ಚಳ್ಳಕೆರೆ : ಈಡೀ ದೇಶದಲ್ಲಿ ವಿಶಿಷ್ಠ ಸ್ಥಾನ ಪಡೆದ ವಿಜ್ಞಾನ ನಗರಿ ಚಳ್ಳಕೆರೆ ಕ್ಷೇತ್ರದಲ್ಲಿ 2023ರ ಚುನಾವಣ ಕಣ ಈ ಬಾರಿ ಭರ್ಜರಿಯಾಗಿ ರಂಗೇರಿದೆ
ಅದರಂತೆ ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಈಡೀ ಕ್ಷೇತ್ರದಲ್ಲಿ ಮತಬೇಟೆ ನಡೆಸುವ ಮೂಲಕ ರಾಜಾಕೀಯ ಪಕ್ಷಗಳಿಂದ ಮುಂಚೂಣಿ ಕಾಯ್ದುಕೊಂಡಿದ್ದಾರೆ, ಅದರಂತೆ ಗ್ರಾಮಗಳಲ್ಲಿ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ.
ಇನ್ನೂ ಇಂದು ತುರುವನೂರು ಹೋಬಳಿಯ ಮಾಡನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಿಗೆ ತೆರಳಿದ ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಗೆ ತೆಂಗಿನ ಸಸಿ ನೀಡಿ ನಮ್ಮ ನಿಮ್ಮ ತೆಂಗಿನ ತೋಟದ ಗುರುತಿಗೆ ಎಂದು ಮಹಿಳಾ ಮತದಾರರು ಭರವಸೆ ನೀಡಿದರು.
ಇನ್ನೂ ಸ್ವಯಂ ನಿವೃತ್ತಿ ಹೊಂದಿದ ಎನ್.ರಘುಮೂರ್ತಿ, ಶಿವಪುತ್ರಪ್ಪ ಈಗೇ ಹಲವು ಮುಖಂಡರು ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಗೆ ಈಡೀ ದಿನ ಸಾಥ್ ನೀಡಿದರು.
ಪಕ್ಷೇತರ ಅಭ್ಯರ್ಥಿಯಾದಂತ ಕೆ ಟಿ ಕುಮಾರಸ್ವಾಮಿಯವರಿಗೆ ಕ್ಷೇತ್ರದಾದ್ಯಂತ ಜ್ಞಾಪಕವಾದ ಬೆಂಬಲ ವ್ಯಕ್ತವಾಗಿದೆ ಇವರಿಗೆ ಸಾತ್ ನೀಡಿದಂತ ನಿಕಟ ಪೂರ್ವ ತಹಸಿಲ್ದಾರ್ ಏನ್ ರಘುಮೂರ್ತಿ ಅವರಿಗೆ ಕೂಡ ಕ್ಷೇತ್ರಧ್ಯಂತ ಬೆಂಬಲ ವ್ಯಕ್ತವಾಗಿದೆ ತುರುನೂರು ಹೋಬಳಿಯಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದಂತ ದಿವಂಗತ ಮಂತ್ರಿಗಳಾದ ತಿಪ್ಪೇಸ್ವಾಮಿಯವರ ಬೆಂಬಲಿಗರು ಹರಿಷೋದ್ಗಾರದಿಂದ ಸ್ವಾಗತಿಸಿ ಬೃಹತ್ ಹೂವಿನ ಹಾರ ಹಾಕುವುದರೊಂದಿಗೆ ಸ್ವಾಗತ ಕೋರಿದರು

