ಚಳ್ಳಕೆರೆ : ತಾಲ್ಲೂಕಿನ ರೇಣುಕಾಪುರ ಗ್ರಾಮ ಪಂಚಾಯತಿಯ ತಪಗೊಂಡನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ
ನರೇಗಾ ಅನುಷ್ಠಾನ ಗೊಳ್ಳುತ್ತಿರುವ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಅಮೃತ ಅರೋಗ್ಯ ಅಭಿಯಾನದಡಿ ಅರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಇನ್ನೂ ಚಳ್ಳಕೆರೆ ತಾಲ್ಲೂಕು ಪಂಚಾಯತ ವ್ಯಾಪ್ತಿಯಲ್ಲಿ ಗುಳೆ ಹೊಗುವುದನ್ನು ತಪ್ಪಿಸಿ ಸ್ಥಳದಲ್ಲಿ ಉದ್ಯೋಗ ನೀಡುವ ಮಹತ್ವದ ಕಾರ್ಯಕ್ಕೆ ತಾಪಂ.ಇಓ ಹೊನ್ನಯ್ಯ ಶ್ರಮಿಸುತ್ತಿದ್ದು
ಅದರಂತೆ ಇಂದು ನರೇಗಾ ಕಾಮಗಾರಿ ಸಂಪೂರ್ಣವಾಗಿ ಸಾರ್ವಜನಿಕರು ಬಳಸಿಕೊಂಡು ಉದ್ಯೋಗ ಪಡೆಯುತ್ತಿದ್ದಾರೆ.
ಈದೇ ಸಂಧರ್ಭದಲ್ಲಿ ತಾಂತ್ರಿಕ ಸಂಯೋಜಕರು ದೀನೇಶ್ ಪ್ರಶಾಂತ, ಪ್ರವೀಣ್ ಕುಮಾರ್ ಡಿ ಹಾಗೂ ನುಂಕೇಶ್ ಅಮೃತ ಅರೋಗ್ಯ ಸಂಯೋಜಕರು, ಪಿ.ಡಿ.ಒ ತಿಮ್ನರಾಜು ಇತರರು ಸ್ಥಳದಲ್ಲಿ ಇದ್ದರು.
ಒಟ್ಟು 268 ಕೂಲಿಕಾರರ ಸ್ಥಳದಲ್ಲಿ ಉದ್ಯೋಗ ಖಾತ್ರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.