ನಾಯಕನಹಟ್ಟಿ :: ಕಳೆದ ಹತ್ತು ವರ್ಷದಿಂದ ಮೊಳಕಾಲ್ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಶಾಸಕರಿಲ್ಲದೆ ಪಕ್ಷದ ಮುಖಂಡರು ಕಾರ್ಯಕರ್ತರು ಅನಾಥರಾಗಿದ್ದೆವು 2023ರ ವಿಧಾನಸಭಾ ಚುನಾವಣೆಯಲ್ಲಿ ಸರಳ ಸಜ್ಜನ ಅಭಿವೃದ್ಧಿ ಹರಿಕಾರರಾದ ಎನ್ ವೈ ಗೋಪಾಲಕೃಷ್ಣರವರ ರವರಿಂದ ನಮಗೆಲ್ಲ ಆನೆ ಬಲಬಂದಂತಾಗಿದೆ ಎಂದು ಕಾಂಗ್ರೆಸ್ ಮುಖಂಡ ಸಿಬಿ ಮೋಹನ್ ಕುಮಾರ್ ಹೇಳಿದರು.

ಅವರು ಬುಧವಾರ ಪಟ್ಟಣದ ಪ್ರವಾಸ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ ಮೊಳಕಾಲ್ಮೂರು ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆ ಈ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳ ಕಾಲ ಕಾಂಗ್ರೆಸ್ ಶಾಸಕರಿಲ್ಲದೆ ಅನಾಥರಾಗಿದ್ದೇವೆ ಈಗ ಕಾಂಗ್ರೆಸ್ಸಿನ ಏಳನೇ ಬಾರಿ ಶಾಸಕರಾಗಿ ಆಯ್ಕೆಯಾದಂತಹ ಎನ್ ವೈ ಗೋಪಾಲಕೃಷ್ಣರವರಿಗೆ ಸಚಿವ ಸ್ಥಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಮೊಳಕಾಲ್ಮೂರು ಕ್ಷೇತ್ರವು ಬಹಳ ಹಿಂದುಳಿದ ಪ್ರದೇಶ ಈ ಭಾಗದಲ್ಲಿ ಅಭಿವೃದ್ಧಿ ಕೆಲಸಗಳು ಸಾಕಷ್ಟು ಇವೆ ಮೊಳಕಾಲ್ಮೂರು ಕ್ಷೇತ್ರವನ್ನು ಅಭಿವೃದ್ಧಿಪಥಕೊಂಡ ಕೊಂಡಯುವ 40 ವರ್ಷಗಳ ಕಾಲ ರಾಜಕೀಯ ಮುತ್ಸದ್ದಿ ಎನ್ ವೈ ಗೋಪಾಲಕೃಷ್ಣರವರಿಗೆ ಸಚಿವ ಸ್ಥಾನ ನೀಡಿದರೆ ಕ್ಷೇತ್ರವನ್ನು ಅಭಿವೃದ್ಧಿಪಡಿಸಬಹುದು ಎಂದು ತಿಳಿಸಿದರು.

ಜಿ ಬಿ ಮುದಿಯಪ್ಪ ಮಾತನಾಡಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಕಳೆದ ಐದು ವರ್ಷದಿಂದ ಅಭಿವೃದ್ಧಿ ಎನ್ನುವುದು ಕಾಣಲಿಲ್ಲ ಈ ಬಾರಿ ಮೊಳಕಾಲ್ಮುರು ಕ್ಷೇತ್ರದ ಶಾಸಕರಾದಂತ ಎನ್ ವೈ ಗೋಪಾಲಕೃಷ್ಣರವರಿಗೆ ಸಚಿವ ಸ್ಥಾನವನ್ನು ನೀಡಿದರೆ ಮೊಳಕಾಲ್ಮುರು ಕ್ಷೇತ್ರದ ರೈತರಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಲು ಮತ್ತು ನಿರುದ್ಯೋಗ ಯುವಕ ಯುವತಿಯರಿಗೆ ಕೈಗಾರಿಕೆ ಸ್ಥಾಪನೆ ಮಾಡುವ ಮೂಲಕ ಎನ್ ವೈ ಗೋಪಾಲಕೃಷ್ಣ ಅವರು ಉತ್ತಮ ಆಡಳಿತವನ್ನು ನೀಡುವುದರಲ್ಲಿ ಸಂಶಯವಿಲ್ಲ ಎಂದರು.

ಇನ್ನೂ ಸಭೆಯನ್ನು ಉದ್ದೇಶಿಸಿ ಜೋಗಿಹಟ್ಟಿ ಕಾಂಗ್ರೆಸ್ ಮುಖಂಡ ಡಿ ಜಿ ಗೋವಿಂದಪ್ಪ ಮತ್ತು ಟಿ ಬಸಪ್ಪ ನಾಯಕ ಮಾತನಾಡಿದರು

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸಿ ಬಿ ಮೋಹನ್ ಕುಮಾರ್, ಡಿಜಿ ಗೋವಿಂದಪ್ಪ, ಜಿ ಬಿ ಮುದಿಯಪ್ಪ, ಟಿ ಬಸಪ್ಪ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೋರ ನಾಯಕ, ಮಲ್ಲೂರಹಳ್ಳಿ ಜೆಸಿಬಿ ಮಲ್ಲಿಕಾರ್ಜುನ್, ಜಾಗನೂರಹಟ್ಟಿ ಗೊಂಚಿಕಾರ್ ಪಾಲಯ್ಯ, ಎನ್ ದೇವರಹಳ್ಳಿ ಟಿ ರಾಜಣ್ಣ, ಜೋಗಿಹಟ್ಟಿ ಎಚ್ ಬಿ ತಿಪ್ಪೇಸ್ವಾಮಿ, ಜಾಗನೂರಹಟ್ಟಿ ಮುತ್ತಯ್ಯ, ತೊರೆಕೋಲಮ್ಮನಹಳ್ಳಿ ಆರ್ ಬಸವರಾಜ್, ಗೌಡಗೆರೆ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಟಿ ರಂಗಪ್ಪ, ಎತ್ತಿನಹಟ್ಟಿ ಓಬಳೇಶ್, ಜಿ ಎಚ್ ರಂಗಸ್ವಾಮಿ,ಎತ್ತಿನಹಟ್ಟಿ ತಿಪ್ಪೇಸ್ವಾಮಿ, ಕುದಾಪುರ ಜಿ ಸಿ ಶ್ರೀನಿವಾಸ್, ಓಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ ಟಿ ತಿಪ್ಪೇಸ್ವಾಮಿ ಗೌಡಗೆರೆ, ಗೌಡಗೆರೆ ರಂಗಜ್ಜ, ಜಿ ಕೆ ಕುಮಾರ್, ಇನ್ನೂ ಮುಂತಾದವರು ಭಾಗವಹಿಸಿದ್ದರು

About The Author

Namma Challakere Local News
error: Content is protected !!