ಎಸ್ಸಿ ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರದ ಮಹತ್ವದ ತೀರ್ಪು ಎಂದು ಬಿಜೆಪಿ ಅಭ್ಯರ್ಥಿ ಎಸ್ ತಿಪ್ಪೇಸ್ವಾಮಿ ಹೇಳಿದ್ದಾರೆ
ನಾಯಕನಹಟ್ಟಿ ಪಟ್ಟಣದ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಬರುವ ಜಾಗನೂರ ಹಟ್ಟಿ ಗ್ರಾಮದಲ್ಲಿ ರೋಡ್ ಶೋ ನಡೆಸಿ ಮತಯಾಚನೆ ಮಾಡುವ ವೇಳೆ ಮತದಾರರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಎಸ್ಟಿ ಎಸ್‌ಸಿ ಸಮುದಾಯಕ್ಕೆ 30 ವರ್ಷಗಳ ಹೋರಾಟ ಮಾಡಿದರು ಯಾವ ಸರ್ಕಾರಗಳು ಸದಾಶಿವ ಆಯೋಗವನ್ನು ಜಾರಿ ಮಾಡಲಿಲ್ಲ ಈ ರಾಜ್ಯದ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರು ಎಸ್ಸಿ ಎಸ್ಟಿ ಸಮುದಾಯಕ್ಕೆ ಎಸ್ ಸಿ ಸಮುದಾಯಕ್ಕೆ 15 ರಿಂದ 17% ಎಸ್ ಟಿ ಸಮುದಾಯಕ್ಕೆ ಐದರಿಂದ ಏಳು ಪರ್ಸೆಂಟ್ ಮೀಸಲಾತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಭಾರಿಯಾ ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಐದು ಕೆಜಿ ಅಕ್ಕಿ ಸಿರಿಧಾನ್ಯ ಪ್ರತಿ ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬಕ್ಕೆ ಅರ್ಧ ಲೀಟರ್ ಹಾಲು ಯುಗಾದಿ ದೀಪಾವಳಿ ಗಣೇಶ ಚತುರ್ಥಿ ಹಬ್ಬಗಳಿಗೆ ಉಚಿತವಾಗಿ ಸಿಲಿಂಡರ್ ನೀಡುವ ಯೋಜನೆಯ ಪ್ರಣಾಳಿಕೆಯಲ್ಲಿ ಬಿಜೆಪಿ ಸರ್ಕಾರ ಜಾರಿಗೊಳಿಸಿದೆ ಆದ್ದರಿಂದ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಆದ್ದರಿಂದ ಗ್ರಾಮದ ಪ್ರತಿಯೊಬ್ಬರು ಅತಿ ಹೆಚ್ಚಿನ ಬಹುಮತಗಳಿಂದ ಸೇವೆ ಮಾಡಲು ಅನುವು ಮಾಡಿಕೊಡಿ ಎಂದು ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಈ ರಾಮರೆಡ್ಡಿ, ಮಾಜಿ ತಾಲೂಕು ಪಂಚಾಯತಿ ಸದಸ್ಯ ಜಂಬಣ್ಣ ತಿಪ್ಪೇಸ್ವಾಮಿ, ನಿಕಟಪೂರ್ವ ಅಧ್ಯಕ್ಷ ಎಂವೈಟಿ ಸ್ವಾಮಿ, ನಗರ ಘಟಕ ಅಧ್ಯಕ್ಷ ಎನ್ ಮಹಾಂತಣ್ಣ, ಕೌಸರ್ ಭಾಷಾ, ಬಡಿಗಿ ತಿಪ್ಪೇಸ್ವಾಮಿ, ಉಜಿನಪ್ಪ, ಡೈಲಾಗ್ ತಿಪ್ಪೇಸ್ವಾಮಿ, ಜಾಗನೂರಹಟ್ಟಿ ಗ್ರಾಮಸ್ಥರಾದ ಬಿ ಟಿ ಪ್ರಕಾಶ್, ಬಡ ಸೂರಯ್ಯ, ಮಾಳಿಗೆ ಕೆಂಗಣ್ಣ, ಕೊಲ್ಲಾಳು ಚಂದ್ರಪ್ಪ, ದುರುಗಪ್ಪ,ಎಸ್ ಸುರೇಶ್, ಕೆ ಪಿ ನಾಗರಾಜ್, ಎಸ್ ಬೋರಯ್ಯ, ಎಸ್ ಬಿ ರವಿ, ಪಿ ನಾಗರಾಜ್, ತಿಪ್ಪೇಸ್ವಾಮಿ, ದೇವನಾಡು ಕೆ ಟಿ ಪ್ರಹ್ಲಾದ್, ಮಾಳಿಗೆ ಸುರೇಶ್, ಜೆ ತಿಪ್ಪೇಸ್ವಾಮಿ, ಪಿ ಸ್ವಾಮಿ, ಮೂಡಲ್ ನಾಗೇಶ್, ಬೇಬಿ ತಿಪ್ಪೇಶ್, ಸಣ್ಣ ಪಾಲಯ್ಯ, ವಿಎಸ್ಎಸ್ ಟಿ ಪಾಲಯ್ಯ, ಬಿ ಬಿ ತಿಪ್ಪೇಸ್ವಾಮಿ, ಅಂಗಡಿ ಪ್ರಕಾಶ್, ತಿಪ್ಪೇಸ್ವಾಮಿ, ಮಲ್ಲೇಶಪ್ಪ, ಕೆಂಗಣ್ಣ, ವೀರೇಶ್, ಮಲ್ಲೂರಹಳ್ಳಿ ಗುಂಡಯ್ಯ, ಧನಂಜಯ, ತಿಪ್ಪೇಸ್ವಾಮಿ, ಬೊಮ್ಮ, ಪಿ ಕುಮಾರ್, ಸೇರಿದಂತೆ ಮುಂತಾದವರು ಇದ್ದರು