ಚಳ್ಳಕೆರೆ : ಇಂದು ಆಯಿಲ್ ಸಿಟಿಯಲ್ಲಿ ಕಾಂಗ್ರೇಸ್ ತೊರೆದು ಜೆಡಿಎಸ್ ಬಾವುಟ ಹಿಡಿದ ಪರುಶುರಾಂಪುರ ಬಾಗದ ಕಾಡುಗೊಲ್ಲ ಸಮುದಾಯದ ಹಲವು ಮುಖಂಡರು ತಾಲೂಕು ಅಧ್ಯಕ್ಷ ಪಿ.ತಿಪ್ಪೆಸ್ವಾಮಿ ಹಾಗೂ ಅಭ್ಯರ್ಥಿ ಎಂ.ರವೀಶ್ ಕುಮಾರ್ ನೇತೃತ್ವದಲ್ಲಿ ಪಕ್ಷ ಸೇರ್ಪಡೆಯಾದರು
ಇನ್ನೂ ಪಕ್ಷಕ್ಕೆ ನೂತನವಾಗಿ ಸೆರ್ಪಡೆಗೊಂಡ ಮಾಜಿ ಶಾಸಕ ಬಸವರಾಜ್ ಮಂಡಿಮಠ್ ರವರ ಖಾಸಗಿ ನಿವಾಸದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ನಡೆಸಿದ ಅವರು ಮಾಧ್ಯಮದೊಂದಿಗೆ ಮಾತನಾಡಿದರು.
ಇನ್ನೂ ಕಳೆದ ಮುವತ್ತು ವರ್ಷಗಳಿಂದ ಕಾಂಗ್ರೇಸ್ ಪಕ್ಷದ ಸಿದ್ದಾಂತಗಳನ್ನು ಒಪ್ಪಿ ಪಕ್ಷದಲ್ಲಿ ಇದ್ದ ಕಾಡು ಗೊಲ್ಲ ಸಮುದಾಯದ ಮಾಜಿ ಜಿಪಂ ಸದಸ್ಯ ರಂಗಣ್ಣ, ಚಿಕ್ಕಣ್ಣ, ವೀರಣ್ಣ ಈಗೇ ಬೆಂಬಲಿಗರು ಇಂದು ಜೆಡಿಎಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಮೆಚ್ಚಿ ಆಯಿಲ್ ಸಿಟಿಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡುತ್ತೆವೆ ಎಂದು ಹೇಳಿದರು.
ಇನ್ನೂ ಮುಂಜಾನೇಯೇ ಗೊಲ್ಲಲಾಮ್ಮ ದೇವಿ ಸನ್ನಿದಿಯಲ್ಲಿ ಜೆಡಿಎಸ್ ಪಕ್ಷದ ಬಾವುಟ ಹಿಡಿದ ಅನೇಕ ಮುಖಂಡರು ಈ ಬಾರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಗೆಲುವು ಕಾಣಬವುದು ಇನ್ನೂ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದರು.
ನೂತನವಾಗಿ ಪಕ್ಷ ಸೇರ್ಪಡೆಯಾದ ಜಿಪಂ.ಮಾಜಿ ಸದಸ್ಯ ರಂಗಣ್ಣ ಮಾತನಾಡಿ, ಕಾಂಗ್ರೇಸ್ ಪಕ್ಷದ ಹಾಲಿ ಶಾಸಕರು ಈಡೀ ರಾಜ್ಯದಲ್ಲಿ ಮಾಡದಂತಹ ಉತ್ತಮ ಅಭಿವೃದ್ದಿ ಮಾಡಿದ್ದಾರೆ ಆದರೆ ಕಾರ್ಯಕರ್ತರನ್ನು ಕಡೆಗಾಣಿಸಿದ್ದಾರೆ ಆದ್ದರಿಂದ ಕಳೆದ 2018ರಲ್ಲಿ ಹಿನ್ನಡೆಯಾಬೇಕಿತ್ತು ಆದರೆ ಕೆಲವು ಮುಖಂಡರ ಹೊಂದಾಣಿಕೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಗೆಲವು ಸಿಕ್ಕಾಂತಾಯಿತು.
