ಚಳ್ಳಕೆರೆ : ಸಾರ್ವಜನಿಕರಿಗೆ ಅವಶ್ಯವಿಲ್ಲದ ವಸ್ತುಗಳನ್ನು ನೀಡಿ, ಮತ್ತೆ ಮರು ಬಳಕೆ ಮಾಡಲು ಅವಶ್ಯಕತೆ ಇರುವ ಜನರಿಗೆ ನೀಡಬಹುದಾದ ಒಂದು ಉತ್ತಮ ವೇದಿಕೆ ಚಳ್ಳಕೆರೆ ನಗರಸಭೆಯಿಂದ ಮಾಡಲಾಗಿದೆ ಎಂದು ನಗರಸಭೆ ಉಪಾಧ್ಯಕ್ಷೆ ಮಂಜುಳಾ ಪ್ರಸನ್ನ ಕುಮಾರ್ ಹೇಳಿದರು.

ಇನ್ನೂ ಅವಶ್ಯಕತೆ ಇರದೆ‌ ಇರುವ ವಸ್ತುಗಳನ್ನು ನೀಡಿದರೆ ಅಂತಹ ವ್ಯಕ್ತಿಗಳಿಗೆ ನಗರಸಭೆಯಿಂದ ಪ್ರಶಸ್ತಿ ಪತ್ರ ನೀಡಲಾಗುತ್ತದೆ ಎಂದು ಪೌರಾಯುಕ್ತ ರಾಮಕೃಷ್ಣ ಹೇಳಿದ್ದಾರೆ.

ವಸ್ತುಗಳನ್ನು ನಗರಸಭೆ ವತಿಯಿಂದ ಅವಶ್ಯಕತೆ ಇರುವವರಿಗೆ ತಲುಪಿಸಲಾಗುವುದು ಉದಾಹರಣೆ ಹಳೆಯ ಪುಸ್ತಕಗಳು, ಮಕ್ಕಳ ಆಟಿಕೆ ಸಾಮಾನುಗಳು, ಬಟ್ಟೆಗಳು ಇತರೆ ವಸ್ತುಗಳನ್ನು ನೀಡಬಹುದು

ಇದರಿಂದ ವಸ್ತುಗಳ ಮರು ಬಳಕೆಯಾಗುವುದು ಇದನ್ನು ಪ್ರೋತ್ಸಾಹಿಸಲು ಈ ರೀತಿ ನಗರದಲ್ಲಿ ಆರು ಸೆಂಟರ್ ಗಳನ್ನು ಚಳ್ಳಕೆರೆ ನಗರ ಸಭೆಯಿಂದ ತೆರೆಯಲಾಗಿದೆ.

ಅದರಂತೆ ತ್ಯಾಗರಾಜನಗರ, ಪಂಪ ಹೌಸ್ ಬಳಿ, ಆಯುರ್ವೇದಿಕ್ ಕಾಲೇಜ್ ಹಿಂಭಾಗದಲ್ಲಿ, ಮತ್ತು ಸಂತೆ ಮೈದಾನದಲ್ಲಿ , ಕುಬೇರ ನಗರದಲ್ಲಿ ತೆರೆಯಲಾಗಿದೆ ಇದರ ಉಪಯೋಗವನ್ನು ಸಾರ್ವಜನಿಕರು ಜೂನ್ 5 ರ ವರೆಗೆ ಪಡೆಯಬಹುದು ಎಂದು ತಿಳಿಸಿದ್ದಾರೆ.

ಇನ್ಮೂ ನಗರಸಭೆ ಉಪಾಧ್ಯಕ್ಷೆ ಮಂಜುಳಾ ಪ್ರಸನ್ನ ಕುಮಾರ್, ನಗರಸಭೆ ಸದಸ್ಯ ಜಯಣ್ಣ, , ರಮೇಶ್ ಗೌಡ , ವೆಂಕಟೇಶ, ಇತರೆ ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ನಗರಸಭೆ ಪೌರಕಾರ್ಮಿಕರು ಹಾಜರಿದ್ದರು.

About The Author

Namma Challakere Local News
error: Content is protected !!