ಚಳ್ಳಕೆರೆ : ಚಳ್ಳಕೆರೆ ನಗರದ ವ್ಯಾಪ್ತಿಯಲ್ಲಿ ಅಪಘಾತಗಳ ಸಂಖ್ಯೆ ದಿನದ ದಿನಕ್ಕೆ ಹೇರಳವಾಗುತ್ತಿದ್ದು ಅದರಂತೆ ತಡ ರಾತ್ರಿ ಚಳ್ಳಕೆರೆ ಕಡೆಯಿಂದ ಬೆಂಗಳೂರು ಕಡೆಯಗೆ ಹೋಗುತ್ತಿದ್ದ ಟಾಟಾಎಸ್ ವಾಹನಕ್ಕೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಟಾಟಾಎಸ್ ವಾಹನ ಮಾಲಿಕ ಆರ್ಮುಗಂ(೪೨) ಸ್ಥಳದಲ್ಲೇ ಮೃತಪಟ್ಟರೆ ಚಾಲಕ ಮಾರುತಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇನ್ನೂ ಈ ಪ್ರಕರಣ ಚಳ್ಳಕೆರೆ ಠಾಣೆಯಲ್ಲಿ ದಾಖಲಾಗಿದೆ.
ರಾಷ್ಟಿçÃಯ ಹೆದ್ದಾರಿ ಲಕ್ಷ್ಮಿಪುರ ಬಳಿ ಶನಿವಾರ ರಾತ್ರಿ9 ಗಂಟೆ ಸುಮಾರಿನಲ್ಲಿ ಹಿರಿಯೂರು ಕಡೆಯಿಂದ ಚಳ್ಳೆಕೆರೆ ಕಡೆ ಬರುತ್ತಿದ್ದ ಬೃಹತ್ ಲಾರಿ ಹಾಗೂ
ಟಾಟಾ ಎಸ್ ವಾಹನ ಮಾಲಿಕ ತಮಿಳು ನಾಡಿನ ದರ್ಮಪುರಿ ಜಿಲ್ಲೆಯ ಪಾಲಕೋಟೆ ಗ್ರಾಮದವರಾಗಿದ್ದು ಇದು ಲಾರಿ ಚಾಲಕನ ಅಜಾಗರೂಕತೆ ಕಾರಣವಾಗಿದೆ ಎಂದು ತಿಳಿಸಿದುಬಂದಿದೆ.
ಸ್ಥಳಕ್ಕೆ ಪಿಎಎಸ್ಐ ಸತೀಶ್ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.