ಚಳ್ಳಕೆರೆ : ಬಯಲು ಸೀಮೆಯಲ್ಲಿ ಚುಣಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ ಇನ್ನೂ ಕ್ಷೇತ್ರದಲ್ಲಿ ಕಮಲ ಪಡೆಯ ಕಲಿಗಳು ವಿಭಿನ್ನ ಪ್ರಯತ್ನದಲ್ಲಿ ಬೃಹತ್ ರೋಡ್ ಶೋ ನಡೆಸುವ ಮೂಲಕ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ.
ಅದರಂತೆ ಇಂದು ಸಚಿವ ಬಿ.ಶ್ರೀರಾಮುಲು ಬಿಜೆಪಿ ಅಭ್ಯರ್ಥಿ ಆರ್.ಅನಿಲ್ ಕುಮಾರ್ ಪರ ಮತಬೇಟೆಯಲ್ಲಿ ತೊಡಗಿದ ಅವರು ಬೆಳ್ಳಿಗ್ಗೆ ಯಿಂದ ಸಂಜೆಯ ತನಕ ಬಿರುಸಿನ ಪ್ರಚಾರ ನಡೆಸಿದರು.
ಪರುಶುರಾಂಪುರ ಹೋಬಳಿಯಿಂದ ಪ್ರಾರಂಭವಾದ ಬೃಹತ್ ರೋಡ್ ಶೋ ಚಳ್ಳಕೆರೆ ನಗರದ ನೆಹರು ವೃತ್ತದಲ್ಲಿ ಕೆಲ ಕಾಲ ಮತದಾರರನ್ನು ಉದ್ದೇಶಿ ಮಾತನಾಡಿದ ರಾಮುಲು ಹಾಲಿ ಕಾಂಗ್ರೇಸ್ ಶಾಸಕರನ್ನು ಕುಟುಕಿದರು,
ಕಾಂಗ್ರೆಸ್ ಶಾಸಕ ಟಿ.ರಘುಮೂರ್ತಿಗಿಂತಲೂ ಇವರು ಅತಿ ಬುದ್ದಿವಂತರಾಗಿದ್ದು ಈಗಾಗಲೆ ಕ್ಷೇತ್ರದಲ್ಲಿ ಅವಶ್ಯಕತೆ ಇರುವ ಹಲವು ಯೋಜನೆಗಳ ಬಗ್ಗೆ ಪಟ್ಟಿ ಮಾಡಿಕೊಂಡಿದ್ದಾರೆ, ಶಿಕ್ಷಣ, ಕೃಷಿ. ನಿರುದ್ಯೋಗ ಸೇರಿದಂತೆ ಹಲವು ಯೋಜನೆಗಳ ಅಭಿವೃದ್ಧಿಯ ಕನಸನ್ನು ಹೊತ್ತು ಬಂದಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ, ಈ ಬಾರಿ ಆಯ್ಕೆ ಮಾಡಬೇಕು ಎಂದರು.
ದೇಶದ ಪ್ರಧಾನ ಮೋದೀಜಿ ಹಾಗೂ ರಾಜ್ಯಸರಕಾರ ಡಬಲ್ ಇಂಜಿನಿ ಸರಕಾರ ಸದಾಶಿವ ಆಯೋಗ ಜಾರಿಗೆ ತರುವ ಮೂಲ ಒಳ ಮೀಸಲಾತಿಗೆ ಹೆಚ್ಚಿನ ಆಧ್ಯತೆ ನೀಡಿದೆ , ಕುಡಿಯುವ ನೀರಿನ ದಾಹ ತೀರಿಸಿದ ತುಂಗಾ ಭದ್ರಾ ಹಿನ್ನೀರಿನಿಂದ ಜಲಜೀವನ್ ಮಿಷನ್ ಯೋಜನಡೆಯಲ್ಲಿ ಮನೆ ಮನೆಗೆ ನಲ್ಲಿ ಸಂಪರ್ಕ. ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ, ಬೆಳೆ ವಿಮೆ, ಪರಿಹಾರ, ಪಿಎಂ ಕಿಸಾನ್ ಯೋಜನೆ ಸೇರಿದಂತೆ ಸಾಕಷ್ಟು ಜನಪರ ಯೋಜನೆಗಳನ್ನು ಸಾರಿಗೆ ತರುವ ಮೂಲಕ ರೈತರ, ಬಡವರ ಅಭಿವೃದ್ಧಿಗೆ ಸಹಕಾರಿಯಾಗಿದೆ ಆದೇ ರೀತಿ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಮೂರನೆ ಇಂಜಿನ್ ಇದ್ದಂತೆ ಈ ಬಾರಿ ಅನಿಲ್ ಕುಮಾರ್ ಗೆಲ್ಲಿಸಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವುದು ಖಚಿತ ಪರಶುರಾಂಪುರ ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುವುದು ಖಚಿತ ಆದ್ದರಿಂದ ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಗೆ ಮತ ನೀಡುವಂತೆ ಮನವಿ ಮಾಡಿಕೊಂಡರು.
ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಕುಟುಂಬದ ಸದಸ್ಯರೆಲ್ಲ ಐಎಎಸ್, ಕೆಎಎಸ್ ಸೇರಿದಂತೆ ಎಲ್ಲರೂ ಉನ್ನತ ಹುದ್ದೆಯಲ್ಲಿದ್ದಾರೆ ಅನಿಲ್ ಕುಮಾರ್ ಸಹ ಕೆಎಎಸ್ ಅಧಿಕಾರಿಯಾಗಿ ಉತ್ತಮ ಸೇವೆ ಮಾಡಿ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಪ್ರವೇಶ ಮಾಡಿ ಜನರ ಸೇವೆಗೆ ಬಂದಿದ್ದಾರೆ.
ಈ ಭಾಗದ ರೈತರ ಕೊಳವೆ ಬಾವಿಗಳಲ್ಲಿ ಅಂತರ್ಜ ಮಟ್ಟ ಹೆಚ್ಚಾಗಿದ್ದು ಅಡಿಕೆ, ತೆಂಗು ಸೇರಿದಂತೆ ತೋಟಗಾರಿಗೆ ಬೆಳೆಗಳು ಬೆಳೆಯುವ ಮೂಲಕ ಮಲೆನಾಡಿನ ವಾತಾವರಣ ನಿರ್ಮಾವಾಗಿರುವುದರಿಂದ ಹೆಚ್ಚಾಗಿ ಬೆಳೆದು ರೈತರು ಆರ್ಥಿಕವಾಗಿ ಮುಂದೆ ಬರುತ್ತಿದ್ದಾರೆ.
ಬಿಜೆಪಿ ಸರಕಾರದಲ್ಲಿ ಅಪ್ಪರ್ ಭದ್ರಯೋಜನೆಯನ್ನು ರಾಷ್ಟಿçÃಯ ಯೋಜನೆಯಡಿ ಸೇರಿಸಿ ಅನುದಾನ ಬಿಡುಗಡೆ ಮಾಡಿದ್ದು ಕೆರೆಗಳಿಗೆ ನೀರು ಹರಿಸುವ ಯೋಜನೆ ಬಿಜೆಪಿ ಸರಕಾರ ಮಾಡಲಿದೆ . ಕಾಂಗ್ರೆಸ್ ಶಾಸಕರು ಹೇಳತ್ತಾರೆ ನಾನೇ ವೇದಾವತಿನದಿಗೆ ನೀರು ಹರಿಸುವ ಹಾಗೂ ಕೆರೆಗಳಿಗೆ ನೀರು ಹರಿಸುವ ಯೋಜನೆ ಜಾರಿಗೆ ತಂದಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ. ಅದು ಬಿಜೆಪಿ ಸರಕಾರ ದಿಂದ ಮಾತ್ರ ಸಾಧ್ಯವಾಗಿದೆ. ನಾನು ಜಿಲ್ಲೆಯ ಉಸ್ತುವರಿ ಸಚಿವ, ಸಮಾಜಕಲ್ಯಾಣ , ಹಾಗೂ ಸಾರಿಗೆ ಸಚಿವನಾಗಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ .
ಪರಶುರಾಂಪುರ ಗ್ರಾಪಂ ಅಧ್ಯಕ್ಷ ಅನಿತ, ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿಶ್ರೀನಿವಾಸ್, ಬಿಜೆಪಿ ಮುಖಂಡರಾದ ಬಾಳೆಕಾಯಿ ರಾಮದಾಸ್, ಇಂದಿರಾ ಅನಿಲ್ ಕುಮಾರ್, ಬಿ.ವೀರಭದ್ರಣ್ಣ, ಸೇರಿಂದAತೆ ಬಿಜೆಪಿ ಕಾರ್ಯಕರ್ತರು, ಮುಖಂಡರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಉಪಸ್ಥಿತರಿದ್ದರು.
ನಗರದ ನೆಹರು ವೃತ್ತದಿಂದ ಅಂಬೇಡ್ಕರ್ ವೃತ್ತ, ವಾಲ್ಮೀಕಿ ವೃತ್ತದವರೆಗೆ ರೋಡ್ ಶೋ ಮೂಲಕ ಮತಯಾಚನೆ ನಡೆಸಿದರು.