ಚಳ್ಳಕೆರೆ : ಕೇಂದ್ರ ಸಚಿವ ಎ ನಾರಾಯಣಸ್ವಾಮಿ ರವರ 64ನೇ ವರ್ಷದ ಜನ್ಮದಿನದ ಪ್ರಯುಕ್ತ ಬಿಜೆಪಿ ಕಾರ್ಯಕರ್ತರಿಂದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು
ನಾಯಕನಹಟ್ಟಿ ಶ್ರೀಕ್ಷೆತ್ರದಲ್ಲಿ ಮಂಗಳವಾರ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಹೊರಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಇನ್ನೂ ಮಾಧ್ಯಮದೊಂದಿಗೆ ಮಾತನಾಡಿದ ದಲಿತ ಮುಖಂಡ ಮರಿಪಾಲಯ್ಯ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಜನ್ಮದಿನದ ಅಂಗವಾಗಿ ದೇವಸ್ಥಾನದಲ್ಲಿ ಕೇಕ್ ಕತ್ತರಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಎ ನಾರಾಯಣಸ್ವಾಮಿ ರವರ 64ನೇ ವರ್ಷದ ಜನ್ಮದಿನದಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕೇಕ್ ಕತ್ತರಿಸುವ ಮೂಲಕ ಅಚರಣೆ ಮಾಡಲಾಗಿದೆ ಶ್ರೀ ಗುರು ತಿಪ್ಪೇಸ್ವಾಮಿ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ರವರಿಗೆ ಉತ್ತಮ ಆರೋಗ್ಯ ಉಜ್ವಲ ಭವಿಷ್ಯವನ್ನು ರೂಪಿಸಲಿ ಎಂದು ತಿಳಿಸಿದರು.
ದಲಿತ ಮುಖಂಡ ತಾರಕೇಶ್ ಮಾತನಾಡಿ ನಮ್ಮ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಎ ನಾರಾಯಣಸ್ವಾಮಿ ರವರ 64ನೇ ಜನ್ಮದಿನದ ಅಂಗವಾಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಕೇಕ್ ಕತ್ತರಿಸುವ ಮೂಲಕ ವಿಶೇಷ ಪೂಜ್ಯ ಸಲ್ಲಿಸಲಾಗಿದೆ ಜಿಲ್ಲೆಯಲ್ಲಿ ಎ ನಾರಾಯಣಸ್ವಾಮಿ ಉತ್ತಮವಾಗಿ ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ ಜಿಲ್ಲೆಯ ಗುರು ಹಿರಿಯರ ಸಮಸ್ತ ಜನತೆಯ ಆಶೀರ್ವಾದ ಅವರ ಮೇಲೆ ಇರಲಿ ಎಂದು ಜನ್ಮದಿನದ ಶುಭಾಶಯಗಳು ತಿಳಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಗೌರಿಪುರ ತಾರಕೇಶ್, ಮರಿಪಾಲಯ್ಯ, ಕಾವಲು ಬಸವೇಶ್ವರನಗರ ಬೋರನಾಯಕ, ಓ. ವೇದಾವತಿ, ನಾಗರತ್ನಮ್ಮ, ಓಂಕಾರೇಶ್ವರಿ ,
ತಿಪ್ಪೇಶ್ , ಬಿ ಸ್ವಾಮಿ, ಕಿರಣ್ ಕುಮಾರ್ ಮನ್ವಿತ್ ಮದಕರಿ, ಇದ್ದರು