ಚಳ್ಳಕೆರೆ : ಆಯಿಲ್ ಸಿಟಿಯಲ್ಲಿ ಕಳ್ಳರ ಕೈ ಚಳಕದಿಂದ ಸಾರ್ವಜನಿಕರು ಚಿಂತೆಗೀಡಾಗಿದ್ದಾರೆ.
ಹೌದು ನಗರದಲ್ಲಿ ಎಗ್ಗಿಲ್ಲದೆ ಸರಣಿ ಮನೆಗಳ್ಳತನಗಳು, ಅಪರಾದಗಳು ನಿರಂತರವಾಗಿ ನಡೆಯುತ್ತಿವೆ ಇನ್ನೂ ಎಷ್ಟೋ ಪ್ರಕರಣಗಳು ದಾಖಲಾದರೆ ಕೆಲವು ಪ್ರಕರಗಳು ದಾಖಲಾಗದೆ ಉಳಿದು ಬಿಡುತ್ತಿವೆ
ಜಿಲ್ಲೆಯಲ್ಲೆ ದೊಡ್ಡದಾದ ವಿಜ್ಞಾನ ನಗರಿ ಚಳ್ಳಕೆರೆ ತಾಲೂಕು ದಿನದಿಂದ ದಿನಕ್ಕೆ ತನ್ನ ವಿಸ್ತಿರ್ಣ ಏರಿಕೆಯಾಗುತ್ತಿದೆ ಅದರಂತೆ ಕಳ್ಳತನಗಳು ನಿರಂತರವಾಗಿ ನಡೆಯುತ್ತಿವೆ
ಇನ್ನೂ ಇವೆಲ್ಲಕ್ಕೂ ಕಡಿವಾಣ ಹಾಕಬೇಕಾದ ಪೊಲೀಸ್ ಇಲಾಖೆ ಮಾತ್ರ ಮೌನ ವಹಿಸಿರುವುದು ಕಳ್ಳರಿಗೆ ವರದಾನವಾಗಿದೆ.
ಅದರಂತೆ ನಗರದ ಹೊರ ವಲಯದಲ್ಲಿ ಇರುವ ಶ್ರಿ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಕಳ್ಳರ ಗುಂಪುವೊAದು ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ ಇನ್ನೂ ಸಿಸಿಟಿವಿ ಕ್ಯಾಮರಾ ಕೂಡ ಬಿಡದ ಕಳ್ಳರು ಕ್ಯಾಮರಾವನ್ನು ಕದ್ದೊಯ್ಯುದ್ದಿದ್ದಾರೆ,
ಈಗೇ ನಗರದಲ್ಲಿ ಕಳ್ಳರ ಹಾವಳಿಗೆ ಕಡಿವಾಣ ಹಾಕಬೇಕಾದ ಪೊಲೀಸ್ ಇಲಾಖೆ ಯಾವಾಗ ನಿದ್ದೆ ಮಂಪರಿನಿAದ ಎಚ್ಚರಗೊಳ್ಳುತ್ತದೋ ಕಾದು ನೋಡಬೇಕಿದೆ.