ಚಳ್ಳಕೆರೆ : ಒಂದು ಕಟ್ಟಡಕ್ಕೆ ಬುನಾದಿ ಯಾವ ರೀತಿ ಮುಖ್ಯವೋ ಅದೇ ರೀತಿಯಲ್ಲಿ ಸಮಾಜಕ್ಕೆ ಶಿಕ್ಷಣ ಎಂಬುದು ಅತ್ಯಗತ್ಯ ಅದ್ದರಿಂದ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ನೂತನ ಶಾಸಕ ಟಿ.ರಘುಮೂರ್ತಿ ಹೇಳಿದರು.
ಚಳ್ಳಕೆರೆ ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಗಿರುವ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗಹಿಸಿ ಮಾತನಾಡಿದರು.
ಇನ್ನೂ ವಾಸವಿ ಯುವಜನ ಸಂಘವು ಕಳೆದ ಹದಿನೈದು ವರ್ಷಗಳಿಂದ ನಿರಂತರವಾಗಿ ಈ ಸೇವೆ ಮುಂದುವರೆಸಿಕೊAಡು ಬರುತ್ತಿರುವುದು ಶ್ಲಾಘನೀಯ, ಪ್ರತಿಭಾವಂತ ಮಕ್ಕಳನ್ನು ಈ ರೀತಿ ವೇದಿಕೆಯಲ್ಲಿ ಗುರುತಿಸಿದರೆ ಅವರ ಪ್ರತಿಭೆ ಇನಷ್ಟು ಪುಷ್ಠಿ ಸಿಗುವ ಅವಕಾಶಗಳು ಇವೆ ಆದ್ದರಿಂದ ತಾಲೂಕಿನ ಎಲ್ಲಾ ಜಾತಿ ಜನಾಂಗದ ವಿದ್ಯಾವಂತರ ಪ್ರತಿಭೆಯ ಗುರುತಿಸುವ ಕಾರ್ಯ ಮಾಡಲಾಗುತ್ತದೆ ಎಂದರು.

ಇನ್ನೂ ಶಿಕ್ಷಣ ಕ್ಷೇತ್ರದಲ್ಲಿ ಈಡೀ ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಳಿಂದ ಅಂದರೆ ನಾನು ಕಳೆದ ಹತ್ತುಗಳ ಕಾಲದಿಂದ ಶಾಸಕನಾಗಿ ಬಂದಾಗಿನಿAದ ಇಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡುವ ಮೂಲಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದು ಕೊಳ್ಳುತ್ತಿದೆ. ಇನ್ನೂ 2023ಕ್ಕೆ ಬಯಲು ಸೀಮೆಯ ಮಕ್ಕಳು ಈಡೀ 204 ತಾಲೂಕಿನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಬರುವ ಮೂಲಕ ತಾಲೂಕಿನ ಕಿರ್ತಿ ಹೆಚ್ಚಳ ಮಾಡಿದ್ದಾರೆ.
ರ‍್ಯವೈಶ್ಯ ಸಂಘದ ಜಿಲ್ಲಾಧ್ಯಕ್ಷ ಚಿದಾನಂದ ಗುಪ್ತ ಮಾತನಾಡಿ, ಕಳೆದ ನಲವತ್ತು ವರ್ಷಗಳಿಂದ ನಿರಂತರ ಸೇವೆ ಮಾಡುವ ಮೂಲಕ ವಾಸವಿ ಯುವಕರು ತಾಲೂಕಿಗೆ ಮಾದರಿಯಾಗಿದ್ದಾರೆ, ಬಯಲು ಸೀಮೆಲ್ಲಿ ಬರಗಾಲ ಇದ್ದ ಸಂಧರ್ಭದಲ್ಲಿ ಕೂಡ ಬಡ ಜನರಿಗೆ ಸಹಾಯ ಮಾಡುವ ಮೂಲಕ ಅವರ ಸಂಕಷ್ಟಕ್ಕೆ ನೆರವಾಗಿದ್ದಾರೆ ಅದರಂತೆ ಇಂದು ಪ್ರತಿಭಾವನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡುತ್ತಿರುವುದು ಶಾಘ್ಲನೀಯ ಎಂದರು.
ಇನ್ನೂ ಸಮಾಜ ಸೇವಕ ರಘುನಾಥ್ ಬಾಬು ಮಾತನಾಡಿ, ನಿಮ್ಮ ಜೀವನ ಇನಷ್ಟು ಉತ್ಕçೃಷ್ಟಕ್ಕೆ ಹೇರಲಿ, ಪ್ರತಿಭೆ ಎಲ್ಲರಲ್ಲೂ ಇರುತ್ತೆ ಆದರೆ ಅದನ್ನು ಅಭಿವ್ಯಕ್ತಪಡಿಸುವ ಮೂಲಕ ತಂದೆ ತಾಯಿಗಳಿಗೆ ಕೀರ್ತಿ ತರಬೇಕು, ದೊಡ್ಡ ದೊಡ್ಡ ಕನಸು ಕಟ್ಟಿದ ತಂದೆ ತಾಯಿಗಳಿಗೆ ನನಸು ಮಾಡುವ ಮೂಲಕ ವಿದ್ಯಾರ್ಥಿಗಳು, ಮುಪ್ಪಿನ ಕಾಲದಲ್ಲಿ ತಂದೆ ತಾಯಿಗಳನ್ನು ವೃದ್ದಶ್ರಾಮಕ್ಕೆ ಬಿಡುವ ಪರಿಪಾಟ ಬದಲಾಗಬೇಕು ಮುಂದಿನ ದಿನಗಳಲ್ಲಿ ನಮ್ಮ ತಂದೆ ತಾಯಿಯರಿಗೆ ನೆರವಾಗಬೇಕು. ವಿದ್ಯಾರ್ಥಿ ದೆಸೆಯಿಂದಲು ಇಂತಹ ಮೌಲ್ಯವನ್ನು ರೂಡಿಸಿಕೊಳ್ಳಿ, ವಿದ್ಯಾರ್ಥಿಗಳು ಕೇವಲ ಪರಿಕ್ಷೆಗೋಸ್ಕರ ವ್ಯಾಸಂಗ ಮಾಡದೆ ಜ್ಞಾನಾರ್ಜನೆೆಗಾಗಿ ವ್ಯಾಸಂಗ ಮಾಡಿ ಎಂದು ಕಿವಿಮಾತು ಹೇಳಿದರು.
ಇನ್ನೂ ವಾಸವಿ ಯುವಜನ ಸಂಘದ ಉಪಾಧ್ಯಕ್ಷ ಕಾರ್ತಿಕ್ ಮಾತನಾಡಿ, ಬಯಲು ಸೀಮೆಗೆ ಶಾಸಕರಾಗಿ ಆಯ್ಕೆಯಾಗಿ ಬಂದಾಗಿನಿAದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆಧ್ಯತೆ ನೀಡಿದ ಶಾಸಕ ಟಿ.ರಘುಮೂರ್ತಿ ಅವರ ಕನಸಿನಂತೆ ಇಂಜಿನಿಯಾರ್ ಕಾಲೇಜು, ಜಿಟಿಟಿಸಿ ಕೇಂದ್ರ ಈಗೇ ಶಿಕ್ಷಣ ಆದ್ಯತೆ ನೀಡಿದ ಅವರು ವೈದ್ಯಕೀಯ ಕಾಲೇಜು ತರಬೇಕು ಎಂದು ಬೇಡಿಕೆ ಇಟ್ಟರು.

