ಚಳ್ಳಕೆರೆ : ಇಷ್ಟು ದಿನ ಈ ಮೂರು ರಾಜಾಕೀಯ ಪಕ್ಷಗಳ ದುರಾಡಳಿತದಿಂದ ಜನರು ರೋಸಿ ಹೊಗಿದ್ದು ಈ ಬಾರಿ 2023ಕ್ಕೆ ಕ್ಷೇತ್ರದಲ್ಲಿ ಆಮ್‌ಆದ್ಮಿ ಪಕ್ಷ ಅಧಿಕಾರಕ್ಕೆ ಬರುವುದು ಶತಸಿದ್ದ ಎಂದು ಆಮ್‌ಆದ್ಮಿ ಪಕ್ಷದ ಅಭ್ಯರ್ಥಿ ಎಲ್.ಮಾರಕ್ಕ ಹೇಳಿದರು.
ಅವರು ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಕಳೆದ ಹಲವು ವರ್ಚಗಳಿಂದ ಬಿಜೆಪಿ ಹಾಗೂ ಕಾಂಗ್ರೇಸ್ ದುರಾಡಳಿತಕ್ಕೆ ಮತದಾರ ಈ ಬಾರಿ ಬ್ರೇಕ್ ಹಾಕುತ್ತಾನೆ ಇಂತಹ ಸರಕಾರಗಳನ್ನು ರಾಜ್ಯದಿಂದ ದೇಶದಿಂದ ದೂರವಿಡಲು ಮತದಾರರ ಈ ಬಾರಿ ತಿರ್ಮಾನ ಮಾಡಿದ್ದಾನೆ ಆದ್ದರಿಂದ ಈ ಬಾರಿ ಬಹು ಮತಗಳಿಂದ ಕ್ಷೇತ್ರದಲ್ಲಿ ಮತದಾರರ ಆರ್ಶಿವಾದ ಇದ್ದರೆ ಗೆಲುವು ನಿಶ್ಚಿತ ಎಂದರು.
ಇನ್ನೂ ಆಮ್ ಆದ್ಮಿ ಪಕ್ಷದ ತಾಲೂಕು ಅಧ್ಯಕ್ಷ ಬಿ.ಪಾಪಣ್ಣ ಮಾತನಾಡಿ, ಕ್ಷೇತ್ರದಲ್ಲಿ ಕೇವಲ ಕಟ್ಟಡ ಕಟ್ಟಿದರೆ ಸಾಲದು ಹಲವು ವರ್ಷಗಳಿಂದ ಮತದಾರರು ಭರವಸೆಯಲ್ಲಿ ಮುಳುಗಿದ್ದಾರೆ ನಿರುದ್ಯೋಗ ತಾಂಡವಾಡುತ್ತಿದೆ, ಕಮಿಷನ್ ಸರಕಾರ ಎಂದು ಬಿಜೆಪಿ ಸರಕಾರ ಹೆಸರು ಪಡೆದುಕೊಂಡಿದೆ ಈಗೇ ಕಳಂಕ ಹೊತ್ತ ಮೂರು ರಾಜಾಕೀಯ ಪಕ್ಷಗಳಿಗೆ ಈ ಭಾರಿ ಮತದಾರರು ತಕ್ಕ ಪಾಠ ಕಲಿಸುತ್ತಾರೆ ಎಂದರು.