ಚಳ್ಳಕೆರೆ : ದಾವಣಗೆರೆ ವಿಶ್ವವಿದ್ಯಾನಿಲಯ ಹಾಗೂ ಎಸ್.ಜೆ.ಎಂ. ಕಲಾ & ವಾಣಿಜ್ಯ ಮಹಾವಿದ್ಯಾಲಯ ಸಹಯೋಗದೊಂದಿಗೆ ರಾಷ್ಟಿçÃಯ ಸೇವಾ ಯೋಜನಾ ಘಟಕ -01 & 02 ರ ಅಡಿಯಲ್ಲಿ 6 ದಿನಗಳ ರವರೆಗೆ ಶ್ರೀ ಎಸ್. ನಿಜಲಿಂಗಪ್ಪ ಸ್ಮಾರಕ ಸೀಬಾರ ಗ್ರಾಮದಲ್ಲಿ ಹಮ್ಮಿಕೊಂಡಿದ್ದು, ರಾ.ಸೇ.ಯೋ 2022-23 ವಿಶೇಷ ವಾರ್ಷಿಕ ಶಿಬಿರದ ಕೊನೆಯ ದಿನವಾದ ಇಂದು ಸಮಾರೋಪ ಸಮಾರಂಭದ ದಿವ್ಯ ಸಮ್ಮುಖವನ್ನು ವಹಿಸಿ ಮಾತನಾಡಿದ ಚಲುವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮಿಗಳು ಮಾತನಾಡಿ
‘ಕ್ಷರ’ ಎಂದರೆ ನಾಶಗೊಳ್ಳುವುದು. ‘ಅಕ್ಷರ’ ವೆಂದರೆ ನಾಶವಿಲ್ಲದ್ದು. ನಾಶವಾಗದ ಜ್ಞಾನದ ಅವಶ್ಯಕತೆ ನಮಗೆ ಬೇಕಿದೆ. ಉತ್ತಮ ಜ್ಞಾನ ಪಡೆಯುತ್ತಾ, ಇತರರನ್ನು ಅರಿವಿನ ಕಡೆಗೆ ಕರೆದೊಯ್ಯುವ ಕೆಲಸವನ್ನು ಇಂದಿನ ಯುವ ಸಮೂಹ ಮಾಡಬೇಕಿದೆ. ರಾ.ಸೇ.ಯೋ. ಶಿಬಿರಗಳಿಂದ ಪಠ್ಯೇತರವಾದ ಅನೇಕ ಜ್ಞಾನ ಶಿಸ್ತುಗಳನ್ನು ಬೆಳಿಸಿಕೊಳ್ಳಬಹುದು. ರಾಷ್ಟಿçÃಯ ಭಾವಕ್ಯತೆಯನ್ನು ಮೂಡಿಸಬಹುದು. ನಾವೆಲ್ಲರೂ ಒಂದು ಎನ್ನುವ ಭಾವನೆ ನಮ್ಮದಾದಾಗ ರಾಷ್ಟç ಪ್ರಗತಿಯತ್ತ ಸಾಗುತ್ತದೆ. ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳಬೇಕೆಂದು ಸಲಹೆ ನೀಡಿದರು.
ಸಮಾಜದ ಮುಖಂಡರಾದ ಶ್ರೀ ಎಸ್. ಷಣ್ಮುಖಪ್ಪನವರು ಮಾತನಾಡಿ ಕಳೆದ 7 ದಿನಗಳಿಂದ ಶಿಬಿರಾರ್ಥಿಗಳು ಸೀಬಾರ ಗ್ರಾಮ ಹಾಗು ನಿಜಲಿಂಗಪ್ಪನವರ ಸ್ಮಾರಕದ ಸುತ್ತಮುತ್ತಲಿನ ಪ್ರದೇಶವನ್ನು ಅಚ್ಚುಕಟ್ಟಾಗಿ ಸ್ವಚ್ಛಗೊಳಿಸಿದ್ದಾರೆ. ಇದರಿಂದ ಸ್ವಚ್ಛ ಗ್ರಾಮದ, ನಗರದ, ರಾಷ್ಟçದ ಕಲ್ಪನೆ ನಮ್ಮಲ್ಲಿ ಮೂಡುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ.ಎಲ್.ಈಶ್ವರಪ್ಪನವರು ನಮ್ಮ ಮನೆಗಳನ್ನು ಸ್ವಚ್ಛವಾಗಿಟ್ಟುಕೊಂಡ ಹಾಗೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಮತ್ತು ಸ್ವಚ್ಛತೆಯ ಜಾಗೃತಿ ನಮ್ಮಲ್ಲಿ ಮೂಡಬೇಕು ಎಂದು ಶಿಬಿರಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಇತಿಹಾಸ ಸಹ ಪ್ರಾಧ್ಯಾಪಕರಾದ ಪ್ರೊ. ಸಿ. ಬಸವರಾಜಪ್ಪ, ಮುಖ್ಯ ಗ್ರಂಥಾಲಯ ಅಧಿಕಾರಿಗಳಾದ ಶ್ರೀ ಎನ್. ಚಲುವರಾಜು, ಶ್ರೀ ಮಕ್ಸೂದ್ ಅಹಮದ್, ಶಿಕ್ಷಕರಾದ ಯೋಗೇಂದ್ರಪ್ಪ, ರೇಣುಕಮ್ಮ, ಶ್ರೀಮತಿ ಶ್ವೇತ ಹಾಗೂ ಊರಿನ ಮುಖಂಡರಾದ ದೇವೇಂದ್ರಪ್ಪ, ಶಿಬಿರಾಧಿಕಾರಿಗಳಾದ ಜಿ.ಎಸ್. ನಾಗರಾಜ, ಡಾ. ಸಿ.ಟಿ. ಜಯಣ್ಣ ಹಾಗೂ ಶ್ರೀ ಶಿವಕುಮಾರ್ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರಾಷ್ಟಿçÃಯ ಭಾವ್ಯಕ್ಯತಾ ಅಂಗವಾಗಿ ಭಾರತ ಭೂಪಟವನ್ನು ಬರೆದು ಅದರ ಮೇಲೆ ದೀಪೋತ್ಸವವನ್ನು ನಡೆಸಲಾಯಿತು. ರಾಷ್ಟಿçÃಯ ಸೇವಾ ಯೋಜನಾ ನೆನಪಿಗಾಗಿ ಸೀಬಾರ ಗ್ರಾಮದ ಶಾಲಾ ಆವರಣದಲ್ಲಿ ಹಾಗೂ ನಿಜಲಿಂಗಪ್ಪನವರ ಸ್ಮಾರಕದ ಒಳಗೆ ವಿವಿಧ ತಳಿಯ ಸಸಿಗಳನ್ನು ನೆಡಲಾಯಿತು.
ಅಬ್ದುಲ್ ಅಜೀಜ್ ಕಾರ್ಯಕ್ರಮ ನಿರೂಪಿಸಿದರು. ಕು. ಚಂದನ ಸ್ವಾಗತಿಸಿದರು. ಕು. ಉಷಾ ವಂದನಾರ್ಪಣೆ ಮಾಡಿದರು.