ನಾಯಕನಹಟ್ಟಿ ಸಮೀಪದ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತೋರಿಕೊಳಮ್ಮನಹಳ್ಳಿಯ ಗ್ರಾಮದ ರೈತ ಲಕ್ಷ್ಮಮ್ಮ ಲೇಟ್ ಬಿ ಮಹೇಂದ್ರಪ್ಪ ರವರ ರೀ ಸರ್ವೇ ನಂಬರ್ 22/1B ಜಮೀನಿನಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ರೇಷ್ಮೆ ಮನೆಯ ಗೂಡಿನ ಸೀಟು ಆರಿ ಜಖಂಗೊಂಡು ಸುಮಾರು 300 ರೇಷ್ಮೆ ಮೊಟ್ಟೆ 250 ಕೆಜಿ ಗೂಡು ಕಟ್ಟಿದ್ದು ಸಂಪೂರ್ಣವಾಗಿ ಹಾಳಾಗಿದೆ ಮತ್ತು 40ರಿಂದ 50 ಸಿಮೆಂಟ್ ಸೀಟು ಹಾಳಾಗಿ ಎರಡು ಟನ್ ಕಬ್ಬಿಣ ಜಕವಾಗಿದೆ ಸುಮಾರು ಮೂರು ಲಕ್ಷಕ್ಕೂ ಅಧಿಕವಾಗಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಕಡೆಮನೆ ರಾಮಚಂದ್ರಪ್ಪ, ಮಾಜಿ ಸದಸ್ಯ ಮಂಜಣ್ಣ ಮತ್ತು ನಾಗೇಶ್ ರಾಜಣ್ಣ ಮಾರುತಿ ತಿಪ್ಪೇಸ್ವಾಮಿ ಮುಂತಾದವರು ಇದ್ದರು