ಎಸ್ ಎಸ್ ಎಲ್ ಸಿ ಪರೀಕ್ಷೆ ಜಿಲ್ಲೆಯಲ್ಲಿ ಚಳ್ಳಕೆರೆ ತಾಲೂಕು ಪ್ರಥಮ ಸ್ಥಾನ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್

ಚಳ್ಳಕೆರೆ: ಕಳೆದ ಹಲವು ವರ್ಷಗಳಿಂದ ತನ್ನ ಸ್ಥಾನವನ್ನು ಬಿಟ್ಟುಕೊಡದ ಆಯಿಲ್ ಸಿಟಿ ಈ ಬಾರಿಯೂ ಕೂಡ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅಗ್ರ ಸ್ಥಾನ‌ಪಡೆದು ಕೊ‌ಂಡಿದೆ

ಪ್ರತಿ ವರ್ಷದಂತೆ ಈ ವರ್ಷವೂ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು ಚಿತ್ರದುರ್ಗ ಜಿಲ್ಲೆ, ರಾಜ್ಯದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಮೊದಲ ಸ್ಥಾನ ಗಳಿಸುವುದರೊಂದಿಗೆ ಇತಿಹಾಸ ನಿರ್ಮಿಸಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮೊಳಗುವಂತೆ ಮಾಡಿದೆ ಜಿಲ್ಲೆಯ 6 ತಾಲೂಕುಗಳಲ್ಲಿ ಉತ್ತಮ ಫಲಿತಾಂಶ ಬಂದಿದ್ದು ಚಳ್ಳಕೆರೆ ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಮಾಹಿತಿ ನೀಡಿದರು.

ನಗರದ ಬಿಇಓ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ತಾಲೂಕಿನಲ್ಲಿ ಉತ್ತಮ ಫಲಿತಾಂಶ ಬರಲು ಪ್ರಾರಂಭದಿಂದಲೇ ಯೋಜನೆ ರೂಪಿಸಿ ಶಾಲಾ ಮಟ್ಟದಲ್ಲಿ ವಿಶೇಷ ತರಗತಿಗಳು ಪೂರ್ವ ಸಿದ್ಧತೆ ಪರೀಕ್ಷೆ ಪೋಷಕರ ವಿಧ್ಯಾರ್ಥಿಗಳ ಹಾಗೂ ಶಿಕ್ಷಕರ ಸಮನ್ವಯ ಸಾಧಿಸಲು ಫೋನ್ ಸಂಪರ್ಕ ಗೈರು ಹಾಜರಾತಿ ಇರುವ ಮಕ್ಕಳ ಮನೆಗಳಿಗೆ ಮುಖ್ಯ ಶಿಕ್ಷಕರು ತೆರಳಿ ಅರಿವು ಮೂಡಿಸುವುದು ಇಂತಹ ಹಲವು ಪರಿಣಾಮಕಾರಿ ಯೋಜನೆಗಳಿಂದ ಅತ್ಯುತ್ತಮ ಫಲಿತಾಂಶ ಬಂದಿದೆ ಸರ್ಕಾರಿ, ಅನುದಾನಿತ ,ಅನುದಾನ ರಹಿತ, ಶಾಲೆಗಳು ಸೇರಿ ಒಟ್ಟು 101 ಶಾಲೆಗಳಲ್ಲಿ 71 ಶಾಲೆಗಳು ಶೇಕಡ ನೂರರಷ್ಟು ಫಲಿತಾಂಶ ಪಡೆದಿದೆ ಪರೀಕ್ಷೆಗೆ 4522 ವಿದ್ಯಾರ್ಥಿಗಳು ಹಾಜರಾಗಿ 4,439 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಇದರೊಂದಿಗೆ ತಾಲೂಕು 98.2 ರಷ್ಟು ಫಲಿತಾಂಶ ಪಡೆದಿದೆ ತಾಲೂಕಿನ ವಾಸವಿ ಶಾಲೆಯ ಸಂಕೀರ್ತನ 625 ಅಂಕಗಳಿಗೆ 622 ಅಂಕ ಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಅದೇ ಶಾಲೆಯ ಜಯಶ್ರೀ 619 ದ್ವಿತೀಯ ಸ್ಥಾನ ಜನನಿ ಎಸ್ ಮತ್ತು ನಾಯಕನ ಹಟ್ಟಿಯ ವಿಧ್ಯಾವಿಕಾಸ ಶಾಲೆಯ ತೇಜಸ್ವಿನಿ 616 ಅಂಕ ಪಡೆದು ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ  ಎಲ್ಲ ಶಾಲೆಗಳ ವಿದ್ಯಾರ್ಥಿಗಳು ಮುಖ್ಯ ಶಿಕ್ಷಕರು ಶಿಕ್ಷಕರು ಸಿಬ್ಬಂದಿ ವರ್ಗಗಳ ಹಾಗೂ ಪೋಷಕರ ಪರಿಶ್ರಮದ ಫಲವಾಗಿ ಉತ್ತಮ ಫಲಿತಾಂಶ ಲಭಿಸಿದೆ ಎಲ್ಲರನ್ನು ಅಭಿನಂದಿಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು

About The Author

Namma Challakere Local News
error: Content is protected !!