ಚಳ್ಳಕೆರೆ : ಆಂದ್ರದ ಗಡಿಯನ್ನು ಅಂಚಿಕೊAಡಿರುವ ಚಳ್ಳಕೆರೆ ನಗರದಲ್ಲಿ ಕಳ್ಳರ ತಮ್ಮ ಕೈಚಳಕ ತೋರುವುದು ಮಾಮೂಲು ಹಾಗಿದೆ
ಇನ್ನೂ ನಗರದಲ್ಲಿ ಮಧುವೆ ಮಂಟಪದಲ್ಲಿ ಕಳ್ಳರು ತಮ್ಮ ಕೈ ಚಳಕ ತೊರಿರುವ ಘಟನೆ ಸಾರ್ವಜನಿಕರ ಅಚ್ಚರಿಗೆ ಕಾರಣವಾಗಿದೆ.
ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ ಇಬ್ಬರ ಸಂಬAದಿಕರ ಜೇಬಿನಲ್ಲಿದ್ದ ಹಣ ಕದ್ದು ಪರಾರಿಯಾದ ಘಟನೆ ನಗರದಲ್ಲಿ ನಡೆದಿದೆ.
ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯ ವಾಸವಿ ಮಹಲ್ ನಲ್ಲಿ ಬುಧವಾರ ಬೆಳಗ್ಗೆ 9.30 ರ ಸುಮಾರಿನಲ್ಲಿ ಮಧು ವರರಿಗೆ ವಿವಾಹ ಮಹೋತ್ಸವ ಮೂಹರ್ತ ನಡೆಯುವ ಸಂದAರ್ಭದಲ್ಲಿ ಕೂಡ್ಲಗಿ ಸೇರಿದಂತೆ ವಿವಿದ ಕಡೆಯಿಂದ ಜನರು ಸೇರಿದ್ದರು ಮದುವೆ ಕಾರ್ಯಕ್ರಮದಲ್ಲಿ ಜನದಟ್ಟಣೆ ಇದ್ದ ಕಾರಣ ಇದನ್ನೇ ಬಂಡವಾಳ ಮಾಡಿಕೊಂಡ ಕದೀಮರು ಕೂಡ್ಲಗಿ ತಾಲೂಕಿನ ತಾಯಕ್ಕನಹಳ್ಳಿ ಗ್ರಾಮದ ಮಲ್ಲಿಕಾರ್ಜುನ ಇವರ ಜೇಬಿನಲ್ಲಿದ್ದ 22 ಸಾವಿರ ರೂ ಹಾಗೂ ಕೂಡ್ಲಗಿ ನಗರದ ನಾರಾಣಸ್ವಾಮಿ ಜೇಬಿನಲ್ಲಿದ್ದ 6 ಸಾವಿರ ರೂ ಕದ್ದ ಕಳ್ಳರು ತಮ್ಮ ಕೈ ಚಳಕ ತೋರಿಸಿ ಪರಾರಿಯಾಗಿದ್ದಾರೆ.
ಇದೇ ನಗರದ ವಾಸವಿ ಕಾಲೋನಿ. ಸಂತೆಮೈದಾನ. ನೆಹರು ವೃತ್ತ .ಸರಕಾರಿ ಬಸ್ ನಿಲ್ದಾಣ. ಖಾಸಗಿ ಬಸ್ ನಿಲ್ದಾಣದಲ್ಲಿ ಮೊಬೈಲ್ ಕಳ್ಳರ ಹಾವಳಿ ಹೆಚ್ಚಾಗಿದ್ದು
ಪೋಲಿಸ್ ಗಸ್ತು ಹೆಚ್ಚಿಸ ಬೇಕಿದೆ. ಕಲ್ಯಾಣ ಮಂಟಪದ ಜನ ದಟ್ಟಣೆಯಿರುವ ಸ್ಥಳದಲ್ಲೇ ಕಳ್ಳರ ಕೈಚಳಕ್ಕೆ ಸಾರ್ವಜನಿಕರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ ಈಗಲಾದರು ನಗರದಲ್ಲಿ ಕಳ್ಳರ ಹಾವಳಿಗೆ ಬ್ರೇಕ್ ಹಾಕಲು ಪೋಲಿಸ್ ಪಹರೆ ಹೆಚ್ಚಿಸುವರೇ ಕಾದು ನೋಡ ಬೇಕಿದೆ.

About The Author

Namma Challakere Local News
error: Content is protected !!