ಚಳ್ಳಕೆರೆ : ಆಯಿಲ್ ಸಿಟಿ ಅದಿಪತ್ಯಕ್ಕೆ ಗೆಲ್ಲಲೇ ಬೇಕು ಎಂದು ಪಣತೊಟ್ಟಿರುವ ಬಿಜೆಪಿ ಅಭ್ಯರ್ಥಿ ಆರ್.ಅನಿಲ್‌ಕುಮಾರ್ ಈಡೀ ಕ್ಷೇತ್ರದಲ್ಲಿ ಭರ್ಜರಿ ಕ್ಯಾಂಪೇನ್ ನಡೆಸುತ್ತಿದ್ದಾರೆ.
ಅದರಂತೆ ಈಡೀ ಕ್ಷೇತ್ರವನ್ನು ಸುತ್ತಿ ನಂತರ ನಗರ ಪ್ರದೇಶದತ್ತ ಮುಖ ಮಾಡಿದ ಅನಿಲ್ ಕುಮಾರ್ ನಗರದ ಒಂದನೇ ವಾರ್ಡ್ನ ಕಾಟಪ್ಪನಹಟ್ಟಿಯ ಶ್ರೀ ಕಾಟಮಲಿಂಗೇಶ್ವರ ಸ್ವಾಮಿಗೆ ವಿಶೇಷೆ ಪೂಜೆ ಸಲ್ಲಿಸಿ ನಂತರ ರೋಡ್ ಶೋ ನಡೆಸಿದರು.
ಇನ್ನೂ ಅಭ್ಯರ್ಥಿ ಅನಿಲ್ ಕುಮಾರ್‌ಗೆ ಮುಖಂಡ ಬಾಳೆಕಾಯಿ ರಾಮದಾಸ್, ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಮಂಜುನಾಥ್, ನಗರಸಭೆ ಸದಸ್ಯರಾದ ಎಂ.ಜಯಣ್ಣ, ವೆಂಕಟೇಶ್ ಇತರರು ಸಾಥ್ ನೀಡಿದರು,
ಇನ್ನೂ ಮಾಧ್ಯಮಾದೊಂದಿಗೆ ಮಾತನಾಡಿದ ಅಭ್ಯರ್ಥಿ ಆರ್.ಅನಿಲ್ ಕುಮಾರ್, ಈಗಾಗಲೆ ಕ್ಷೇತ್ರದ ಪ್ರತಿ ಹಳ್ಳಿಗಳಿಗೆ ಪ್ರವೇಶ ಮಾಡಿ ಗ್ರಾಮೀಣ ಭಾಗದ ಮತದಾರರ ಸಂಕಷ್ಟಗಳನ್ನು ಹಾಲಿಸಿ ಜನರ ಬದುಕು-ಬವಣೆಗಳನ್ನು ಅರಿತುಕೊಂಡಿದ್ದೇನೆ. ಜೊತೆಗೆ ನನ್ನ ಕನಸುಗಳನ್ನು ಕ್ಷೇತ್ರದಲ್ಲಿ ಮತದಾರರಿಗೆ ತಿಳಿಸಿದ್ದೆನೆ ಒಟ್ಟಾರೆ ಬಯಲು ಸೀಮೆ ಅಭಿವೃದ್ದಿಗೆ ಕಂಕಣ ಬದ್ದನಾಗಿದ್ದೆನೆ, ಈ ಕ್ಷೇತ್ರದ ನೆಲವನ್ನು, ಆರ್ಥಿಕ, ಸಾಮಾಜಿಕ ಪರಿಸ್ಥಿತಿಗಳನ್ನು ಅರಿತುಕೊಂಡಿದ್ದೇನೆ. ಈ ಭಾಗದ ಜನರ ಜೀವನ ಮಟ್ಟ ಸುಧಾರಣೆಗೆ, ಆರ್ಥಿಕ ಪ್ರಗತಿಗೆ, ಆದಾಯ ಹೆಚ್ಚಳಕ್ಕೆ ಇರುವ ತೊಡಕುಗಳೇನು ಎಂಬುದನ್ನು ಅಭ್ಯಾಸ ಮಾಡಿದ್ದೇನೆ..ಕ್ಷೇತ್ರದಲ್ಲಿ ಜ್ವಾಲಂತ ಸಮಸ್ಯೆಗಳನ್ನು ಪಟ್ಟಿ ಮಾಡಿದ್ದೆನೆ ಮೊದಲಿಗೆ ನನ್ನ ಅಧ್ಯತೆ ನಿರುದ್ಯೋಗ, ಕೃಷಿ ಭೂಮಿಗಳಿಗೆ ಜೀವ ತುಂಬುವುದು ಈಗೇ ಪ್ರಮುಖ ಅಜೆಂಡಗಳನ್ನು ಕ್ಷೇತ್ರದಲ್ಲಿ ಅರಿತುಕೊಂಡಿದ್ದೆನೆ