ನಾವು ರಾಜಾಕೀಯ ಪಾಠ ಕಲಿತಿದ್ದು ಕಾಂಗ್ರೇಸ್ ಪಕ್ಷದ ಮಾಜಿ ಸಚಿವ ಡಿ.ಸುಧಾಕರ್ ಅವರು ಹೇಳಿದಂತೆ ನಡೆದುಕೊಂಡಿದ್ದೆವೆ ಆದರೆ ಈಗ ಬದಲಾವಣೆ ಗಾಳಿ ಬೀಸಿದೆ ಆದ್ದರಿಂದ ಜೆಡಿಎಸ್ ನತ್ತ ಮುಖ ಮಾಡಿದ್ದೆವೆ, ಎಸ್ಟಿ ಮೀಸಲಾತಿ ಪಡೆದ ಚಳ್ಳಕೆರೆ ಕ್ಷೇತ್ರ ಮೊದಲಿಗೆ ಈ ಬಾಗದಲ್ಲಿ ಕಾಂಗ್ರೇಸ್ ನೆಲಕಚ್ಚಿತ್ತು ಆದರೆ ಹಾಲಿ ಶಾಸಕ ಮೇಲ್ಮಟ್ಟಕ್ಕೆ ತಂದರು, ಇನ್ನೂ ಕೆಲವು ಯೋಜನೆಗಳನ್ನು ಹಾಲಿ ಶಾಸಕ ಟಿ.ರಘುಮೂರ್ತಿ ಹೋರಾಟದ ಮೂಲಕ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ.
ಇನ್ನೂ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಮಾತನಾಡಿ, ಈಡೀ ಕ್ಷೇತ್ರದಲ್ಲಿ ಮೂರನೇ ಹಂತದಲ್ಲಿರು ಗೊಲ್ಲ ಸಮುದಾಯದ ಮತದಾರರು ನಮ್ಮ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಿರುವುದು ನಮಗೆ ಆನೆ ಬಲ ಬಂದAತಾಗಿದೆ, ಮಾಜಿ ಜಿಪಂಸದಸ್ಯ ರಂಗಣ್ಣನವರದು ರಾಜಕೀಯ ಮೀರಿದ ಸಂಬAಧ ನಮ್ಮಿಬ್ಬರ ಮಧ್ಯೆ ಇತ್ತು ಈಗ ಸಂಬAದ ಗಟ್ಟಿಯಾಯಿತು, ಮಾಜಿ ಮುಖ್ಯಮಂತ್ರಿ ಕುಮಾರಣ್ಣನವರ ಕಾಳಜಿಗೆ ಕ್ಷೇತ್ರದಲ್ಲಿ ಪ್ರತಿನಿತ್ಯವೂ ಪಕ್ಷ ಸೆರ್ಪಡೆಯಾಗುತ್ತಿದ್ದಾರೆ ಅದರಂತೆ ಈ ಬಾರಿ ಗೆಲುವು ನಿಶ್ಚಿತ ಎಂಬ ಮಾತುಗಳು ಕೇಳಿಬರುತ್ತಿವೆ , ನಾನು ಗೆದ್ದ ನಂತರ ಸರ್ವ ಜಾನಾಂಗೀಯ ಎಲ್ಲಾ ಸಮುದಾಯಗಳನ್ನು ಜೊತೆಯಲ್ಲಿಟ್ಟುಕೊಂಡು ಕ್ಷೇತ್ರ ಅಭಿವೃದ್ದಿಯತ್ತ ಹೋಗುತ್ತೆನೆ, ಏಕ ಚಕ್ರದಿಪತ್ಯ ನಡೆಸಲ್ಲ. ಸರಕಾರದ ಸೌಲಭ್ಯಗಳನ್ನು ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವ ಮೂಲಕ ಹೊಸಬರು ಹಳೆಯ ಕಾರ್ಯಕರ್ತರನ್ನು ಜೊತೆಯಲ್ಲಿಟ್ಟುಕೊಂಡು ಹೋಗುತ್ತೆನೆ.
