ಚಳ್ಳಕೆರೆ : ಕ್ಷೇತ್ರದಲ್ಲಿ ಬಹು ಅಂತರದಿAದ ಗೆಲವು ಸಾಧಿಸಿ ಕ್ಷೇತ್ರದಲ್ಲೆ ಬೀಡು ಬಿಟ್ಟ ಕಲ್ಲಿನ ಕೋಟೆಯ ಅದಿಪತಿ ನೂತನ ಶಾಸಕರಾದ ಕೆ.ಸಿ.ವಿರೆಂದ್ರ ಪಪ್ಪಿರವರು ಇಂದು ಜಿಲ್ಲಾ ಸಾರ್ವಜನಿಕ ಆಸ್ವತ್ರೆಗೆ ತೆರಳಿ ರೋಗಿಗಳ ಯೋಗ ಕ್ಷೇಮ ವಿಚಾರಿಸಿ ಚಿಕಿತ್ಸೆ ಬಗ್ಗೆ ಪರೀಶಿಲನೆ ನಡೆಸಿ ಅಧಿಕಾರಿಗಳಿಗೆ ಖ ಡಕ್ ವಾರ್ನಿಂಗ್ ನೀಡಿದ್ದಾರೆ.
ಇಷ್ಟು ದಿನ ಯಾವ ರೀತಿಯಲ್ಲಿ ಆಡಳಿತ ನಡೆಯುತ್ತಿತ್ತೋ ಗೊತ್ತಿಲ್ಲ ಆದರೆ ಇಂದಿನಿAದ ಬಡಜನರಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ದೊರೆಯಬೇಕು
ಕೈಯಲ್ಲಿ ಹಣವಿಲ್ಲದೆ ಸರಕಾರಿ ಆಸ್ವತ್ರೆ ಅವಲಂಬಿಸಿ ಬರುವ ರೋಗಿಗಳಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಿ ಗುಣಮುಖರಾಗನ್ನಾಗಿ ಮಾಡಬೇಕು ಎಂದು ನೂತನ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ಇನ್ನೂ ರಾಜ್ಯದಲ್ಲಿ ಮುಖ್ಯ ಮಂತ್ರಿ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಪಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಟ್ಟು ಹಿಡಿದು ಸಿಎಂ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ ಇನ್ನೂ ಇಂದು ಬಹುತೇಕ ಸಿಎಂ.ಸ್ಥಾನ ಪಿಕ್ಸ್ ಹಾಗುವ ಸಾಧ್ಯತೆಗಳು ಇವೆ.