ಆಯಿಲ್ ಸಿಟಿಯ ಪ್ರದೇಶದಲ್ಲಿ ಇಲ್ಲಿನ ಗುಣ ವಿಶೇಷತೆಗಳ ಬಗ್ಗೆ ಸಂಪೂರ್ಣವಾದ ಹಿಡಿತವಿದೆ, ರೈತರ ಬಾಳನ್ನು ಬೆಳಗಲು, ಆದಾಯ ದ್ವಿಗುಣಗೊಳಿಸಲು ಇಲ್ಲಿ ಸುಧಾರಣೆ ಯ ಅವಷ್ಯಕತೆ ಇದೆ. ರೈತರಿಗೆ ಮಾರುಕಟ್ಟೆಯ ಬಗ್ಗೆ ಅರಿವು ಮೂಡಿಸಬೇಕಿದೆ. ತಮ್ಮ ಬೆಳೆಗಳಿಗೆ ಉತ್ತಮ ಲಾಭ ಪಡೆಯುವ ಕಾಂಟ್ರಾಕ್ಟ್ ಫಾರ್ಮಿಂಗ್ ನಂಥಹ ಅನೇಕ ದಾರಿಗಳನ್ನು ಹುಡುಕಬೇಕಿದೆ. ರೈತರು ವಂಚನೆಗೆ ಒಳಗಾಗದಂತೆ ಶೇ ಐವತ್ತು – ಐವತ್ತು ಲಾಭಾಂಶ ದೊರಕುವಂತೆ ಮಾಡಬೇಕಿದೆ.
ಇದರಿಂದ ರಫ್ತು ಗುಣಮಟ್ಟದ ಫಸಲು ತೆಗೆಯುವ ರೈತರಿಗೆ ಅನುಕೂಲ ಆಗುವುದರ ಜೊತೆಗೆ ದುಡಿಯುವ ಕೈಗಳಿಗೆ ಕೈತುಂಬಾ ದುಡಿಯುವ ವಿಫುಲ ಅವಕಾಶ ಲಭ್ಯವಾಗುತ್ತದೆ. ಆ ಕೀರ್ತಿಯನ್ನು, ಹೊರಟುಹೋಗಿರುವ ಆ ಅವಕಾಶವನ್ನು ಮರಳಿ ಸ್ರಷ್ಟಿಸುವ, ಇಡೀ ಪ್ರದೇಶದ ಚಿತ್ರಣವನ್ನೇ ಬದಲಿಸುವ ಹಂಬಲ, ಗುರಿ, ಛಲ ನನ್ನದಾಗಿದೆ. ಬರಪೀಡಿತ ಪ್ರದೇಶ ಹಿಂದುಳಿದ ತಾಲೂಕು ಎಂಬ ಹಣೆ ಪಟ್ಟಿಯನ್ನು ಹೋಗಲಾಡಿಸಲು ಹಲವು ಜನರ ಪರ ಯೋಜನೆಗಳ ಪಟ್ಟಿಯನ್ನು ಸಿದ್ದ ಮಾಡಿಕೊಂಡಿದ್ದು ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಅನಿಲ್ ಕುಮಾರ್ ಆದ ನನಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಜಯಶೀಲರನ್ನಾಗಿ ಮಾಡುವಂತೆ ಮನವಿ ಮಾಡಿಕೊಂಡರು.
ಈದೇ ಸಂಧರ್ಭದಲ್ಲಿ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಸೋಮಶೇಖರ್ ಮಂಡಿಮಠ್, ಬಾಳೆಕಾಯಿ ರಾಮದಾಸ್ , ಮಾತೃಶ್ರೀ ಮಂಜುನಾಥ, ಈಶ್ವರನಾಯಕ, ಪಾಲನೇತ್ರ, ಮಂಜು ಎಬಿವಿಪಿ, ವೆಂಕಟೇಶ್, ಮಂಜು ಸ್ವಾಮಿ, ತಿಪ್ಪೇಶಿ, ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಪಕ್ಷದ ಹಿರಿಯ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು.
ನಗರದ ವೆಂಕಟೇಶ್ವರನಗರ, ಕಾಟಪ್ಪನಹಳ್ಳಿ, ಅಭಿಶೇಕ್ ನಗರದ ಸೇರಿದಂತೆ ವಿವಿಧ ನಗರಸಭೆ ವ್ಯಾಪ್ತಿಯ ವಾರ್ಡ್ಗಳಲ್ಲಿ ರೋಡ್ ಶೋ ಮಾಡುವ ಮೂಲಕ ಮತಯಾಚನೆ ಮಾಡಿದರು.

Namma Challakere Local News
error: Content is protected !!