ಪ್ರಮಾಣಿಕತೆಗೆ ಹೆಸರುವಾಸಿಯಾದ ನಿವೃತ್ತಿ ಪಿಎಸ್‌ಐ ತಿಮ್ಮಪ್ಪರ ಸೇವೆ ಅನನ್ಯ : ಎಸ್ಪಿ ಕೆ.ಪರುಶುರಾಮ್
ಚಳ್ಳಕೆರೆ : ಸೇವೆಯಲ್ಲಿ ಇರುವಷ್ಟು ದಿನಗಳ ಕಾಲ ಪ್ರಮಾಣಿಕತೆಗೆ ಹೆಸರು ವಾಸಿಯಾದ ಚಿತ್ರದುರ್ಗ ಟೌನ್ ಪೊಲೀಸ್ ಪಿಎಸ್ ಐ ಡಿ.ತಿಮ್ಮಪ್ಪ ದಕ್ಷ ಅಧಿಕಾರಿಯಾಗಿ ಸೇವೆಯಲ್ಲಿ ಇರುವಷ್ಟು ದಿನಗಳ ಕಾಲ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ್ ಹೇಳಿದರು.
ಅವರು ನಗರದ ಪೊಲೀಸ್ ಕಛೇರಿಯಲ್ಲಿ ನಿವೃತ್ತಿ ಹೊಂದಿದ ಡಿ.ತಿಮ್ಮಪ್ಪ ರವರಿಗೆ ಬಿಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಡಿ.ತಿಮ್ಮಪ್ಪನವರು ಸುದೀರ್ಘವಾಗಿ ಪೊಲೀಸ್ ಇಲಾಖೆಗೆ ಸೇವೆ ಸಲ್ಲಿಸಿದ್ದಾರೆ ಕಳೆದ ದಿ:04/06/1993 ರಂದು ಪೋಲೀಸ್ ಇಲಾಖೆಗೆ ಸೇರಿ 29 ವರ್ಷ 11 ತಿಂಗಳು 27 ದಿನಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ದಿನಾಂಕ:31/05/2023 ರಂದು ವಯೋ ನಿವೃತ್ತಿ ಹೊಂದಿದ್ದಾರೆ ಎಂದರು.
ಇನ್ನೂ ನಿವೃತ್ತ ಪಿಎಸ್ಐ ಡಿ.ತಿಮ್ಮಪ್ಪ ಮಾತನಾಡಿ ನನ್ನ ಸೇವಾ ಅವಧಿಯಲ್ಲಿ ನನಗೆ ಕರ್ತವ್ಯ ನಿರ್ವಹಿಸಲು ಸಹಕಾರ ನೀಡಿದ ಎಲ್ಲಾ ಅಧಿಕಾರಿಗಳಿಗೂ ಮತ್ತು ಸಿಬ್ಬಂದಿಯವರುಗಳಿಗೂ ನನ್ನ ಅನಂತ ಅನಂತ ಧನ್ಯವಾದಗಳು.
ನನ್ನ ಸೇವಾ ಅವಧಿಯಲ್ಲಿ ನಾನು ಕರ್ತವ್ಯ ನಿರ್ವಹಿಸುವ ಕಾಲಕ್ಕೆ ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸುವ ಸಲುವಾಗಿ ಹೇಳಿದ ಮಾತುಗಳು ಯಾರಿಗಾದರೂ ನೋವುಂಟು ಆಗಿದ್ದರೆ ಅವರೆಲ್ಲರಲ್ಲಿಯೂ ಸಹ ನಾನು ಕ್ಷಮೆಯಾಚಿಸುತ್ತೇನೆ ಎಂದು ಕೃತಜ್ಞತೆಗಳನ್ನು ಕೂಡ ಸಲ್ಲಿಸಿದ್ದಾರೆ.
ಇಧೇ ಸಂಧರ್ಭದಲ್ಲಿ ಹೆಚ್ಚುವರಿ ಪೋಲೀಸ್ ಅಧೀಕ್ಷಕರಾದ ಕುಮಾರಸ್ವಾಮಿ, ಡಿವೈಎಸ್ಪಿ ಬಸವರಾಜ್,ಡಿವೈಎಸ್ಪಿ ರಮೇಶ್ ಕುಮಾರ್, ಸಿಪಿಐ ಸಮೀವುಲ್ಲಾ, ಸಿಪಿಐ ದೇಸಾಯಿ, ,ಪಿಎಸ್ಪಿ ಸತೀಶ್ ನಾಯ್ಕ್, ಬಸವರಾಜ್, ಇತರರು ಇದ್ದರು..