ಇದೇ ಸಂಧರ್ಭದಲ್ಲಿ ವಾಸವಿ ಯುವಜನ ಸಂಘ ಕೃಷ್ಣಮೂರ್ತಿ, ವಾಸವಿ ಯುವಜನ ಸಮಘದ ತಾಲೂಕು ಅಧ್ಯಕ್ಷ ಚೇತನ್, ನಗರಸಭೆ ಸದಸ್ಯರಾದ ಮಾಜಿ ಅದ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ, ಸದಸ್ಯೆ ಕವಿತಾ ಬೋರಯ್ಯ, ಸುಮಕ್ಕ ಭರಮಣ್ಣ, ಸುಜಾತಾ, ಇತರರು ಹಾಗೂ ವಾಸವಿ ಸಮುದಾಯದ ಪದಾಧಿಕಾರಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಬಾಕ್ಸ್ ಮಾಡಿ :
ಶಾಸಕರು ಯಾರು ಬೇಕಾದರೂ ಆಗಬಹುದು ಆದರೆ ಶಿಕ್ಷಣ ಪಡೆದಿದ್ದರಿಂದ ಇಲ್ಲಿ ನಾನು ಒಂದು ಕಾರ್ಯಾಂಗದ ವ್ಯವಸ್ಥೆಯಲ್ಲಿ ಪದವಿ ಪಡೆದು ಒಂದು ವ್ಯವಸ್ಥೆಯಲ್ಲಿ ಕರ್ತವ್ಯ ನಿರ್ವಹಿಸಿ ನಂತರ ಶಾಸಕನಾಗಿ ನಿಮ್ಮ ಮುಂದೆ ಇದ್ದೆನೆ ಆದರಂತೆ ನಿಮ್ಮ ಋಣ ತೀರಿಸಲು ನಾನು ಅತೀ ಹೆಚ್ಚಿನದಾಗಿ ಶಿಕ್ಷಣ ಕೇತ್ರಕ್ಕೆ ಮಹತ್ವ ನೀಡಿದ್ದೆನೆ..

  • ಶಾಸಕ ಟಿ.ರಘುಮೂರ್ತಿ
Namma Challakere Local News
error: Content is protected !!