಿಜ್ಞಾನ ವಿಭಾಗಗಳ ವತಿಯಿಂದ ಸಸಿ ನೆಡುವುದರ ಮೂಲಕ “ವಿಶ್ವ ಪರಿಸರ ದಿನಾಚರಣೆ” ಕಾರ್ಯಕ್ರಮವನ್ನು ಆಚರಿಸಲಾಯಿತು.
ಐಕ್ಯೂಎಸಿ ಸಂಚಾಲಕರಾದ ಶ್ರೀ ಎನ್. ಚಲುವರಾಜು, ಇವರು ವಿಶ್ವದ ಪರಿಸರ ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಹೊಣೆಯಾಗಿದೆ. ಪ್ಲಾಸ್ಟಿಕ್ ನಿರ್ಮೂಲನೆ ನಮ್ಮ ಕರ್ತವ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಲ್.ಈಶ್ವರಪ್ಪನವರು ಪ್ಲಾಸ್ಟಿಕ್ ಬಳಕೆಯಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳನ್ನು ಕುರಿತು ಮಾತನಾಡಿದರು. ಹೋಟೆಲ್‌ಗಳಲ್ಲಿ ನೀಡುವ ಆಹಾರ ಮೊದಲಾದವುಗಳು ಪ್ಲಾಸ್ಟಿಕ್‌ನಿಂದ ಸರಬರಾಜಾಗಿ ಪರಿಸರ ಮಾಲಿನ್ಯ ಉಂಟಾಗುತ್ತದೆ ಎಂದು ಮಾತನಾಡಿದರು.
ವಿದ್ಯಾರ್ಥಿಗಳು ಘೋಷ ವಾಕ್ಯವನ್ನು ನೀಡಿದರು ಹಾಗೂ ವಿದ್ಯಾರ್ಥಿಗಳಿಗೆ ಪರಿಸರ ಕುರಿತು ಬೋಧನೆಯನ್ನು ಮಾಡಿದರು.
ಈ ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಅಧಿಕಾರಿಗಳಾದ ಶ್ರೀ ಜಿ.ಎಸ್. ನಾಗರಾಜ, ಡಾ.ಸಿ.ಟಿ.ಜಯಣ್ಣ ಶ್ರೀ ಎಲ್. ರಾಜಾನಾಯ್ಕ, ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ರೂಪ ಎಂ.ಸಿ. ಶ್ರೀ ಸೈಯದ್ ಅಹಮದ್, ಶ್ರೀಮತಿ ಶ್ವೇತ ಬಿ.ವೈ. ಶ್ರೀಮತಿ ಬಿ.ಎಂ. ಅಂಬಿಕ, ನಂದಿನಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಾರ್ಥನೆ: ಕು. ಪವಿತ್ರ, ಸ್ವಾಗತ: ಕು. ಕವನ, ವಂದನಾರ್ಪಣೆ: ಕು. ಚಂದನ ಹಾಗೂ ನಿರೂಪಣೆ: ಕು.ಉಷಾ

Namma Challakere Local News
error: Content is protected !!