ಚಳ್ಳಕೆರೆ : ಕಳೆದ ಹಲವು ದಿನಗಳಿಂದ ಗ್ರಾಮೀಣ ಭಾಗದಲ್ಲಿ ಪ್ರಚಾರ ನಡೆಸಿ ಈಗ ಎರಡನೇ ಸುತ್ತಿನ ಪ್ರಚಾರದಲ್ಲಿ ತೊಡಗಿದ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್
ಚಳ್ಳಕೆರೆ ನಗರದ ಗಾಂಧಿನಗರ, ಅಂಬೆಡ್ಕರ್ ನಗರ ಈಗೇ ವಿವಿಧ ವಾರ್ಡ್ಗಳಲ್ಲಿ ಭರ್ಜರಿಯಾಗಿ ಮತಯಾಚನೆ ನಡೆಸುತ್ತಿದ್ದಾರೆ.
ಇನ್ನೂ ನಗರದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ನೆಚ್ಚಿನ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ವಾರ್ಡ್ಗೆ ಆಗಮಿಸುತ್ತಿದ್ದಂತೆ ಹೂವಿನ ಮಾಲೆ ಹಾಕಿ ಆರತಿ ಬೆಳಗಿ ಅದ್ದೂರಿ ಸ್ವಾಗತ ಕೋರುತ್ತಿದ್ದಾರೆ.
ಇನ್ನೂ ಪ್ರಚಾರದಲ್ಲಿ ತೊಡಗಿದ ಅಭ್ಯರ್ಥಿ ಎಂ.ರವೀಶ್ ಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ನಗರದಲ್ಲಿ ಚರಂಡಿ ಇಲ್ಲ, ರಸ್ತೆಗಳು ಇಲ್ಲ, ಈಗೇ ವಸತಿ ನಿವೇಶನದ ಹಕ್ಕು ಪತ್ರ ಕೊಟ್ಟಿಲ್ಲ ಇಂತಹ ಹಲವು ಸಮಸ್ಯೆಗಳು ನಗರದ ಮತದಾರರು ಕೇಳುತ್ತಿದ್ದಾರೆ ಅದ್ದರಿಂದ ಈ ಬಾರಿ ಬದಲಾವಣೆ ಬಯಸುತ್ತಿದ್ದಾರೆ, ಜೆಡಿಎಸ್‌ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಈದೇ ಸಂಧರ್ಭದಲ್ಲಿ ಅಧ್ಯಕ್ಷ ಪಿ.ತಿಪ್ಪೆಸ್ವಾಮಿ, ಮಾಜಿ ಜಿಪಂ.ಸದಸ್ಯ ರಂಗಣ್ಣ, ಚಿಕ್ಕಣ್ಣ, ಸಣ್ಣವೀರಣ್ಣ, ನಗರಸಭೆ ಸದಸ್ಯ ವಿ.ವೈ.ಪ್ರಮೋದ್, ಶ್ರೀನಿವಾಸ್, ನಿರ್ಮಾಲಾ, ನಾಗಮಣಿ, ಕವಿತಾ ನಾಯಕಿ, ತಿಪ್ಪಮ್ಮ, ಮಾಜಿ ಉಪಾಧ್ಯಕ್ಷ ಟಿ.ವಿಜಯ್ ಕುಮಾರ್, ಎಸ್.ಟಿ.ವಿಜಯ್ ಕುಮಾರ್, ರವಿಕುಮಾರ್, ಡಿ.ಚಂದ್ರು ಭಿಮಣ್ಣ, ನಾಗರಾಜ್ ನನ್ನಿವಾಳ, ಗ್ರಾಪಂ.ಮಾಜಿ ಸದಸ್ಯ ನಾಗರಾಜ್, ಪ್ರಸನ್ನ, ಪಾಪಕ್ಕ, ವಿನೋದಮ್ಮ, ಪಾರ್ವತಮ್ಮ, ನೇತ್ರಮ್ಮ, ಸುಧಮ್ಮ, ಇತರರು ಇದ್ದರು.

About The Author

Namma Challakere Local News
error: Content is protected !!