ಇಡೀ ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೇಸ್ ಖಾತೆ ತೆರೆದ ಕೈ ಶಾಸಕ ಟಿ.ರಘುಮೂರ್ತಿಗೆ ರಾಜ್ಯದ ಕೈ ನಾಯಕರು ತಿರುಗಿ ನೋಡುಂತೆ ಮಾಡಿದ್ದಾರೆ.
ಕಳೆದ ಮೂರು ಬಾರಿ ಅಧಿಕಾರ ಗದ್ದುಗೆ ಹಿಡಿದ ಹಾಲಿ ಶಾಸಕ ಟಿ.ರಘುಮೂರ್ತಿ ಈ ಭಾರಿಯೂ ಕೂಡ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಜಯ ಗಳಿಸಿದ್ದಾರೆ.
ಬಯಲು ಸೀಮೆಯ ಕ್ಷೆತ್ರದಲ್ಲಿ ನಿಜವಾದ ಕೆಲಸಗಾರನಿಗೆ ಯಾವ ಅಡೆತಡೆ ಇಲ್ಲ ಎಂಬುದು ಇಲ್ಲಿ ಸ್ಪಷ್ಟವಾಗಿ ಗೊಚರಿಸುತ್ತದೆ.
ಅದರಂತೆ ಈಡೀ ಕ್ಷೇತ್ರದಲ್ಲಿ ಸಂಭ್ರಮ ಮನೆ ಮಾಡಿದೆ, ಕೈ ಕಾರ್ಯಕರ್ತರು ಹಾಗು ಬೆಂಬಳಿಗಳು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ ಇನ್ನೂ ನೆಚ್ಚಿನ ಶಾಸಕ ಟಿ.ರಘುಮೂರ್ತಿ ಪ್ರತಿ ಹಳ್ಳಿ ಹಳ್ಳಿಗೆ ತೆರಳಿ ಮತದಾರರ ಬಂಧುಗಳಿಗೆ ಧನ್ಯಾದಗಳನ್ನು ತಿಳಿಸುತ್ತಿದ್ದಾರೆ ಅದರಂತೆ ಶಾಸಕರು ಆಗಮಿಸುತಿದ್ದಂತೆ ಬೆಂಬಲಿಗಳು ಹೂವು ಮಾಲೆ ಹಾಕಿ ಅದ್ದೂರಿ ಸ್ವಾಗತ ಕೋರುತ್ತಿದ್ದಾರೆ.
ಅದರಂತೆ ಇಂದು ಗೆಲುವಿನ ನಗೆ ಬೀರಿದ ಶಾಸಕ ಟಿ.ರಘುಮೂರ್ತಿ ಮೊದಲಿಗೆ ಗೋನೂರು ಗ್ರಾಮದ ಶ್ರೀ ರಾಜೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ನಂತರ ಮತದಾರರ ಬಳಿ ತುರುವನೂರು ಹೋಬಳಿಯ ಎಲ್ಲಾ ಗ್ರಾಮಗಳಿಗೆ ತೆರಳಿ ನಂತರ ಚಳ್ಳಕೆರೆ ನಗರದ ಚಳ್ಳಕೆರೆಮ್ಮನಿಗೆ ಪೂಜೆ ಸಲ್ಲಿಸಿ ಅಭಿಮಾನಿಗಳತ್ತ ಕೈಬೀಸಿ ನಿಮ್ಮ ಋಣ ತಿರಿಸುವೆನೆ ಎಂದರು.