ಪ್ರತಿ ಮನೆಯಿಂದ ಆರ್ಥಿಕ ಸಹಾಯ ಮಾಡಿದರು ನಂತರ ಹೋಬಳಿಯಲ್ಲಿ 20,000 ಮತಗಳನ್ನು ಹಾಕುವುದಾಗಿ ವಾಗ್ದಾನ ನೀಡಿದರು ಪಕ್ಷ ಜಾತಿ ಭೇದ ಮರೆತು ಜಾತಿ ಭೇದ ಮರೆತು ವ್ಯಾಪಕವಾಗಿ ಬೆಂಬಲ ನೀಡಿದರು
ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಅಧಿಕಾರಿ ಎನ್.ರಘುಮೂರ್ತಿ ಪಕ್ಷೇತರ ಅಭ್ಯರ್ಥಿಯಾದ ಕುಮಾರಸ್ವಾಮಿ ತನ್ನ ತಾತನ ಕಾಲದಿಂದ ಸಮಾಜ ಸೇವೆಗೆ ತಮ್ಮನ್ನು ಮುಡಿಪಾಗಿಟ್ಟಿದ್ದಾರೆ ತಾಲೂಕಿನಲ್ಲಿ ಜನತೆಯ ಹಿತ ದೃಷ್ಟಿಯಿಂದ ಸಾಮಾಜಿಕ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಕಂಕಣ ಬದ್ದರಾಗಿದ್ದಾರೆ.
ಕ್ಷೇತ್ರದಲ್ಲಿ ವಿಶಿಷ್ಟವಾದಂತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು, ಸಿಬಿಎಸ್‌ಸಿ ಶಾಲೆಗಳು, 30ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವ ಗಾರ್ಮೆಂಟ್ ಫ್ಯಾಕ್ಟರಿ, ಬಡವರಿಗೆ ಸೂರು ಮತ್ತು ನಿವೇಶನ ನೀಡುವ ಮಹತ್ತರವಾದಂತ ಕನಸನ್ನು ಕಂಡಿದ್ದಾರೆ ಎಲ್ಲವುಗಳು ಸಹಕಾರಗೊಳ್ಳಬೇಕಾದರೆ ಪಕ್ಷೇತರ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಮುಖಾಂತರ ರಾಜ್ಯಕ್ಕೆ ಒಂದು ಹೊಸ ಸಂದೇಶವನ್ನು ನೀಡಬೇಕಿದೆ

ಮುಖಂಡ ಶಿವಪುತ್ರಪ್ಪ ಮಾತನಾಡಿ, ಚಳ್ಳಕೆರೆ ಕ್ಷೇತ್ರದ ಜನ ಪ್ರಜ್ಞಾವಂತರಿದ್ದು ಪಕ್ಷೇತರ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಲ್ಲಿ ಬೆಂಗಳೂರು ಮತ್ತು ತುಮಕೂರು ಅಭ್ಯರ್ಥಿಗಳಿಗೆ ಮಣೆ ಹಾಕದೆ ಕ್ಷೇತ್ರದಲ್ಲಿ ಎಲ್ಲ ಕೆಲಸ ಕಾರ್ಯಗಳು ಕಷ್ಟಕಾರ್ಪಣ್ಯಗಳನ್ನು ಬಗೆ ಹರಿಸಿ ಕೊಳ್ಳಬಹುದಾಗಿದೆ ಎಂದು ಹೇಳಿದರು
ಪಕ್ಷೇತರ ಅಭ್ಯರ್ಥಿಯಾದ ಕುಮಾರಸ್ವಾಮಿ ಮಾತನಾಡಿ ಕಳೆದ ಸಾರಿ ನನ್ನ ಬಗ್ಗೆ ಅಪಪ್ರಚಾರ ಮಾಡಿದ ಈಗ ಕಣದಲ್ಲಿರುವ ಅಭ್ಯರ್ಥಿಗಳಿಗೆ ಉತ್ತರ ನಿಮ್ಮಿಂದ ನೀಡಬೇಕಾಗಿದೆ ಈ ಚುನಾವಣೆಯಲ್ಲಿ ನನಗೆ ಆರ್ಥಿಕ ಸಂಪನ್ಮೂಲ ಇದೆ ವ್ಯಾಪಕವಾದ ಜನ ಬೆಂಬಲವಿದೆ ಅನುಕಂಪದ ಅಲೆ ಇದೆ ನನ್ನ ತಂದೆ ಮಾಡಿದ ಅಂತ ಕೆಲಸಗಳ ಹೆಗ್ಗುರುತ್ತಿದೆ
ಅಪಪ್ರಚಾರದ ಹಣ ಆಸೆ, ಆಮಿಷಗಳಿಗೆ ಚುನಾವಣೆಯಲ್ಲಿ ಅವಕಾಶಗಳಿಲ್ಲ ಈ ಚುನಾವಣೆ ಧರ್ಮ ಮತ್ತು ಅಧರ್ಮದ ನಡುವೆ ಸತ್ಯ ಮತ್ತು ಸುಳ್ಳುಗಳ ನಡುವೆ ನಡೆಯಲಿದೆ ಧರ್ಮ ಗೆಲ್ಲುತ್ತದೆ ಸತ್ಯ ಉಳಿಯುತ್ತದೆ ಹಾಗಾಗಿ ಎಲ್ಲಾ ಅಸಂಖ್ಯಾತ ಕಾರ್ಯಕರ್ತರು ಬೆಂಬಲಿಸಬೇಕೆAದು ಮನವಿ ಮಾಡಿದರು

About The Author

Namma Challakere Local News
error: Content is protected !!