ಚಳ್ಳಕೆರೆ : ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲೇ ಬೇಕು, ಅದರಂತೆ ಕಲ್ಲಿನ ಕೋಟೆ ಚಿತ್ರದುರ್ಗ ಜಿಲ್ಲೆಯಲ್ಲಿ ಆರು ಸ್ಥಾನಗಳಿಗೆ ಆರು ಸ್ಥಾನ ಗೆಲ್ಲಲೆ ಬೇಕು ಎಂದು ಪಣತೊಟ್ಟಿರುವ ಕೇಸರಿ ಪಾಳಯದ ನಾಯಕರು ಇನ್ನೂ ಆಯಿಲ್ ಸಿಟಿಯ ಅದಿಪತ್ಯಕ್ಕೆ ಅಂತ್ಯ ಹಾಡಿ
ಬದಲಾವಣೆ ತರುವ ನಿಟ್ಟಿನಲ್ಲಿ ಬಿಜೆಪಿ ನಾಯಕರು ಇನ್ನಿಲ್ಲದ ಕಸರತ್ತು ಮಾಡುವ ಮೂಲಕ ನಗರದಲ್ಲೆ ಬೀಡು ಬಿಟ್ಟ ಬಿಜೆಪಿ ಅಭ್ಯರ್ಥಿ ಆರ್.ಅನಿಲ್ ಕುಮಾರ್
ನಗರದ ಇಂಜನಹಟ್ಟಿ, ಮದಕರಿ ನಗರ ಈಗೇ ಹಲವು ವಾರ್ಡ್ಗಳಲ್ಲಿ ಮತಬೇಟೆ ನಡೆಸುತ್ತಿದ್ದಾರೆ.
ಇನ್ನೂ ನಗರದ ಮತದಾರರು ಹೂವಿನ ಮಳೆ ಸುರಿಸುವ ಮೂಲಕ ಅಭ್ಯರ್ಥಿ ಆರ್.ಅನಿಲ್ ಕುಮಾರ್ ಗೆ ಸ್ವಾಗತ ಕೋರಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಆರ್.ಅನಿಲ್ ಕುಮಾರ್ ನಗರದಲ್ಲಿ ಅಭಿವೃದ್ದಿಯಾಗಿಲ್ಲ ಸುಖ ಸುನಮ್ಮನೇ ಅಭಿವೃದ್ದಿ ಮಾಡಿದ್ದೆನೆ ಎಂದು ಹೇಳುವ ಶಾಸಕರು ಪೊಳ್ಳು ಭರವಸೆಗೆ ಸೀಮಿತವಾಗಿದಾರೆ.
ಈಡೀ ನಗರ ವ್ಯಾಪ್ತಿಯಲ್ಲಿ ಸುತ್ತಿ ತಿರುಗಾಟ ನಡೆಸಿದ್ದೆನೆ ಆದರೆ ಎಲ್ಲಿಯೂ ಕೂಡ ಅಭಿವೃದ್ದಿಯಾಗಿಲ್ಲ ಎಂದು ಕುಟುಕಿದರು.