ಚಳ್ಳಕೆರೆ : ಆಯಿಲ್ ಸಿಟಿಯಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿದ ಮೂರು ರಾಜಾಕೀಯ ಪಕ್ಷಗಳಲ್ಲಿ ತಾನು ವಿಭಿನ್ನ ಎಂದು ತೋರಿಸಿಕೊಳ್ಳುವ ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ರವರು
ನಾನು ಸ್ಥಳೀಯ ಅಭ್ಯರ್ಥಿ ನನಗೆ ಈ ಬಾರಿ ಮತದಾರರು ಆರ್ಶಿವಾದ ಮಾಡುತ್ತಾರೆ ಎಂದು ಕ್ಷೇತ್ರದ ಉಪ್ಪಾರಹಟ್ಟಿ, ಕೆಂಚವೀರನಹಳ್ಳಿ ಈಗೇ ವಿವಿಧ ಹಳ್ಳಿಗಳಲ್ಲಿ ಮತಬೇಟೆ ನಡೆಸುತ್ತಿರುವ
ಕುಮಾರಸ್ವಾಮಿ ರವರಿಗೆ ಗ್ರಾಮದಲ್ಲಿ ಅದ್ದೂರಿ ಸ್ವಾಗತ ಸಿಗುತ್ತಿದೆ ಇನ್ನೂ ಮಾಜಿ ಸಚಿವರಾದ ತಿಪ್ಪೆಸ್ವಾಮಿರವರÀ ಸಾಧನೆ ಕ್ಷೇತ್ರದಲ್ಲಿ ಜೀವಂತವಾಗಿದೆ ಎಂದು ಮಗ ಕೆಟಿ ಕುಮಾರಸ್ವಾಮಿ ಪ್ರಚಾರದಲ್ಲಿ ತೊಡಗಿದ್ದಾರೆ ಇನ್ನೂ ಮಾಧ್ಯಮದೊಂದಿಗೆ ಮಾತನಾಡಿದ ಅವರು
ಇನ್ನೂ ಚಳ್ಳಕೆರೆ ಕ್ಷೇತ್ರದ ಸ್ಥಳೀಯ ಅಭ್ಯರ್ಥಿ ನಾನು ನಮ್ಮ ತಂದೆಯವರ ಹಾದಿಯಲ್ಲಿ ಸಾಗುತ್ತಿರುವೆ, ಕ್ಷೇತ್ರದ ಜನರು ಒಂದು ಬಾರಿ ಅವಕಾಶ ನೀಡಿದರೆ ಮತ್ತೆ ಮತದಾರರ ಋಣ ತೀರಿಸಲು ಬದ್ದನಾಗಿರುವೆ ಈಗಾಗಲೇ ಕಳೆದ ಹತ್ತು ವರ್ಷಗಳಿಂದ ಆಳ್ವಿಕೆ ನಡೆಸುತ್ತಿರುವ ಶಾಸಕರು ಅಭಿವೃದ್ದಿ ಹೆಸರಲ್ಲಿ ತಾವುಗಳು ಅಭಿವೃದ್ದಿಯಾಗಿದ್ದಾರೆ ಒರತು ಕ್ಷೇತ್ರ ಅಭಿವೃದ್ದಿ ಮಾಡಿಲ್ಲ ಎಂದು ಕುಟುಕಿದರು.
ಈದೇ ಸಂಧರ್ಭದಲ್ಲಿ ಮುಖಂಡ ಶಿವಪುತ್ರಪ್ಪ, ಕಾಟಪನಹಟ್ಟಿ ಬೈಯಣ್ಣ, ಕೆಂಚವೀರನಹಳ್ಳಿ ಗ್ರಾಮಸ್ಥರು ಇತರರು ಇದ್ದರು.