ಬಾಕ್ಸ್ ಮಾಡಿ :
2023ಕ್ಕೆ ಕೈ ಶಾಸಕನ್ನಾಗಿ ಮಾಡಿದರೆ ಹಾಲಿ ಶಾಸಕರ ಹತ್ತು ವರ್ಷದ ಅಭಿವೃದ್ದಿ ಕೇವಲ ಐದು ವರ್ಷದಲ್ಲಿ ಮಾಡಿ ತೋರಿಸುತ್ತೆನೆ, 2018ರಲ್ಲಿ ನಾನು ಸೋತರು ಕ್ಷೇತ್ರದ 35 ಹಳ್ಳಿಗಳಿಗೆ ಕಾಂಕ್ರಿಟ್ ರಸ್ತೆ, ಟರ್ಸನ್ಪರ್ಮರ್ ಈಗೇ ಚಳ್ಳಕೆರೆ ಕ್ಷೆತ್ರದ ಜನರಿಗೆ ಹಲವು ಸೌಲಭ್ಯಗಳನ್ನು ಸರಕಾರದ ಮಂತ್ರಿಗಳ ಒಡನಾಟದಿಂದ ಅಭಿವೃದ್ದಿಯಲ್ಲಿ ಮುಂಚೂಣಿಯಲ್ಲಿದ್ದೆನೆ.—ಎA.ರವೀಶ್ ಕುಮಾರ್ ಜೆಡಿಎಸ್ ಅಭ್ಯರ್ಥಿ
ಬಾಕ್ಸ ಮಾಡಿ :
2018ರ ಚುನಾವಣೆ ಮುಗಿದ ಮೇಲೆ ಕಾಂಗ್ರೇಸ್ ಕಾರ್ಯರ್ತರ ನಡೆಸಿಕೊಂಡ ರೀತಿ ಮಾತ್ರ ಸರಿಯಲ್ಲ ಆದ್ದರಿಂದ ಈ ಭಾರಿ ಜೆಡಿಎಸ್ಗೆ ನಮ್ಮ ಬೆಂಬಲ, ರಾಜ್ಯ ಕಾಂಗ್ರೇಸ್ ವರಿಷ್ಠರು ರಾಜ್ಯದ ಕಾಡುಗೊಲ್ಲ ಸಮುದಾಯಕ್ಕೆ ಒಂದು ಕ್ಷೇತ್ರದ ಟಿಕೆಟ್ ನೀಡಿಲ್ಲ ಈಗೇ ಕಾಂಗ್ರೇಸ್ ಪಕ್ಷದ ದೋರಣೆ ಜಾಸ್ತಿಯಾಗಿದೆ, ಆದ್ದರಿಂದ ಚಳ್ಳಕೆರೆ ಕ್ಷೇತ್ರದ ಎಸ್ಟಿ ಮೀಸಲಾತಿಯನ್ನು ಒಬ್ಬರೆ ಅನುಭವಿಸುವ ಅಧಿಕಾರ ಕೊಡಬೇಡಿ ಬದಲಾವಣೆ ಗಾಳಿ ಬಿಸುತ್ತಿದೆ ಕ್ಷೇತ್ರದಲ್ಲಿ ಬದಲಾವಣೆ ನಿಶ್ಚಿತ.—
ರಂಗಣ್ಣ, ಮಾಜಿ ಜಿಪಂ.ಸದಸ್ಯ
ಇದೇ ಸಂಧರ್ಭದಲ್ಲಿ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ, ಜಿಪಂ ಸದಸ್ಯ ರಂಗನಾಥ, ಚಿಕ್ಕಣ್ಣ, ಸಿದ್ದಣ್ಣ, ಜಿ.ಕೆ.ವೀರಣ್ಣ, ಉಪ್ಪಾರಹಟ್ಟಿ ಶಿವಣ್ಣ, ಪರುಶುರಾಮಪುರ ರಾಮಾಂಜನೇಯ, ಶಿವಣ್ಣ, ಶ್ರೀನಿವಾಸ್, ಹೆಗ್ಗೆರೆ ಆನಂದಪ್ಪ, ಸಮರ್ಥರಾಯ್, ಕೊರರ್ಲಕುಂಟೆ ಶಿವಣ್ಣ, ಟಿ.ವಿಜಯ್ ಕುಮಾರ್, ನಾಗರಾಜ್, ವೀರಣ್ಣ ಚೆನ್ನಿಗರಾಮಯ್ಯ, ಶ್ರೀನಿವಾಸ್ ವಕೀಲರು, ಭಿಮಣ್ಣ, ಬಸಣ್ಣ, ಕೊರ್ಲಕುಂಟೆರವಿ, ಬಸವರಾಜ್, ರಾಮಣ್ಣ ಇತರರು ಇದ್ದರು.