ತುರುವನೂರು ಹೋಬಳಿಯಲ್ಲಿ ಭರ್ಜರಿ ಮತಬೇಟೆ ನಡೆಸಿದ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್…!!

ಚಳ್ಳಕೆರೆ : ಈಡೀ ರಾಜ್ಯದಲ್ಲಿ ರೈತರ ಪರ ದೀನ ದಲಿತರ ಪರ ಇರುವ ಸರಕಾರ ಎಂದರೆ ಅದು ಹೆಚ್‌ಡಿ.ಕುಮಾರಣ್ಣನವರ ಜೆಡಿಎಸ್ ಪಕ್ಷದ ಆಡಳಿತ ಅವಧಿಯ ಸರಕಾರ ಮಾತ್ರ ಎಂದು ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಹೇಳಿದರು.

ಅವರು ಕ್ಷೇತ್ರದ ತುರುವನೂರು ಹೋಬಳಿಯಲ್ಲಿ
2023ರ ವಿಧಾನ ಚುನಾವಣೆ ಮತಬೇಟೆ ಯಲ್ಲಿ ಮಾತನಾಡಿದರು

ಈಡೀ ಚಳ್ಳಕೆರೆ ಕ್ಷೇತ್ರದಲ್ಲಿ ಕಳೆದ 10 ವರ್ಷಗಳಿಂದ ನಿರಂತರವಾಗಿ ಮತದಾರರ ಒಡನಾಟದಲ್ಲಿ ಇರುವ ನಾನು ಕ್ಷೇತ್ರದ ಅಭಿವೃದ್ಧಿ ಗೆ ಕಂಕಣ ಬದ್ದನಾಗಿದ್ದೆನೆ ಅದರಂತೆ ಇಲ್ಲಿ ಕಳೆದ ಹತ್ತು ವರ್ಷ ಆಳ್ವಿಕೆ ನಡೆಸಿದ ಶಾಸಕರು ನಿಮ್ಮ ಮುಗ್ದತೆಯನ್ನು ಮನಗಂಡು ನಿಮ್ಮನ್ನು ಬಡತನದ ಕೂಪ ಮಂಡೂಕಕ್ಕೆ ತಳ್ಳಿದ್ದಾರೆ ಆದ್ದರಿಂದ ನಿಮ್ಮ ಜೀವನ ಸುಗಮ ವಾಗಲು ಜೆಡಿಎಸ್ ಗೆ ಒಂದು ಬಾರಿ‌ ಮತನೀಡಿ ಈಡೀ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡುಯ್ಯುತ್ತೆನೆ ಎಂದು ಹೇಳಿದರು.

ತಾಲ್ಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ ಮಾತನಾಡಿ ಚಳ್ಳಕೆರೆ ಕ್ಷೇತ್ರದಲ್ಲಿ ಕಳೆದ 2018ರಲ್ಲಿ ಅತೀ ಕಡಿಮೆ ಅಂತರದಲ್ಲಿ ನಿಮ್ಮ ಮನೆಯ ಮಗ ಹಿನ್ನೆಡೆಯಾಗಿದ್ದ ಆದರೆ 2023ಕ್ಕೆ ಅತೀ ಹೆಚ್ಚಿನ ಬಹು ಮತಗಳಿಂದ ವಿಜಯಶಾಲಿಯಾಗಲು ನಿಮ್ಮ ಆರ್ಶಿವಾದ ಮುಖ್ಯವಾಗಿದೆ ಆದ್ದರಿಂದ ಈಡೀ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿ ತುರುವನೂರು ಹೋಬಳಿಯ ಹಲವು ಗ್ರಾಮಗಳಿಗೆ ಬೇಟೆನೀಡಿದ ಅಭ್ಯರ್ಥಿಗೆ ಜೆಡಿಎಸ್ ಕಾರ್ಯಕರ್ತರು ಅಭೂತಪೂರ್ವ ವಾದ ಸ್ವಾಗತ ಕೋರುತ್ತ ನಮ್ಮ ಮತ ಜೆಡಿಎಸ್ ಗೆ ಎಂಬ ಜಯ ಗೋಷಗಳು ಮೊಳಗುತ್ತಿವೆ ಆದ್ದರಿಂದ ನಿಮ್ಮ ಮತ ಒಮ್ಮೆ ನಿಮ್ಮ ಮನೆಯ ಮಗನಿಗೆ ಮತ ನೀಡಿ ಗೆಲ್ಲಿಸಬೇಕು ಎಂದರು.

ಇದೇ ಸಂಧರ್ಭದಲ್ಲಿ ನಗರಸಭೆ ಸದಸ್ಯ ವಿ.ವೈ.ಪ್ರಮೋದ್, ಶ್ರೀನಿವಾಸ್, ವಿಶುಕುಮಾರ್, ಮಾಜಿ ಸದಸ್ಯ ವಿಜಯಕುಮಾರ್, ಭಿಮಣ್ಣ, ವೆಂಕಟೇಶ್, ಇತರರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!