ಚಳ್ಳಕೆರೆ : ವಿಜ್ಞಾನ ನಗರಿ ಚಳ್ಳಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಭದ್ರ ಕೋಟೆ ಎಂಬ ಮಾತನ್ನು ಉಸಿ ಮಾಡಲು ಕಳೆದ ಹತ್ತು ವರ್ಷಗಳಿಂದ ಕ್ಷೇತ್ರದಲ್ಲಿ ಬೀಡು ಬಿಟ್ಟ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಈ ಬಾರಿ ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ.
ಅದರಂತೆ ಇಂದು ಕ್ಷೇತ್ರದ ಪರುಶುರಾಂಪುರ ಗ್ರಾಮದಲ್ಲಿ ಕೊಲ್ಲಾಪುರದಮ್ಮ ದೇವಿಗೆ ಪೂಜೆ ಸಲ್ಲಿಸಿ ನಂತರ ಪ್ರಚಾರದಲ್ಲಿ ತೊಡಗಿದ ಅವರು
ಕ್ಷೇತ್ರದ ವಿವಿಧ ಗ್ರಾಮಗಳಿಗೆ ತೆರಳಿ ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆಗಳನ್ನು ಮತದಾರರಿಗೆ ಹೇಳುವುದರ ಮೂಲಕ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವಿಗಾಗಿ ಮತದಾರರ ಓಲೈಕೆಯಲ್ಲಿ ನಿರತರಾಗಿದ್ದಾರೆ
ಅದರಂತೆ ತಾಲೂಕು ಅಧ್ಯಕ್ಷ ಪಿ.ತಿಪ್ಪೆಸ್ವಾಮಿ ಹಾಗೂ ಇತರ ಹಲವು ಮುಖಂಡರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಹಲವು ಕಾರ್ಯಕರ್ತರು, ಮುಖಂಡರು ಪಕ್ಷ ಸೇರ್ಪಡೆಯಾಗುವುದು ಕಂಡು ಬಂದಿತು ಇನ್ನೂ ಗ್ರಾಮದಲ್ಲಿ ಅಭ್ಯರ್ಥಿ ರವೀಶ್ ಕುಮಾರ್ ಎಂಟ್ರಿ ಕೊಡುತ್ತಿದ್ದಂತೆ ಮಹಿಳೆಯರು ಆರತಿ ಬೆಳಗಿ ಆತ್ಮೀಯವಾಗಿ ಬರಮಾಡಿಕೊಳ್ಳುತ್ತಾರೆ ಈಗೇ ಕ್ಷೇತ್ರದಲ್ಲಿ ಭರ್ಜರಿ ಕ್ಯಾಂಪೇನ್ ನಡೆಸುತ್ತಿರು ರವೀಶ್ ಕುಮಾರ್ ಹಲವರು ಸಾಥ್ ನೀಡುತ್ತಿದ್ದಾರೆ.
ಇನ್ನೂ ಮಾಧ್ಯಮದೊಂದಿಗೆ ಮಾತನಾಡಿದ ಅಭ್ಯರ್ಥಿ ಎಂ.ರವೀಶ್ ಕುಮಾರ್, ಈಡೀ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ಶತ ಸಿದ್ದ ಇನ್ನೂ ಕ್ಷೇತ್ರದಲ್ಲಿ ಕೂಡ ಜೆಡಿಎಸ್ ಗೆಲುವು ನಿಶ್ಚಿತ, ಆದ್ದರಿಂದ ಕಳೆದ ೨೦೧೮ರಲ್ಲಿ ಮತದಾರರು ಬೆಂಬಲ ತೋರಿಸಿದ್ದರು ಆದೇ ರೀತಿಯಲಿ ಈ ಬಾರಿ ೨೦೨೩ಕ್ಕೆ ಹೆಚ್ಚಿನ ಬೆಂಬಲ ತೋರಿಸಿ ನಿಮ್ಮ ಸೇವೆಗೆ ನಾನು ಸಿದ್ದ ಎಂದು ಹೇಳಿದರು.
ಇನ್ನೂ ಕಾಂಗ್ರೇಸ್ ಶಾಸಕರ ಬಯಲು ಸೀಮೆಯಲ್ಲಿ ಅಭಿವೃದ್ದಿ ಎಂಬುದು ಮರೀಚಿಕೆಯಾಗಿದೆ ಆದ್ದರಿಂದ ರೈತರ ಹಿತ ದೃಷ್ಠಿಯಿಂದ ವೇದಾವತಿ ನದಿ ಪಾತ್ರದ ಮೂಲಕ ವಾಣಿ ವಿಲಾಸ ಸಾಗರದ ಮೂಲಕ ನೀರು ಬಿಡುವ ಮಹತ್ವದ ಕಾರ್ಯಕ್ಕೆ ನಮ್ಮ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಂಕಿತ ಹಾಕಿದ್ದರು ಆದ್ದರಿಂದ ರೈತರ ಪಕ್ಷ ಎಂದರೆ ಅದು ಜೆಡಿಎಸ್ ಎನ್ನುವ ಮಾತುಗಳು ಕೇಳಿಬರುತ್ತಿವೆ ಆದ್ದರಿಂದ ಈ ಬಾರಿ ಜೆಡಿಎಸ್ಗೆ ಗೆಲುವು ಖಚಿತ ಎಂದರು.
ಈದೇ ಸಂಧರ್ಭದಲ್ಲಿ ತಾಲೂಕು ಅಧ್ಯಕ್ಷ ಪಿ.ತಿಪ್ಪೆಸ್ವಾಮಿ, ಇತರರು ಇದ್ದರು.