ನಿಮ್ಮ ಸೇವೆ ಮಾಡಲು ಮೂರನೇ ಬಾರಿಗೆ ಆರ್ಶಿವದಿಸಿ ಶಾಸಕ ಹಾಗೂ ಕೈ ಅಭ್ಯರ್ಥಿ ಟಿ.ರಘುಮೂರ್ತಿ
ಚಳ್ಳಕೆರೆ : ಕಳೆದ ಹತ್ತು ವರ್ಷದಲ್ಲಿ ಮಾಡಿದ ಸಾಧನೆಯನ್ನು ಜನತೆ ಮುಂದಿಟ್ಟು ಮತ್ತೊಮ್ಮೆ ಮೂರನೇ ಬಾರಿಗೆ ನಿಮ್ಮ ಸೇವೆ ಮಾಡಲು ಆರ್ಶಿವಧಿಸಿ ಎಂದು ಶಾಸಕ ಹಾಗೂ ಕೈ ಅಭ್ಯರ್ಥಿ ಟಿ.ರಘುಮೂರ್ತಿ ಹೇಳಿದರು.
ಅವರು ಕ್ಷೇತ್ರದ ಸಾಣಿಕೆರೆ ಗ್ರಾಪಂ, ನಗರಂಗೆರೆ ಗ್ರಾಪಂ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಮಿಂಚಿನ ಸಂಚಾರ ನಡೆಸಿ ಮಾತನಾಡಿದರು
ಇನ್ನೂ ಕಳೆದ ಬಾರಿ ನಿಮ್ಮ ಮನೆಯ ಮಗನಂತೆ ವಿಧಾನಸೌಧಕ್ಕೆ ಕಳಿಸಿದ್ದೀರಿ ಅದೇ ರೀತಿಯಲ್ಲಿ ಬಹು ಮತಗಳಿಂದ ಆಯ್ಕೆ ಮಾಡಿ, ಈ ಭಾರಿ ನಿಮ್ಮ ಋಣ ತೀರಿಸುವೆ ಎಂದರು.
ಚುನಾವಣೆಗೆ ಕೇವಲ ಇನ್ನೂ 8ದಿನ ಬಾಕಿ ಇರುವಾಗಳೇ ರಾಜ್ಯದಲ್ಲಿ ಚುನಾವಣೆ ರಣಕಹಳೆ ಮೊಳಗುತ್ತಿವೆ
ಅದರಂತೆ ಆಯಿಲ್ ಸಿಟಿಯ ಅದಿಪತ್ಯ ಹೊಂದಿದ ಹಾಲಿ ಶಾಸಕ ಟಿ.ರಘುಮೂರ್ತಿ ಈಡೀ ಕ್ಷೇತ್ರದಲ್ಲಿ ಭರ್ಝರಿಯಾಗಿ ಮತಬೇಟೆ ನಡೆಸುತ್ತಿದ್ದಾರೆ.