ಚಳ್ಳಕೆರೆ : ಪ್ರಜಾತಂತ್ರದ ಹಬ್ಬವನ್ನು ಪ್ರಜೆಗಳು ಸಂತಸದಿಂದ ಸ್ವೀಕರಿಸಿದ ಮತದಾರರು ತಮ್ಮ ತಮ್ಮ ಮತಗಟ್ಟೆಗಳಲ್ಲಿ ಮತಚಲಾಯಿಸಿ ಸಂಭ್ರಮಿಸಿದ್ದಾರೆ
ಇನ್ನೂ ಶತಾಯುಷ್ ಅಜ್ಜಿಯೊಬ್ಬರು ತಮ್ಮ ಮನೆಯಿಂದ ಯಾರ ಸಹಾಯವಿಲ್ಲದೆ ಸ್ವತಃ ನಡೆದುಕೊಂಡೆ ಮತಗಟ್ಟೆಗೆ ತೆರಳಿ ತಮ್ಮ ಕುಟುಂಬದೊಂದಿಗೆ ಆಗಮಿಸಿ ಮತದಾನ ಮಾಡಿದ್ದಾರೆ.
ಹೌದು ನಗರದ ಕೃಷಿ ಸಹಾಯಕ ನಿರ್ದೇಶಕರ ಕಟ್ಟಡದ ಮತಗಟ್ಟೆ ಸಂಖ್ಯೆ91 ರಲ್ಲಿ ಮುಸ್ಲಿಂ ಸಮುದಾಯದ ಮೆಹಬೂಬಿ ಎಂಬುವವರು ಬಂದು ಮತದಾನ ಮಾಡಿದ್ದಾರೆ.
ನೂರು ವರ್ಷತುಂಬಿದ ಈ ಅಜ್ಜಿ ತಮ್ಮ ಕುಟುಂಬದ ಸದಸ್ಯರೊಟ್ಟಿಗೆ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದಾರೆ
ಇನ್ನೂ ಯುವ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು ಸಂವಿಧಾನ ನೀಡಿದ ಮಹತ್ವದ ಹಕ್ಕನಿಂದ ಯಾರು ಕೂಡ ವಂಚಿತರಾಗಬಾರದು ಆದ್ದರಿಂದ ಯುವ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಕಿವಿಮಾತು ಹೇಳಿದರು.