ಶಾಸಕ ಟಿ.ರಘುಮೂರ್ತಿಗೆ ಸಚಿವ ಸ್ಥಾನ ನೀಡುವಂತೆ ವರಿಷ್ಠರಿಗೆ ಒತ್ತಾಯ ಮಾಡಿದ ಉಪ್ಪಾರ ಸಂಘದ ಕಾರ್ಯಧ್ಯಕ್ಷ ದುರ್ಗಾವಾರ ಎಲ್‌ಐಸಿ ರಂಗಸ್ವಾಮಿ

ಚಳ್ಳಕೆರೆ : ಬಯಲು ಸೀಮೆಯಲ್ಲಿ ಸತತವಾಗಿ ಕಳೆದ ಮೂರು ಬಾರಿ ಅಧಿಕಾರದ ಗದ್ದುಗೆ ಹಿಡಿದ ಶಾಸಕ ಟಿ.ರಘುಮೂರ್ತಿ ಅಭಿವೃದ್ದಿಯ ಹರಿಕಾರರಾಗಿದ್ದಾರೆ.
ಇನ್ನೂ ಇವರಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಉಪ್ಪಾರ ಸಂಘದ ಕಾರ್ಯಧ್ಯಕ್ಷ ದುರ್ಗಾವಾರ ಎಲ್‌ಐಸಿ ರಂಗಸ್ವಾಮಿ ಒತ್ತಾಯಿಸಿದ್ದಾರೆ.

ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ವಿಜ್ಞಾನ ನಗರಿ ಚಳ್ಳಕೆರೆ ಕ್ಷೇತ್ರದಲ್ಲಿ ಸತತವಾಗಿ ಮೂರು ಬಾರಿ ಗೆದ್ದು ವಿರೋಧ ಪಕ್ಷದ ನಾಯಕರು ಮೆಚ್ಚುವಂತಹ ಕೆಲಸ ಮಾಡಿದ್ದಾರೆ.
ಆದ್ದರಿಂದ ಅವರಿಗೆ ಈ ಬಾರಿ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ವರಿಷ್ಠರಿಗೆ ಚಳ್ಳಕೆರೆ ಉಪ್ಪಾರ ಸಂಘದಿಂದ ಹಾಗೂ ಸಮಸ್ತ ಕ್ಷೇತ್ರದ ಜನತೆ ಪರವಾಗಿ ಒತ್ತಾಯ ಮಾಡುತ್ತಿದ್ದೆನೆ ಎಂದರು.

About The Author

Namma Challakere Local News
error: Content is protected !!