ಚಳ್ಳಕೆರೆ : ಬಯಲು ಸೀಮೆಯ ರೈತರಿಗೆ ಬೆಳೆ ವಿಮೆ ಕಂಪನಿಗಳು ಹಾಗೂ ಸರಕಾರದ ಅದೀನ ಅಧಿಕಾರಗಳು ನಿಲ್ಯಕ್ಷö್ಯ ತೋರುತ್ತಿರುವುದು ಬೆಳಕಿಗೆ ಬಂದಿದೆ.
ಹೌದು ನಿಜಕ್ಕೂ ಬಯಲು ಸೀಮೆ ಎಂದರೆ ತಟ್ಟನೆ ನೆನಪಾಗುವುದು ಚಳ್ಳಕೆರೆ ಕ್ಷೆತ್ರದ ಇಂತಹ ಬರಗಾಲವನ್ನು ಹಾಸಿ ಹೊದ್ದ ಈ ತಾಲೂಕಿನಲ್ಲಿ ಸಾಲ ಸೋಲ ಮಾಡಿ ರೈತರು ತಮ್ಮ ಬೆಳೆಗಳಿಗೆ ಬೆಳೆ ವಿಮೆ ಕಟ್ಟಿರುತ್ತಾರೆ ಆದರೆ ಸರಿಯಾದ ಸಮಯದಕ್ಕೆ ಮಳೆ ಬಾರದೆ ರೈತ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿರುತ್ತಾನೆ ಆದರೆ ಬೆಳೆ ವಿಮೆ ಕಂಪನಿಗಳು ಸರಿಯಾದ ಪರಿಹಾರದ ಮೊತ್ತವನ್ನು ಪಾವತಿ ಮಾಡದೆ ರೈತ ಜೀವನದ ಜಿತೆ ಚೆಲ್ಲಾಟ ವಾಡುತ್ತಿವೆ ಇನ್ನೂ ಕಾಲ ಕಾಲಕ್ಕೆ ರೈತರೊಟ್ಟಿಗೆ ಸಭೆ ನಡೆಸಿ ರೈತರ ಸಂಕಷ್ಟಕ್ಕೆ ಮರುಗುವ ಅಧಿಕಾರಿಗಳು ಕುಡ ಯಾವುದೇ ಒಂದು ಸಭೆ ಕರೆಯದೆ ನಿಲ್ಯಕ್ಷö್ಯ ವಹಿಸಿರುವುದು ರೈತನ ಆತ್ಮಹತ್ಮೆಗೆ ಎಡೆ ಮಾಡಿಕೊಟ್ಟಂತಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುವ ಸೇನೆಯ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಕಿಡಿ ಕಾರಿದ್ದಾರೆ.
ಅವರು ನಗರದಲ್ಲಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಬೆಳೆ ನಷ್ಟ ಪರಹಾರ ಹಾಗೂ ಬೆಳೆ ವಿಮೆ ಯಲ್ಲಿ ರೈತನಿಗೆ ಸರಿಯಾದ ರೀತಿಯಲ್ಲಿ ಪರಿಹಾರ ಬಂದಿಲ್ಲ ಇದಲ್ಲಿ ಕೆಲವರ ಲೋಪ ಇದೆ ಎಂಬ ಆರೋಗಳು ಇವೆ ಆದರೆ ಇಲ್ಲಿ ಅಧಿಕಾರಿಗಳು ಸೌಜನ್ಯಕ್ಕೂ ಸಭೆ ನಡೆಸದೆ ಇರುವದು ಸೋಜಿಗ ಎಂದು ತಾಲೂಕು ಮಟ್ಟದ ಅಧಿಕಾರಿಗಳ ವಿರುದ್ದ ಕಿಡಿ ಕಾರಿದ್ದಾರೆ.
ಇದೇ ಸಂಧರ್ಭದಲ್ಲಿ ತಾಲೂಕು ಅಧ್ಯಕ್ಷ ಶ್ರೀಕಂಠಮೂರ್ತಿ, ಬಸವರಾಜ್, ರ‍್ರಿಸ್ವಾಮಿ, ಕರಿಯಪ್ಪ, ಹನುಮಂತಪ್ಪ, ಬೊಮ್ಮಣ್ಣ, ಚಂದ್ರಣ್ಣ, ಸಣ್ಣಪ್ಪ, ರವಿಕುಮಾರ್ ಇತರರು ಇದ್ದರು.